ಅಣ್ಣಾವ್ರ ಸಿನಿಮಾ ಶೂಟಿಂಗ್ ನಡೆದ ಜಾಗದಲ್ಲೇ ರಜನಿಕಾಂತ್ ಚಿತ್ರದ ಶೂಟಿಂಗ್‌

Published : Jun 21, 2025, 11:18 AM IST
Rajanikanth

ಸಾರಾಂಶ

ಮೈಸೂರಿನ ಹುಲ್ಲೇನಹಳ್ಳಿಯಲ್ಲಿ ರಜನಿಕಾಂತ್‌ ನಟನೆಯ ‘ಜೈಲರ್‌ 2’ ಸಿನಿಮಾದ ಶೂಟಿಂಗ್‌ ಆರಂಭವಾಗಿದೆ.

 ಸಿನಿವಾರ್ತೆ

ಮೈಸೂರಿನ ಹುಲ್ಲೇನಹಳ್ಳಿಯಲ್ಲಿ ರಜನಿಕಾಂತ್‌ ನಟನೆಯ ‘ಜೈಲರ್‌ 2’ ಸಿನಿಮಾದ ಶೂಟಿಂಗ್‌ ಆರಂಭವಾಗಿದೆ. ಈ ಹಿಂದೆ ಡಾ. ರಾಜ್‌ಕುಮಾರ್‌ ನಟನೆಯ ‘ಕಾಮನಬಿಲ್ಲು’ ಸಿನಿಮಾದ ಹಾಡಿನ ಶೂಟಿಂಗ್‌ ನಡೆದ ಸೇತುವೆಯ ಬಳಿ ಈ ಚಿತ್ರದ ಚಿತ್ರೀಕರಣವೂ ನಡೆಯಲಿದೆ.

ಈ ಜಾಗದಲ್ಲಿ ‘ಜೈಲರ್‌ 2’ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ತಂಡ ಪ್ಲಾನ್‌ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕಾಗಿ ರಜನಿಕಾಂತ್‌ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನೆಲ್ಸನ್‌ ನಿರ್ದೇಶನದ ಈ ಸಿನಿಮಾದಲ್ಲಿ ರಜನಿ ಜೊತೆಗೆ ಶಿವಣ್ಣನೂ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದು, ಅವರು ಆಗಸ್ಟ್‌ ತಿಂಗಳಿಂದ ಶೂಟಿಂಗ್‌ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮೈಸೂರಿನ ವಿವಿಧೆಡೆ ‘ಜೈಲರ್‌ 2’ ಚಿತ್ರೀಕರಣ ನಡೆಯಲಿದೆ.

PREV
Read more Articles on

Recommended Stories

ನಟ ದೇವರಕೊಂಡ ಕಾರು ಅಪಘಾತ: ಅಪಾಯವಿಲ್ಲ
ಹಬ್ಬಕ್ಕೆ ಬಂದ ಬಿಜ್ಯುವೆಲ್ಡ್‌ ಬ್ಲೌಸ್‌ ಟ್ರೆಂಡ್‌