ಕನ್ನಡಪ್ರಭ ಸಿನಿವಾರ್ತೆ
ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಚಿತ್ರದಲ್ಲಿ ಲೂಸ್ ಮಾದ ಯೋಗೀಶ್ ನಟಿಸಲಿದ್ದಾರೆ. ದೇವನೂರು ಚಂದ್ರು ನಿರ್ದೇಶನದ, ಕೆ ಪಿ ಶ್ರೀಕಾಂತ್ ಹಾಗೂ ಜಿ ಮನೋಹರನ್ ನಿರ್ಮಿಸುತ್ತಿರುವ ಸಿನಿಮಾ ಇದು.‘ಯೋಗೀಶ್ ಪಾತ್ರ ಸಿನಿಮಾ ಪೂರ್ತಿ ಇರುತ್ತದೆ. ಹೀರೋ, ಅತಿಥಿ ಎನ್ನುವುದಕ್ಕಿಂತ ಸರ್ಪ್ರೈಸ್ ಪಾತ್ರ ಅವರದ್ದು. ಯಾರೂ ನಿರೀಕ್ಷೆ ಮಾಡದ ಪಾತ್ರದಲ್ಲಿ ಯೋಗಿ ಅವರನ್ನು ನೋಡಬಹುದು’ ಎನ್ನುತ್ತಾರೆ ನಿರ್ದೇಶಕ ದೇವನೂರು ಚಂದ್ರು. ಅ.6ರಿಂದ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಚಿತ್ರೀಕರಣ ನಡೆಯಲಿದೆ.