ಯಶ್‌ ಟಾಕ್ಸಿಕ್‌ ಸಿನಿಮಾದ ದೃಶ್ಯ ಲೀಕ್‌ ರಾಕಿಭಾಯ್‌ ಷರ್ಟ್‌ಲೆಸ್‌ ಲುಕ್‌ ಟ್ರೆಂಡಿಂಗ್‌

Published : Oct 15, 2025, 01:20 PM IST
Yash's Toxic

ಸಾರಾಂಶ

ಯಶ್‌ ನಟನೆ, ನಿರ್ಮಾಣದ ಅದ್ದೂರಿ ಬಜೆಟ್‌ನ ಪ್ಯಾನ್‌ ವರ್ಲ್ಡ್‌ ಚಿತ್ರ ‘ಟಾಕ್ಸಿಕ್‌’ನ ದೃಶ್ಯವೊಂದು ಲೀಕ್‌ ಆಗಿದೆ. ಇದರಲ್ಲಿ ಬಾಲ್ಕನಿಯಲ್ಲಿ ನೀಲಿ ಬಣ್ಣದ ಜೀನ್ಸ್‌ನಲ್ಲಿ ಷರ್ಟ್‌ಲೆಸ್‌ ಆಗಿ ಕಾಣಿಸಿಕೊಂಡಿರುವ ಯಶ್‌ ಸ್ಟೈಲಿಶ್‌ ಆಗಿ ಸಿಗರೇಟು ಸೇದುತ್ತಿದ್ದಾರೆ.

  ಸಿನಿವಾರ್ತೆ

ಯಶ್‌ ಅವರ ಈ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ‘ಸುನಾಮಿ ಗ್ಯಾರಂಟಿ’ ಎಂಬ ಬಗೆಬಗೆಯ ಕಾಮೆಂಟ್‌ಗಳೊಂದಿಗೆ ಬೆಂಕಿ, ಹೃದಯದ ಇಮೋಜಿ ಹಾಕಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ಈ ವೀಡಿಯೋ ಕ್ಷಣ ಮಾತ್ರದಲ್ಲಿ ಟ್ರೆಂಡಿಂಗ್‌ ಆಗಿದೆ.

ಈ ವೀಡಿಯೋವನ್ನಿಟ್ಟು ಯಶ್‌ ಅವರ ‘ಟಾಕ್ಸಿಕ್‌’ ಸಿನಿಮಾ ಲುಕ್‌ ಅನ್ನು ಊಹಿಸಿ ಥರಾವರಿ ಎಐ ಫೋಟೋಗಳನ್ನು ಕ್ರಿಯೇಟ್‌ ಮಾಡಲಾಗಿದೆ. ಇನ್ನೊಂದೆಡೆ ಸಿನಿಮಾವನ್ನು ಎಷ್ಟೇ ರಹಸ್ಯವಾಗಿ ಚಿತ್ರೀಕರಿಸಿದರೂ ದೃಶ್ಯಗಳು ಲೀಕ್‌ ಆಗುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ.

ಪಕ್ಕದ ಬಿಲ್ಡಿಂಗ್‌ನಲ್ಲಿರುವವರು ಈ ದೃಶ್ಯ ಚಿತ್ರೀಕರಿಸಿದ್ದು ಲೀಕ್‌ ಆಗಿರುವ ವೀಡಿಯೋದಲ್ಲಿ ಸ್ಪಷ್ಟವಾಗಿದೆ. ಮಾರ್ಚ್‌ 19, 2026ಕ್ಕೆ ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

PREV
Read more Articles on

Recommended Stories

ರಿಷಬ್‌ ಶೆಟ್ಟಿ ಲುಂಗಿ ಉಡುವ ಕಲೆಗೆ ಮರುಳಾದ ಅಮಿತಾಬ್‌ ಬಚ್ಚನ್‌
6 ಭಾಷೆಗಳಲ್ಲಿ ಬರಲಿದೆ ಕೊರಗಜ್ಜ ಸಿನಿಮಾ