ಕರ್ತವ್ಯದ ವೇಳೆ ಟವಲ್, ಬನಿಯನ್‌ ಧರಿಸಿದ್ದ ಪೊಲೀಸ್‌ ಎತ್ತಂಗಡಿ

KannadaprabhaNewsNetwork | Published : Nov 9, 2023 1:02 AM

ಸಾರಾಂಶ

ಉತ್ತರ ಪ್ರದೇಶದ ಕೌಶಾಬಿಯಂಬಲ್ಲಿ ಪೊಲೀಸ್‌ ಅಧಿಕಾರಿಯೊಬ್ಬ ಕರ್ತವ್ಯದ ವೇಳೆ ಮನೆಯಲ್ಲಿ ಇರುವಂತೆ ಟವಲ್‌, ಬನಿಯನ್‌ ಧರಿಸಿ ಜನರ ಅಹವಾಲು ಸ್ವೀಕರಿಸಿದ್ದಾರೆ.

ಪೊಲೀಸ್‌ ಅಧಿಕಾರಿಗಳೆಂದರೆ ಎತ್ತರದ ನಿಲುವು ಇಸ್ತ್ರಿ ಮಾಡಿದ ಅಂಗಿ, ಪ್ಯಾಂಟ್‌ ಟೋಪಿ ಹೀಗೆ ಅವರನ್ನು ನೋಡಿದರೆ ಎಂತಹ ಕಳ್ಳನೇ ಆದರೂ ಒಮ್ಮೆ ಗೌರವ ಕೊಡುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಕೌಶಾಬಿಯಂಬಲ್ಲಿ ಪೊಲೀಸ್‌ ಅಧಿಕಾರಿಯೊಬ್ಬ ಕರ್ತವ್ಯದ ವೇಳೆ ಮನೆಯಲ್ಲಿ ಇರುವಂತೆ ಟವಲ್‌, ಬನಿಯನ್‌ ಧರಿಸಿ ಜನರ ಅಹವಾಲು ಸ್ವೀಕರಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲೆಯ ಎಸ್‌ಪಿ ಬ್ರಿಜೇಶ್‌ ಕುಮಾರ್‌, ಎಸ್‌ಐ ರಾಮ್‌ ನರೈನ್‌ ಸಿಂಗ್‌ರನ್ನು ಎತ್ತಂಗಡಿ ಮಾಡಿದ್ದಾರೆ. ಜೊತೆಗೆ ಇದರ ತನಿಖೆ ನಡೆಸುವಂತೆ ಅಧಿಕಾರಿಗಳನ್ನು ನೇಮಿಸಿದ್ದಾರೆ.

Share this article