ರಾಮಾಯಣಕ್ಕೆ ಬಂದ ಮತ್ತೊಬ್ಬ ಹಾಲಿವುಡ್‌ ಸಾಹಸ ನಿರ್ದೇಶಕ

Published : Jun 02, 2025, 04:40 PM IST
Yash collaborates with Hollywood stunt director Guy Norris for Ramayana

ಸಾರಾಂಶ

ನಟ ಯಶ್‌ ಅವರ ‘ರಾಮಾಯಣ’ ಚಿತ್ರಕ್ಕೆ ಮತ್ತೊಬ್ಬ ಹಾಲಿವುಡ್‌ ಸಾಹಸ ನಿರ್ದೇಶಕನ ಆಗಮನ ಆಗಿದೆ

ಸಿನಿವಾರ್ತೆ

ನಟ ಯಶ್‌ ಅವರ ‘ರಾಮಾಯಣ’ ಚಿತ್ರಕ್ಕೆ ಮತ್ತೊಬ್ಬ ಹಾಲಿವುಡ್‌ ಸಾಹಸ ನಿರ್ದೇಶಕನ ಆಗಮನ ಆಗಿದೆ. ಈ ಮೊದಲು ಜೆ ಜೆ ಪೆರ್ರಿ ಬಂದು ಹೋಗಿದ್ದರು. ಈಗ ‘ಮ್ಯಾಡ್ ಮ್ಯಾಕ್ಸ್’, ‘ಫ್ಯೂರಿ ರೋಡ್’ ಹಾಗೂ ‘ದಿ ಸುಸೈಡ್‌ ಸ್ಕ್ವಾಡ್‌’ ಚಿತ್ರಗಳ ಖ್ಯಾತಿಯ ಗೈ ನೋರಿಸ್‌ ಆಗಮಿಸಿದ್ದು, ಚಿತ್ರೀಕರಣ ಸೆಟ್‌ನಲ್ಲಿ ಯಶ್‌ ಜತೆಗೆ ಸಾಹಸ ಕಂಪೋಸ್‌ ಮಾಡುತ್ತಿರುವ ಪ್ಲಾನಿಂಗ್‌ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

 ಈಗಾಗಲೇ ಚಿತ್ರೀಕರಣಕ್ಕಾಗಿ ಹಾಕಿರುವ ಬೃಹತ್‌ ಸೆಟ್‌ಗಳಲ್ಲಿ ಆಕ್ಷನ್‌ ಸೀಕ್ವೆನ್ಸ್‌ಗಳನ್ನು ಗೈ ನೋರಿಸ್‌ ನಿರ್ದೇಶನದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ರಾವಣನಾಗಿ ನಟಿಸುತ್ತಿರುವ ಯಶ್‌ ಅವರ ಸಾಹಸ ದೃಶ್ಯಗಳು ದೊಡ್ಡ ಮಟ್ಟದಲ್ಲಿ ಮೂಡಿ ಬರಲಿವೆ ಎನ್ನಲಾಗುತ್ತಿದೆ. 60 ರಿಂದ 70 ದಿನಗಳ ಕಾಲ‌ ರಾವಣನ ಪಾತ್ರದ ಚಿತ್ರೀಕರಣ ನಡೆಯಲಿದೆ.

ಇನ್ನೂ ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್‌ ಕಪೂರ್‌ ಅಭಿನಯಿಸುತ್ತಿದ್ದಾರೆ. ನಿತೇಶ್‌ ತಿವಾರಿ ನಿರ್ದೇಶನ‌, ನಮಿತ್‌ ಮಲ್ಹೋತ್ರಾ ಅವರು ಯಶ್‌ ಜತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ರಾಮಾಯಣ-1’ ಚಿತ್ರವು ಮುಂದಿನ ವರ್ಷ 2026ರ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲಿದೆ. ಇದರ ಪಾರ್ಟ್‌ 2 ಕತೆ 2027ಕ್ಕೆ ತೆರೆಗೆ ಬರಲಿದೆ.

PREV
Read more Articles on

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ