-ಉದ್ಯೋಗಿ ಇಮೇಲ್‌ಗೆ ಮಾಲ್‌ವೇರ್ ಕಳಿಸಿ ದೋಖಾ-ಗ್ರಾಹಕರ ಖಾತೆ ವಿವರ, ಸಾಲದ ದಾಖಲೆ ಸೋರಿಕೆ-ಕದ್ದ ಡೇಟಾ ಡಾರ್ಕ್‌ವೆಬ್‌ನಲ್ಲಿ ಪ್ರಕಟಿಸಿದ ಖದೀಮರು-ಬ್ಯಾಂಕ್‌ನ ಮುಖ್ಯ ವ್ಯವಸ್ಥೆ ಸುರಕ್ಷಿತ: ಬ್ಯಾಂಕ್ ಸ್ಪಷ್ಟನೆಮುಂಬೈ: ಬ್ಯಾಂಕ್ ಆಫ್ ಬರೋಡಾದಲ್ಲಿ ಗಂಭೀರ ಸೈಬರ್ ಕಳ್ಳತನವಾಗಿದ್ದು, ಹ್ಯಾಕರ್‌ಗಳು ಬ್ಯಾಂಕ್‌ನ ಸುಮಾರು 1ಟಿಬಿ (ಟೆರಾಬೈಟ್) ಸೂಕ್ಷ್ಮ ಡೇಟಾವನ್ನು ಕದ್ದು ಡಾರ್ಕ್ ವೆಬ್‌ನಲ್ಲಿ ಉಚಿತವಾಗಿ ಹಂಚಿಕೊಂಡ ಆತಂಕಕಾರಿ ಬೆಳವಣಿಗೆ ನಡೆದಿದೆ.ಈ ಡೇಟಾದಲ್ಲಿ ಗ್ರಾಹಕರ ಖಾತೆ ವಿವರಗಳು, ಆಧಾರ್ ಸಂಖ್ಯೆಗಳು, ಸಾಲದ ದಾಖಲೆಗಳು ಮತ್ತು ಆಂತರಿಕ ವರದಿಗಳು ಸೇರಿವೆ. ಆದರೆ ಬ್ಯಾಂಕ್‌ನ ಮುಖ್ಯ ವ್ಯವಸ್ಥೆ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ತಿಳಿಸಿದೆ.ವಂಚನೆ ನಡೆದಿದ್ದು ಹೇಗೆ?:ಹ್ಯಾಕರ್‌ಗಳು ಮೊದಲು ಬ್ಯಾಂಕ್‌ನ ಉದ್ಯೋಗಿಯೊಬ್ಬರ ಇಮೇಲ್ ಖಾತೆಯನ್ನು ವಶಕ್ಕೆ ಪಡೆದಿದ್ದಾರೆ. ಫಿಷಿಂಗ್ ಇಮೇಲ್ ಅಥವಾ ಮಾಲ್‌ವೇರ್ ಮೂಲಕ ಉದ್ಯೋಗಿಯ ಲಾಗಿನ್ ವಿವರಗಳನ್ನು ಪಡೆದುಕೊಂಡು ಇಮೇಲ್ ಖಾತೆಗೆ ಪ್ರವೇಶ ಪಡೆದಿದ್ದಾರೆ. ನಂತರ ಆ ಉದ್ಯೋಗಿಗೆ ಲಭ್ಯವಿದ್ದ ಅನೇಕ ಸೂಕ್ಷ್ಮ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.ಇದರಲ್ಲಿ ಬ್ಯಾಂಕ್‌ನ ಶಾಖೆಗಳಿಂದ ಕಳಿಸಲಾದ ಆಂತರಿಕ ಇಮೇಲ್‌ಗಳು, ಲೋನ್ ಅಪ್ರೈಸಲ್ ದಾಖಲೆಗಳು, ಆಡಿಟ್ ವರದಿಗಳು, ಗ್ರಾಹಕರ ಅರ್ಜಿ ಫಾರ್ಮ್‌ಗಳು, ವಿಚಕ್ಷಣ ತನಿಖೆ ವಿವರಗಳು ಮತ್ತು ಇತರ ಮುಖ್ಯ ಮಾಹಿತಿಗಳು ಸೇರಿವೆ. ಈ ರೀತಿ ಸುಮಾರು 1 ಟಿಬಿ ಡೇಟಾವನ್ನು ಸಂಗ್ರಹಿಸಿ ಡಾರ್ಕ್ ವೆಬ್‌ನಲ್ಲಿ ಪ್ರಕಟಿಸಿದ್ದಾರೆ ಎಂದು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ಹೇಳಿಕೆ ತಿಳಿಸಿದೆ.ಮುಖ್ಯ ವ್ಯವಸ್ಥೆ ಸುರಕ್ಷಿತ:‘ಬ್ಯಾಂಕ್‌ನ ಕೋರ್ ಬ್ಯಾಂಕಿಂಗ್ ಸಿಸ್ಟಂಗಳಿಗೆ (ಮುಖ್ಯ ವ್ಯವಹಾರ ವ್ಯವಸ್ಥೆ) ಯಾವುದೇ ಹಾನಿಯಾಗಿಲ್ಲ. ಅವು ಸಂಪೂರ್ಣ ಸುರಕ್ಷಿತವಾಗಿವೆ. ಆದರೆ ಉದ್ಯೋಗಿಯ ಇಮೇಲ್ ಮೂಲಕ ಲಭ್ಯವಾದ ಕೆಲವು ಡೇಟಾ ಮಾತ್ರ ಹ್ಯಾಕ್ ಆಗಿದೆ. ಈ ಘಟನೆಯನ್ನು ಪರಿಶೀಲಿಸಲು ಸಮಗ್ರ ತನಿಖೆ ಪ್ರಾರಂಭಿಸಿದ್ದೇವೆ. ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ.ಟ್ರಿಪಲ್‌ಎಕ್ಸ್ ಕೈಚಳಕ ಶಂಕೆ:ಈ ದಾಳಿಯ ಹಿಂದೆ ಟ್ರಿಪಲ್ ಎಕ್ಸ್ ಎಂಬ ಹ್ಯಾಕರ್ ಗುಂಪು ಇರಬಹುದು ಎಂದು ಸೈಬರ್ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ‘ಈ ಗುಂಪು ಮೇ ತಿಂಗಳಲ್ಲಿ ಇಂಡೋನೇಷ್ಯಾದ ದೊಡ್ಡ ಬ್ಯಾಂಕ್ ಒಂದರ 2 ಟಿಬಿ ಡೇಟಾವನ್ನು ಕದ್ದ ಆರೋಪವಿದೆ. ಜು.25ರಂದು ಡಾರ್ಕ್ ವೆಬ್ ಮಾನಿಟರಿಂಗ್ ಸೈಟ್‌ಗಳಲ್ಲಿ ಈ ಸೋರಿಕೆ ಮೊದಲು ಕಂಡುಬಂತು. ಹ್ಯಾಕರ್‌ಗಳು ಕೆಲವು ದಾಖಲೆಗಳ ಮಾದರಿಗಳನ್ನು ಸಹ ಪ್ರಕಟಿಸಿದ್ದಾರೆ’ ಎಂದು ಸಾಫ್ಟ್‌ವೇರ್ ಎಂಜಿನಿಯರ್ ಶ್ರೀಕಾಂತ್ ಲಕ್ಷ್ಮಣನ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ಸಿಸ್ಟಂ ಹ್ಯಾಕ್: 1 ಟಿಬಿ ಡೇಟಾ ಲೀಕ್!
ಬ್ಯಾಂಕ್ ಆಫ್ ಬರೋಡಾದಲ್ಲಿ ಗಂಭೀರ ಸೈಬರ್ ಕಳ್ಳತನವಾಗಿದ್ದು, ಹ್ಯಾಕರ್‌ಗಳು ಬ್ಯಾಂಕ್‌ನ ಸುಮಾರು 1ಟಿಬಿ (ಟೆರಾಬೈಟ್) ಸೂಕ್ಷ್ಮ ಡೇಟಾವನ್ನು ಕದ್ದು ಡಾರ್ಕ್ ವೆಬ್‌ನಲ್ಲಿ ಉಚಿತವಾಗಿ ಹಂಚಿಕೊಂಡ ಆತಂಕಕಾರಿ ಬೆಳವಣಿಗೆ ನಡೆದಿದೆ.
Latest Videos
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.