ಬಸ್ ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಫಲಕದ ಸ್ಥಂಭಕ್ಕೆ ಡಿಕ್ಕಿ, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ

KannadaprabhaNewsNetwork |  
Published : Dec 23, 2023, 01:45 AM ISTUpdated : Dec 23, 2023, 01:46 AM IST
69 | Kannada Prabha

ಸಾರಾಂಶ

ಬಸ್ ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಫಲಕದ ಸ್ಥಂಭಕ್ಕೆ ಡಿಕ್ಕಿ, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಹುಣಸೂರುಬಸ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಪೊಲೀಸ್ ದೃಶ್ಯ ಫಲಕದ ಸ್ಥಂಭಕ್ಕೆ ಡಿಕ್ಕಿ ಹೊಡೆದು, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗೊಂಡಿರುವ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 275ರ ಎಪಿಎಂಸಿ ಬಳಿ ಇರುವ ದಿವಂಗತ ಡಿ. ದೇವರಾಜ ಅರಸು ಪ್ರತಿಮೆ ಬಳಿ ಜರುಗಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ಬಸ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಪೊಲೀಸ್ ದೃಶ್ಯ ಫಲಕದ ಸ್ಥಂಭಕ್ಕೆ ಡಿಕ್ಕಿ ಹೊಡೆದು, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗೊಂಡಿರುವ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 275ರ ಎಪಿಎಂಸಿ ಬಳಿ ಇರುವ ದಿವಂಗತ ಡಿ. ದೇವರಾಜ ಅರಸು ಪ್ರತಿಮೆ ಬಳಿ ಜರುಗಿದೆ.

ಕೇರಳ ರಾಜ್ಯದ ಸಾರಿಗೆ ಸಂಸ್ಥೆಯ ಬಸ್ ರಸ್ತೆ ಬದಿಯಲ್ಲಿದ್ದ ಪೊಲೀಸ್ ಇಲಾಖೆಯ ಸಂಚಾರಿ ನಿಯಮಗಳ ಮಾಹಿತಿಯ ದ್ರುಶ್ಯ ಫಲಕದ ಸ್ತಂಬಕ್ಕೆ ಡಿಕ್ಕಿ ಹೊಡೆದು ಬಸ್ಸಿನ ಮುಂಭಾಗ ಜಖಂ ಆಗಿದ್ದು, ಪ್ರಯಾಣಿಕರು ಅನಾಹುತದಿಂದ ಪಾರಾಗಿದ್ದಾರೆ..

ಅಪಘಾತದಿಂದ ಚಾಲಕ ಸಾಜು, ಪ್ರಯಾಣಿಕರಾದ ಮಹಮದ್ ಶಖಿಲ್, ಅಫ್ರೀದಾ, ಅಮಲ್, ಕನ್ಗೇಶ್, ಜ್ಯೋತಿಶ್ರೀ, ಮಹಮದ್, ಮಹಮದ್ ಸೊಹೇಲ್ ಹಾಗೂ ಇನ್ನಿತರರಿಗೆ ಸಣ್ಣಪುಟ್ಟ ಗಾಯಗಳಾಗಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಇನ್ಸ್‌ಪೆಕ್ಟರ್‌ ರ್ಧರ್ಮೇಂದ್ರ ಮತ್ತು ಸಿಬ್ಬಂದಿ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಪ್ರೇಕ್ಷಕನಿಗೆ ಸಿನಿಮಾಗೆ ರೇಟಿಂಗ್ ಕೊಡುವ ಹಕ್ಕಿಲ್ಲವೇ!
ಟಾಕ್ಸಿಕ್ ಚಿತ್ರದ ಕಾರ್‌ ಸೀನ್‌ನಲ್ಲಿರೋ ನಟೇಲಿ ಬರ್ನ್‌ ಯಾರು?