ಬಾಲಿವುಡ್‌ಗೆ ಎಂಟ್ರಿ ಕೊಡಲಿರುವ ಶ್ರೀಲೀಲಾ

KannadaprabhaNewsNetwork |  
Published : Jun 26, 2024, 12:36 AM IST
ಶ್ರೀಲೀಲಾ | Kannada Prabha

ಸಾರಾಂಶ

ಕಿಸ್‌ ಸಿನಿಮಾ ನಾಯಕಿ ಶ್ರೀಲೀಲಾ ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಡುವ ಸಿದ್ಧತೆಯಲ್ಲಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

ಬಾಲಿವುಡ್‌ ನಟ ವರಣ್‌ ಧವನ್‌ ನಟನೆಯ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಕನ್ನಡದ ಹುಡುಗಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ಜುಲೈ ಮಧ್ಯಭಾಗದಲ್ಲಿ ಸೆಟ್ಟೇರಲಿರುವ ಈ ಸಿನಿಮಾದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಲಿದೆ. ಇದೊಂದು ತ್ರಿಕೋನ ಪ್ರೇಮ ಕಥೆ ಇರುವ ಕಮರ್ಷಿಯಲ್‌ ಸಿನಿಮಾ ಎನ್ನಲಾಗಿದ್ದು, ಮೃಣಾಲ್‌ ಠಾಕೂರ್‌ ಜೊತೆಗೆ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ವರುಣ್‌ ತಂದೆ ಡೇವಿಡ್‌ ಧವನ್‌ ನಿರ್ದೇಶನದ ಈ ಸಿನಿಮಾವನ್ನು ರಮೇಶ್‌ ತೌರನಿ ನಿರ್ಮಿಸಲಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಗಣೇಶ್‌ ಚಿತ್ರರಂಗಕ್ಕೆ ಬಂದು 20 ವರ್ಷಗಳು
ಸಚಿವರು 3 ಕೋಟಿ ಅನುದಾನ ಚಿಂತಾಮಣಿಗೆ ಒಯ್ದಿದ್ದಾರೆಂಬುದು ಸುಳ್ಳು : ಭರಣಿ ವೆಂಕಟೇಶ್‌