ಆ.28ಕ್ಕೆ ಉದ್ಯಮಿ ಜೊತೆ ಖ್ಯಾತ ನಿರೂಪಕಿ ಅನುಶ್ರೀ ಮದುವೆ

Published : Jul 18, 2025, 10:49 AM IST
anchor anushree

ಸಾರಾಂಶ

ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ವಿವಾಹ ಆ. 28ರಂದು ಜರುಗಲಿದೆ ಎಂದು ಮೂಲಗಳು ತಿಳಿಸಿವೆ. ಅವರ ವಿವಾಹ ಕೊಡಗು ಮೂಲದ ಉದ್ಯಮಿ ರೋಷನ್‌ ಅವರೊಂದಿಗೆ ನಿಶ್ಚಯವಾಗಿದೆ ಎನ್ನಲಾಗುತ್ತಿದೆ.

ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ವಿವಾಹ ಆ. 28ರಂದು ಜರುಗಲಿದೆ ಎಂದು ಮೂಲಗಳು ತಿಳಿಸಿವೆ. ಅವರ ವಿವಾಹ ಕೊಡಗು ಮೂಲದ ಉದ್ಯಮಿ ರೋಷನ್‌ ಅವರೊಂದಿಗೆ ನಿಶ್ಚಯವಾಗಿದೆ ಎನ್ನಲಾಗುತ್ತಿದೆ. 

ಈ ಕುರಿತು ಅವರಿಂದ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಾಗಿದೆ. ಮದುವೆ ಸ್ಥಳ, ಸಮಯ, ಮದುವೆ ಆಗುತ್ತಿರುವ ಹುಡುಗನ ವಿವರಗಳು ಇನ್ನಷ್ಟೇ ಗೊತ್ತಾಗಬೇಕಿದೆ.

ಕಿರುತೆರೆಯಲ್ಲಿ ಸಾಕಷ್ಟು ಶೋಗಳಿಗೆ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿರುವ ಅನುಶ್ರೀ, ‘ರಿಂಗ್‌ ಮಾಸ್ಟರ್‌’, ‘ಉಪ್ಪು ಹುಳಿ ಖಾರ’ ಹಾಗೂ ‘ಬೆಂಕಿಪಟ್ಣ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಿಂದ ಅಪಾರ ಜನಪ್ರೀತಿ ಗಳಿಸಿರುವ ಅವರಿಗೆ ಬಹಳಷ್ಟು ಮಂದಿ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳುತ್ತಿದ್ದರು. ಆ ಪ್ರಶ್ನೆಗೆ ಉತ್ತರ ದೊರಕುವ ಸಮಯ ಹತ್ತಿರ ಬಂದಿದೆ.

PREV
Read more Articles on

Latest Stories

ದರ್ಶನ್‌ಗೆ ಯುರೋಪ್ ವೀಸಾ ನಿರಾಕರಣೆ : ಸ್ವಿಟ್ಜರ್‌ಲ್ಯಾಂಡ್‌ ಬದಲು ಥೈಲ್ಯಾಂಡಿಗೆ ಡೆವಿಲ್
ರವಿಶಂಕರ್‌ ಗುರೂಜಿ ಬಯೋಪಿಕ್‌ನಲ್ಲಿ ನಟಿಸಲು ವಿಕ್ರಾಂತ್‌ ಮಾಸಿ ತಯಾರಿ
ಶಿವಾಯ ಮನಃ : ಜನಗಳ ಮನ ಗೆದ್ದ ರಾಜರತ್ನನಿಗೆ 63