ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ ದೇವರಕೊಂಡ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿನ ಐಟಿಸಿ ಮೆಮೆಂಟೋಸ್ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ವಿವಾಹ ಸಮಾರಂಭದ ವಿಧಿ ವಿಧಾನಗಳು ನೆರವೇರಿವೆ.
ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ ದೇವರಕೊಂಡ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿನ ಐಟಿಸಿ ಮೆಮೆಂಟೋಸ್ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ನಡೆದ ವಿವಾಹ ಸಮಾರಂಭದಲ್ಲಿ ಮೊದಲಿಗೆ ಪಾರಂಪರಿಕ ತೆಲುಗು ಸಂಪ್ರದಾಯದ ಪ್ರಕಾರ ಮದುವೆ ವಿಧಿ ವಿಧಾನಗಳು ನೆರವೇರಿವೆ.
ಆಧುನಿಕತೆಯ ಸೋಂಕಿಲ್ಲದೆ ಭಾರತೀಯ ಸಂಸ್ಕೃತಿ ಪ್ರಕಾರವೇ ವಿವಾಹ
ಆಧುನಿಕತೆಯ ಸೋಂಕಿಲ್ಲದೆ ಭಾರತೀಯ ಸಂಸ್ಕೃತಿ ಪ್ರಕಾರವೇ ವಿವಾಹವಾಗಲು ಬಯಸಿದ ಈ ಜೋಡಿ, ಮದುವೆಗಾಗಿ ಆಂಧ್ರದ ಪುರೋಹಿತರನ್ನೇ ಉದಯಪುರಕ್ಕೆ ಕರೆಸಿಕೊಂಡಿದ್ದರು. ಆಪ್ತ ಬಳಗದ ಗಣ್ಯರು, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಬೆಳಗ್ಗೆ 10.10ಕ್ಕೆ ಮಾಂಗಲ್ಯ ಧಾರಣೆ ಶಾಸ್ತ್ರ ವಿಧ್ಯುಕ್ತವಾಗಿ ನೆರವೇರಿತು. ಮುಂಜಾನೆಯೇ ವಿವಾಹ ವಿಧಿಗಳು ಆರಂಭವಾಗಿದ್ದವು. ವಿವಾಹದ ನಂತರ ಪಾಪರಾಜಿಗಳಿಗೆ, ಮಕ್ಕಳಿಗೆ ಸ್ವೀಟ್ ಬಾಕ್ಸ್ ಹಂಚಲಾಗಿದೆ.
ಸಂಜೆ ಕೊಡವ ಸಂಪ್ರದಾಯದ ವಿಧಿ ವಿಧಾನಗಳ ಮೂಲಕ ಮತ್ತೊಮ್ಮೆ ವಿವಾಹ
ಸಂಜೆ ಕೊಡವ ಸಂಪ್ರದಾಯದ ವಿಧಿ ವಿಧಾನಗಳ ಮೂಲಕ ಮತ್ತೊಮ್ಮೆ ವಿವಾಹ ವಿಧಿಗಳು ನೆರವೇರಿವೆ. ಹೀಗೆ ಒಂದೇ ದಿನ ಎರಡು ಸಂಪ್ರದಾಯಗಳಲ್ಲಿ ಎರಡೆರಡು ಬಾರಿ ವಿವಾಹವಾಗುವುದು ಬಲು ಅಪರೂಪ.
ಸಂಜೆ 5.30ರಿಂದ ಗೋಧೂಳಿ ಲಗ್ನದಲ್ಲಿ ನಡೆದ ಕೊಡವ ಶೈಲಿಯ ವಿವಾಹದಲ್ಲಿ ರಶ್ಮಿಕಾ ಕೊಡವ ಶೈಲಿಯ ಸೀರೆ, ತಲೆಗೆ ವಸ್ತ್ರ, ಸಾಂಪ್ರದಾಯಿಕ ಆಭರಣಗಳಲ್ಲಿ ಕಂಗೊಳಿಸಿದರೆ, ವಿಜಯ ದೇವರಕೊಂಡ ಕೊಡಗಿನ ವರನ ಗೆಟಪ್‌ನಲ್ಲಿ ಮದುವೆ ಸಂಪ್ರದಾಯದಲ್ಲಿ ಪಾಲ್ಗೊಂಡರು ಎನ್ನಲಾಗಿದೆ. ಗಂಗಾಪೂಜೆಯ ಬಳಿಕ ಸಮ್ಮಂದ ಕೊಡಪ ಅಂದರೆ ಮದುಮಗಳನ್ನು ವರನ ಕುಟುಂಬಕ್ಕೆ ಸೇರ್ಪಡೆಗೊಳಿಸುವ ಸಂಪ್ರದಾಯವನ್ನು ಇಲ್ಲಿ ಆಚರಿಸಲಾಗಿದೆ. ಆ ಬಳಿಕ ಕೊಡವ ಜಾನಪದ ಹಾಡು, ನೃತ್ಯಗಳು ಕಳೆ ಏರಿಸಿವೆ ಎನ್ನಲಾಗಿದೆ.
ವಿವಾಹದಲ್ಲಿ ನಿರ್ದೇಶಕರಾದ ಸಂದೀಪ್ ರೆಡ್ಡಿ ವಂಗಾ, ರಾಹುಲ್ ರವೀಂದ್ರನ್, ತರುಣ್ ಭಾಸ್ಕರ್, ನಟಿ ಈಶಾ ರೆಬ್ಬಾ ಹಾಗೂ ಆಪ್ತರು ಭಾಗಿಯಾಗಿದ್ದರು.


