ಜಗತ್ತಿನ ಅತ್ಯಂತ ಎತ್ತರದ 888 ಅಡಿ ಬುದ್ಧ ಮೂರ್ತಿ ಪ್ರತಿಮೆ ಸ್ಥಾಪನೆಗೆ ಚಿಂತನೆ

KannadaprabhaNewsNetwork |  
Published : Dec 24, 2023, 01:45 AM IST
51 | Kannada Prabha

ಸಾರಾಂಶ

- ಎಚ್.ಡಿ. ಕೋಟೆಯಲ್ಲಿ ಈ ಪ್ರತಿಮೆ ಸ್ಥಾಪನೆ ಸಂಬಂಧ ಚರ್ಚೆ- ಅಂತಾರಾಷ್ಟ್ರೀಯ ಬೌದ್ಧ ಸಂಸ್ಥೆ ಪೂರ್ವಭಾವಿ ಸಭೆ

- ಎಚ್.ಡಿ. ಕೋಟೆಯಲ್ಲಿ ಈ ಪ್ರತಿಮೆ ಸ್ಥಾಪನೆ ಸಂಬಂಧ ಚರ್ಚೆ

- ಅಂತಾರಾಷ್ಟ್ರೀಯ ಬೌದ್ಧ ಸಂಸ್ಥೆ ಪೂರ್ವಭಾವಿ ಸಭೆಕನ್ನಡಪ್ರಭ ವಾರ್ತೆ ಎಚ್.ಡಿ‌. ಕೋಟೆ

ಅಂತರಸಂತೆ ಸಾರನಾಥ ಬುದ್ದ ವಿಹಾರದಲ್ಲಿ ನಳಂದ ಬೌದ್ಧ ವಿಶ್ವವಿದ್ಯಾಲಯದ ಭೋದಿದತ್ತ ಭಂತೇಜೀ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ಅಂತಾರಾಷ್ಟ್ರೀಯ ಮಟ್ಟದ ಉಪಾಸಕ ಮತ್ತು ಉಪಾಸಕಿ ಧಾರ್ಮಿಕ ಸಂಘ ಸ್ಥಾಪನೆಗೆ ಪೂರ್ವಭಾವಿ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತಾನಾಡಿದ ಬೋಧಿ ದತ್ತ ಭಂತೇಜಿ, ನಾವು ಇಂದು ಜಾತಿಗಳ ಹೆಸರಲ್ಲಿ ಹೊಡೆದು ಹಂಚಿ ಹರಿದು ಹೋಗಿದ್ದೆವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಭಿಕ್ಕು ಸಂಘವು ಪ್ರಪಂಚದ ಎಲ್ಲಾ ದೇಶದ ಬೌದ್ಧ ವಿಹಾರದ ಮುಖ್ಯಸ್ಥರನ್ನು ಸಂಪರ್ಕಿಸಿ ಅವರೊಂದಿಗೆ ಸಮನ್ವಯ ಸಾಧಿಸಿ ನಾವೆಲ್ಲ ಒಂದು ಎಂಬ ತೀರ್ಮಾನ ಮಾಡಿದ್ದೇವೆ ಎಂದರು.

ಈ ತೀರ್ಮಾನಗಳೇನೆಂದರೆ ಅಂತಾರಾಷ್ಟ್ರೀಯ ಮಟ್ಟದ ಉಪಾಸಕ ಉಪಾಸಕಿಯರ ಧಾರ್ಮಿಕ ಸಂಘಟನೆ ಕಟ್ಟುವುದು. ಪ್ರತಿ ಮನೆಯಿಂದಲೂ ಉಪಾಸಕ ಉಪಾಸಕಿ ಎಂದು ಸದಸ್ಯತ್ವ ಪಡೆಯುವುದು. ಪ್ರತಿ ಸದಸ್ಯರು ಮಾಸಿಕ 100 ರೂ ವಂತಿಕೆ ನೀಡುವುದು. ಈ ವಂತಿಕೆಯನ್ನ ಬೌದ್ಧ ಸಮುದಾಯಗಳ ಸಾಮಾಜಿಕ. ಆರ್ಥಿಕ. ಶೈಕ್ಷಣಿಕ. ತಾಂತ್ರಿಕ. ವೈಜ್ಞಾನಿಕ ಸೇವೆಗಳಿಗೆ ವಿನಿಯೋಗಿಸುವುದಾಗಿ ಅವರು ಹೇಳಿದರು.

ನಮ್ಮ ಸಮುದಾಯದ ಮುಖ್ಯಸ್ಥರ ಮಾಲೀಕತ್ವದಲ್ಲಿ ಟಿವಿ. ಪತ್ರಿಕೆ. ಮಾಸಿಕ ಪತ್ರಿಕೆ. ಮ್ಯಾಗಜೀನ್ ಗಳನ್ನು ತೆರೆಯುವುದು. ಸಂಘಟನೆ ವತಿಯಿಂದ ಶೈಕ್ಷಣಿಕ. ಆರೋಗ್ಯ. ಅನ್ನದಾನ ಸೇವೆ ಮಾಡಿಸುವುದಾಗಿ ಅವರು ತಿಳಿಸಿದರು.

ಜಗತ್ತಿನಲ್ಲೆ ಅತ್ಯಂತ ಎತ್ತರದ 888 ಅಡಿ ಬುದ್ಧ ಮೂರ್ತಿ ಪ್ರತಿಮೆಯನ್ನು ಎಚ್.ಡಿ. ಕೋಟೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಬಹಳ ಮುಖ್ಯವಾಗಿ ಈ ಅಂತಾರಾಷ್ಟ್ರೀಯ ಧಾರ್ಮಿಕ ಸಂಘಟನೆಯನ್ನು ಎಚ್.ಡಿ .ಕೋಟೆ ಯಿಂದ ಆರಂಭಿಸಿ ಜಗತ್ತಿನಾದ್ಯಂತ ಸಂಚರಿಸುವುದು ಮುಂತಾದ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಎಚ್.ಸಿ. ನರಸಿಂಹಮೂರ್ತಿ. ಸರಗೂರು ಶಿವಣ್ಣ. ಹೈರಿಗೆ ಶಿವರಾಜ್. ಸೋಗಳ್ಳಿ ಶಿವಣ್ಣ. ಎಮ್.ಡಿ. ಮಂಚಯ್ಯ. ಜೀವಿಕ ಉಮೇಶ್. ವೆಂಕಟಸ್ವಾಮಿ. ಜೀವಿಕ ಬಸವರಾಜ್. ಬಸವರಾಜ್. ಮಲ್ಲೇಶ್. ಸೋಮೇಶ್. ಚಾ. ನಂಜುಂಡ ಮೂರ್ತಿ. ಚಲುವರಾಜ್. ಮುದ್ದುಮಲ್ಲಯ್ಯ. ರಾಜಣ್ಣ. ಪ್ರಕಾಶ್. ನಾಗರಾಜ್. ಗೋವಿಂದರಾಜ್. ನಾಗಣ್ಣ. ಪುರುಷೋತ್ತಮ್. ಮಹದೇ ಸ್ವಾಮಿ. ಶಿವಲಿಂಗ. ಕಾಡುಮನೆ ಪ್ರಸನ್ನ. ಸಿದ್ದರಾಜು. ದಿನೇಶ್. ರವೀಂದ್ರ. ಚಂದ್ರಶೇಖರ. ಮಾಸ್ತಯ್ಯ. ಸುರೇಂದ್ರ ಸಿಂಗ್. ಚಲುವರಾಜ್. ಶಿವರಾಜ್. ಕುಮಾರ್. ವೆಂಕಟೇಶ. ಶ್ರೀನಿವಾಸ. ಪ್ರಕಾಶ್. ಜಯಚಂದ್ರ. ನಾಗರಾಜ್. ಮಂಜು. ಶಂಬಯ್ಯ. ರಂಗಯ್ಯ ಮೊದಲಾದವರು ಪಾಲ್ಗೊಂಡಿದ್ದರು.

PREV

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ