ಕಲರ್ಸ್ ಕನ್ನಡದಲ್ಲಿ ಜೂನ್ 4ರಿಂದ ನಂದ ಗೋಕುಲ ಧಾರಾವಾಹಿ ಪ್ರಸಾರ

Published : Jun 02, 2025, 04:44 PM IST
Nanda

ಸಾರಾಂಶ

ಮಕ್ಕಳನ್ನು ಹೀರೋ ಮಾಡೋಕೆ ಹೋರಾಡುವ ಅಪ್ಪನ ಕತೆಯನ್ನು ಒಳಗೊಂಡ ‘ನಂದಗೋಕುಲ’ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಜೂನ್ 4 ಬುಧವಾರ ದಿಂದ ರಾತ್ರಿ 9ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.

 ಸಿನಿವಾರ್ತೆ

ಮಕ್ಕಳನ್ನು ಹೀರೋ ಮಾಡೋಕೆ ಹೋರಾಡುವ ಅಪ್ಪನ ಕತೆಯನ್ನು ಒಳಗೊಂಡ ‘ನಂದಗೋಕುಲ’ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಜೂನ್ 4 ಬುಧವಾರ ದಿಂದ ರಾತ್ರಿ 9ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.

 ಬಣ್ಣ ಟಾಕೀಸ್ ನಿರ್ಮಿಸುತ್ತಿರುವ ‘ನಂದ ಗೋಕುಲ’ ಧಾರಾವಾಹಿಯ ತಾರಾಗಣದಲ್ಲಿ ಅರವಿಂದ್‌ ರಾವ್‌, ಅಮೃತಾ ನಾಯ್ಡು, ರವಿ ಚೇತನ್‌, ರಘು ಮಂಡ್ಯ, ಅಭಿಷೇಕ್‌ ದಾಸ್‌, ಯಶವಂತ್‌, ವಿಜಯ್‌ ಚಂದ್ರ, ಊರ್ಜಿತ ವಲ್ತಾಜೆ, ಅರ್ಚನಾ ಗಾಯಕ್ವಾಡ್‌, ನವ್ಯಾ, ಮೇಘಾ, ಕೃಷ್ಣಪ್ರಿಯ, ಶೈಲಜಾ ಮುಂತಾದವರು ಇದ್ದಾರೆ. ತಲೆಮಾರುಗಳ ನಡುವಿನ ತಲ್ಲಣಗಳನ್ನು ಹೇಳುವ ಕುಟುಂಬದ ಪ್ರತಿಯೊಬ್ಬರೂ ಮೆಚ್ಚುವ ಕತೆ ಇದು ಎಂದು ಕಲರ್ಸ್‌ ಕನ್ನಡ ಹೇಳಿಕೊಂಡಿದೆ. ಅರವಿಂದ್‌ ರಾವ್‌, ‘ಒಂದು ಒಳ್ಳೆಯ ಕತೆ ಎನ್ನುವ ಕಾರಣಕ್ಕೆ ಈ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡು. ಮನರಂಜನೆ ಜತೆಗೆ ಕೌಟುಂಬಿಕ ಮೌಲ್ಯಗಳನ್ನು ಹೇಳುವ ಧಾರಾವಾಹಿ ಇದು’ ಎಂದರು. ಶ್ರವಂತ್ ಈ ದಾರಾವಾಹಿಯವನ್ನು ನಿರ್ದೇಶಿಸುತ್ತಿದ್ದಾರೆ.

PREV
Read more Articles on

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ