ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತಾಡೋಕೆ ಬೋರ್‌: ಅಚ್ಚರಿಯ ಹೇಳಿಕೆ ನೀಡಿದ ರಾಹುಲ್‌

KannadaprabhaNewsNetwork |  
Published : Nov 04, 2024, 12:28 AM ISTUpdated : Nov 04, 2024, 05:54 AM IST
ರಾಹುಲ್‌  | Kannada Prabha

ಸಾರಾಂಶ

ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಇದೀಗ ಮೋದಿ ಬಗ್ಗೆ ಮಾತಾಡೋಕೆ ಬೋರ್‌ ಆಗುತ್ತೆ’ ಎಂದು ಅಚ್ಚರಿಯ ಹೇಳಿಕೆ ನೀಡಿದ ಪ್ರಸಂಗ ಭಾನುವಾರ ಇಲ್ಲಿ ನಡೆದಿದೆ.

ವಯನಾಡು: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಇದೀಗ ಮೋದಿ ಬಗ್ಗೆ ಮಾತಾಡೋಕೆ ಬೋರ್‌ ಆಗುತ್ತೆ’ ಎಂದು ಅಚ್ಚರಿಯ ಹೇಳಿಕೆ ನೀಡಿದ ಪ್ರಸಂಗ ಭಾನುವಾರ ಇಲ್ಲಿ ನಡೆದಿದೆ.

ವಯನಾಡು ಲೋಕಸಭೆಯ ಉಪಚುನಾವಣೆ ಹಿನ್ನೆಲೆ ಭಾನುವಾರ ರಾಹುಲ್‌ ಮತ್ತು ಪ್ರಿಯಾಂಕಾ ಜಂಟಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮೊದಲಿಗೆ ಮಾತನಾಡಿದ ಪ್ರಿಯಾಂಕಾ, ‘ಜನಸಾಮಾನ್ಯ ಬದಲಾಗಿ ದೊಡ್ಡ ಉದ್ಯಮಿಗಳ ಹಿತಾಸಕ್ತಿ ಕಾಯುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಬಳಿಕ ಮಾತು ಆರಂಭಿಸಿದ ರಾಹುಲ್‌, ‘ಇಂದು ನನ್ನ ಮುಂದೆ 2 ಆಯ್ಕೆ ಇದೆ. ಒಂದು ರಾಜಕೀಯ ಭಾಷಣ ಮಾಡಬೇಕು, ಇನ್ನೊಂದು ನನ್ನ ಕುಟುಂಬದ ಬಗ್ಗೆ ಮಾತನಾಡಬೇಕು. ನಾನು 2ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಈಗಾಗಲೇ ಪ್ರಿಯಾಂಕಾ ಅವರು ಮೋದಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಾವೆಲ್ಲಾ ಅವರ ಬಗ್ಗೆ ಈಗ ಬೋರ್‌ ಆಗಿದ್ದೇವೆ. ಹೀಗಿರುವಾಗ ಅವರ ಬಗ್ಗೆ ಮತ್ತೊಮ್ಮೆ ಪ್ರಸ್ತಾಪ ಮಾಡುವುದು ಏಕೆ?’ ಎಂದು ಹೇಳಿ ಪ್ರಿಯಾಂಕಾ ರಾಜಕೀಯದ ಬಗ್ಗೆ ಮಾತನಾಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಶ್ಮಿಕಾ-ವಿಜಯ್‌ ಮದುವೆ ಪ್ರಸಾರಕ್ಕೆ ₹60 ಕೋಟಿ ಆಫರ್‌!
ಬ್ರಹ್ಮಪುತ್ರಾ ನದಿ ಮೇಲೆ ಅತ್ಯಾಧುನಿಕ 6 ಪಥದ ಸೇತುವೆ