ಡೆಲಿವರಿ ಬಾಯ್ಸ್ ಬದುಕು ಬವಣೆಯ ಚಿತ್ರ

KannadaprabhaNewsNetwork |  
Published : Dec 16, 2023, 02:01 AM ISTUpdated : Dec 16, 2023, 02:23 PM IST
ಸ್ನೇಹರ್ಷಿ | Kannada Prabha

ಸಾರಾಂಶ

ಡೆಲಿವರಿ ಬಾಯ್ ಸ್ನೇಹಿತನಿಗಾಗಿ ಹೀರೋ ಏನು ಮಾಡುತ್ತಾನೆ, ಆತನ ನೆವದಲ್ಲಿ ಡೆಲಿವರಿ ಬಾಯ್‌ಗಳ ಪರ ಹೇಗೆ ಹೋರಾಡುತ್ತಾನೆ ಅನ್ನೋದು ಸಿನಿಮಾದ ಒನ್‌ಲೈನ್.

ಸ್ನೇಹರ್ಷಿ

ತಾರಾಗಣ: ಕಿರಣ್ ನಾರಾಯಣ್‌, ಸಂಜನಾ ಬುರ್ಲಿ, ಸುಧಾ ಬೆಳವಾಡಿ, ರಂಗನಾಥ್ ಸಂಪತ್
ನಿರ್ದೇಶನ: ಕಿರಣ್ ನಾರಾಯಣ್ 

ರೇಟಿಂಗ್: 3

 

ಪ್ರಿಯಾ ಕೆರ್ವಾಶೆ

ಸ್ನೇಹಕ್ಕಾಗಿ ಜೀವ ಒತ್ತೆ ಇಟ್ಟು ಹೋರಾಡುವ ಯುವಕನ ಕಥೆ ‘ಸ್ನೇಹರ್ಷಿ’. ಸಿನಿಮಾ ಅಂದರೆ ಅದರಲ್ಲಿ ಪ್ರೇಮ, ರೊಮ್ಯಾನ್ಸ್, ಫೈಟ್, ಹಾಡು, ಮದರ್ ಸೆಂಟಿಮೆಂಟ್‌ ಇವೆಲ್ಲ ಇರಬೇಕು ಅನ್ನೋ ಥಿಯರಿಯನ್ನು ತಲೆಯಲ್ಲಿಟ್ಟುಕೊಂಡು ಅವನ್ನೂ ಸೇರಿಸಲಾಗಿದೆ. ಮಗ ಪೊಲೀಸ್ ಡಿಪಾರ್ಟ್‌ಮೆಂಟಿಗೆ ಸೇರಬೇಕು ಅನ್ನೋದು ತಾಯಿ ಪಾಯಿಂಟ್ ಪದ್ಮಾ ಆಸೆ. ಆದರೆ ಈ ಮಗನೋ ಪೊಲೀಸ್ ಜೇಬಿಂದಲೇ ದುಡ್ಡು ಹಾರಿಸಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಕಣ್ಣೀರು ಒರೆಸೋ ಕರುಣಾಮಯಿ. ಇಂಥಾ ಹುಡುಗನಿಗೆ ಐಸ್‌ಕ್ರೀಮಿನಂಥಾ ಹುಡುಗಿ ಮೇಲೆ ಜೋರಾಗಿಯೇ ಲವ್ವಾಗುತ್ತೆ.

ಇದು ಸಿನಿಮಾ ಕಥೆಯಾ ಅಂದರೆ ಖಂಡಿತಾ ಅಲ್ಲ! ಕಥೆ ಶುರು ಆಗ್ಬೇಕು ಅಂದರೆ ಇಂಟರ್‌ವಲ್ ಮುಗಿಯೋವರೆಗೂ ಕಾಯಬೇಕು, ಅಲ್ಲೀವರೆಗೆ ಈ ಲವ್ವಿ ಡವ್ವಿ ಎಂಟರ್‌ಟೇನ್‌ಮೆಂಟಿನ ಉಚಿತ ಪ್ಯಾಕೇಜು. ಎರಡನೇ ಭಾಗದಲ್ಲಿ ಡೆಲಿವರಿ ಬಾಯ್‌ ಬದುಕಿನ ಕಷ್ಟ, ಒದ್ದಾಟದ ದರ್ಶನ. ಡೆಲಿವರಿ ಬಾಯ್ ಸ್ನೇಹಿತನಿಗಾಗಿ ಹೀರೋ ಏನು ಮಾಡುತ್ತಾನೆ, ಆತನ ನೆವದಲ್ಲಿ ಡೆಲಿವರಿ ಬಾಯ್‌ಗಳ ಪರ ಹೇಗೆ ಹೋರಾಡುತ್ತಾನೆ ಅನ್ನೋದು ಸಿನಿಮಾದ ಒನ್‌ಲೈನ್. ಕಥೆಯಲ್ಲಿ, ಸಿನಿಮಾ ಮೇಕಿಂಗ್‌ನಲ್ಲಿ ಅಪಾರ ಕ್ರಿಯೇಟಿವಿಟಿ ನಿರೀಕ್ಷೆ ಬೇಡ. ಇಲ್ಲಿ ತೆಗೆದುಕೊಂಡಿರುವ ಸಬ್ಜೆಕ್ಟ್‌ ಕೊಂಚ ಹಳೆಯದು. ಆದರೆ ಈ ಸಮಸ್ಯೆ ಇಂದಿಗೂ ಇರುವ ಕಾರಣ ಪ್ರಸ್ತುತತೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಹೀರೋ ಫ್ರೆಂಡ್‌ ಡೆಲಿವರಿ ಬಾಯ್ ಪಾತ್ರ ಮಾಡಿದ ಕಲಾವಿದನ ನಟನೆ ಗಮನ ಸೆಳೆಯುತ್ತದೆ. ಸಂಜನಾ ಬುರ್ಲಿ ಪಾತ್ರ ಗ್ಲಾಮರ್‌ಗಷ್ಟೇ ಸೀಮಿತವಾದಂತಿದೆ. ವೀಕೆಂಡಲ್ಲಿ ಎಲ್ಲಾ ರಸಗಳ ಪ್ಯಾಕೇಜ್‌ನಂಥಾ ಸಿನಿಮಾ ನೋಡಬೇಕು ಅನ್ನೋರು ಸ್ನೇಹರ್ಷಿ ನೋಡಬಹುದು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಟಾಕ್ಸಿಕ್ ಚಿತ್ರದ ಕಾರ್‌ ಸೀನ್‌ನಲ್ಲಿರೋ ನಟೇಲಿ ಬರ್ನ್‌ ಯಾರು?
ರಾಕಿಂಗ್‌ ಸ್ಟಾರ್‌ ಮುಂದಿನ ನಿರ್ದೇಶಕರಿಗೆ ಗೀತು ಮೋಹನ್‌ದಾಸ್‌ ಕಿವಿಮಾತು