ದಿ ರೈಸ್‌ ಆಫ್‌ ಅಶೋಕದಲ್ಲಿ ನನ್ನ 3 ವರ್ಷಗಳ ಶ್ರಮ ಇದೆ: ನೀನಾಸಂ ಸತೀಶ್‌

Published : Jun 21, 2025, 11:21 AM IST
Ninasam Sathish

ಸಾರಾಂಶ

ನೀನಾಸಂ ಸತೀಶ್ ಜೂ.20ರಂದು ಹುಟ್ಟುಹಬ್ಬ ಆಚರಿಸಿದ್ದಾರೆ. ಅವರ ದಿ ರೈಸ್ ಆಫ್ ಅಶೋಕ ಚಿತ್ರೀಕರಣ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಅವರ ಜೊತೆ ಮಾತುಕತೆ.

  ಸಿನಿವಾರ್ತೆ

ನೀನಾಸಂ ಸತೀಶ್ ಜೂ.20ರಂದು ಹುಟ್ಟುಹಬ್ಬ ಆಚರಿಸಿದ್ದಾರೆ. ಅವರ ದಿ ರೈಸ್ ಆಫ್ ಅಶೋಕ ಚಿತ್ರೀಕರಣ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಅವರ ಜೊತೆ ಮಾತುಕತೆ.

- ಹಳ್ಳಿಯಲ್ಲಿ ಸಿನಿಮಾ ಕನಸು ಕಾಣುತ್ತ ಬೆಳೆದ ನಾನು ಒನ್‌ ಫೈನ್‌ ಡೇ ಸಿನಿಮಾ ಮಾಡಬೇಕು ಎಂಬ ಕನಸಿನಲ್ಲಿ ಗಾಂಧೀನಗರಕ್ಕೆ ಬಂದೆ. ಸವಾಲುಗಳ ಸರಮಾಲೆಗಳ ನಡುವೆಯೇ ಬೆಳೆದೆ. ಆ ಹಂತದಿಂದ ಈ ಹಂತದವರೆಗಿನ ಬದುಕು ಎಷ್ಟು ಚಾಲೆಂಜಿಂಗ್‌ ಆಗಿತ್ತೋ ಅಷ್ಟೇ ಸವಾಲಾಗಿದ್ದು ‘ರೈಸ್‌ ಆಫ್‌ ಅಶೋಕ’ ಸಿನಿಮಾವನ್ನು ಕೊನೆಮುಟ್ಟಿಸುವ ಕೆಲಸ.

- 70ರ ದಶಕ, ಮುಡಿಕಟ್ಟೆ ಅನ್ನೋ ಊರು. ಮುಡಿ ಕೊಡೋದಕ್ಕೆ ಬರುವ ಜನ, ಅದರಿಂದಲೇ ಬದುಕು ಕಟ್ಟಿಕೊಳ್ಳುವ ಸವಿತಾ ಸಮುದಾಯ. ಅವರ ಪ್ರತಿನಿಧಿಯಂಥಾ ಅಶೋಕ ತನ್ನ ಜನರಿಗಾಗಿ ಹೇಗೆ ಕ್ರಾಂತಿಕಾರಿಯಾಗಿ ಬೆಳೆಯುತ್ತಾನೆ ಅನ್ನುವ ಅಂಶವೇ ‘ದಿ ರೈಸ್‌ ಆಫ್‌ ಅಶೋಕ’ ಸಿನಿಮಾದ ಹೈಲೈಟ್‌. ನೈಜ ಘಟನೆಗಳಿಂದಲೂ ಪ್ರೇರಣೆ ಪಡೆಯಲಾಗಿದೆ. ಒಮ್ಮೆ ಸಿನಿಮಾ ನೋಡಲು ಕೂತರೆ ಕೊನೆಯವರೆಗೂ ಅಲ್ಲಾಡಲ್ಲ, ಅಷ್ಟು ತೀವ್ರವಾಗಿ ಈ ಚಿತ್ರ ಪ್ರೇಕ್ಷಕನನ್ನು ಹಿಡಿದಿಡುತ್ತದೆ.

- ಸದ್ಯಕ್ಕೀಗ ಸಿನಿಮಾದ ಪೋಸ್ಟ್‌ಪ್ರೊಡಕ್ಷನ್‌ ಕೆಲಸ ಭರದಿಂದ ನಡೆಯುತ್ತಿದೆ. ಆಗಸ್ಟ್‌ ಹೊತ್ತಿಗೆ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಸಿನಿಮಾ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಏಕೆಂದರೆ ಸಿನಿಮಾ ಕಥೆ ಅಷ್ಟು ಗಟ್ಟಿಯಾಗಿದೆ.

- ಇದರ ಜೊತೆಗೆ ‘ಅಯೋಗ್ಯ 2’ ಸಿನಿಮಾವೂ ಟೇಕಾಫ್‌ ಆಗ್ತಿದೆ. ಜುಲೈಯಲ್ಲಿ ಆ ಸಿನಿಮಾ ಶೂಟ್‌ನಲ್ಲಿ ಭಾಗಿಯಾಗುವೆ.

 

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಬ್ಯುಸಿ ಶೆಡ್ಯೂಲ್‌ ಮಧ್ಯೆ ಸ್ಟಾರ್‌ಗಳ ಫ್ಯಾಮಿಲಿ ಟೈಮ್‌
ಜ.3ರಂದು ಕುಂದಾಪುರದಲ್ಲಿ ರಿಷಭೋತ್ಸವ - ರಿಷಬ್‌ ಶೆಟ್ಟಿಗೆ ಹುಟ್ಟೂರಿನ ಗೌರವ