180 ದಿನಗಳ ಹೆರಿಗೆ ರಜೆ ಇದೀಗ ಬಾಡಿಗೆ ತಾಯ್ತನಕ್ಕೂ ವಿಸ್ತರಣೆ

Published : Jun 25, 2024, 11:23 AM IST
Pregnant woman

ಸಾರಾಂಶ

8ನೇ ಲೋಕಸಭೆ ಅಧಿವೇಶನ ಸೇರಿದ ಮೊದಲ ದಿನವೇ 50 ವರ್ಷಗಳಿಂದ ಚಾಲ್ತಿಯಲ್ಲಿದ್ದ ಕಾನೂನೊಂದಕ್ಕೆ ತಿದ್ದುಪಡಿ ತಂದಿದ್ದು, ಕೇಂದ್ರ ಸರ್ಕಾರಿ ಮಹಿಳಾ ನೌಕರರಿಗೆ ನೀಡಲಾಗುತ್ತಿದ್ದ 180 ದಿನಗಳ ಹೆರಿಗೆ ರಜೆಯನ್ನು, ಬಾಡಿಗೆ ತಾಯ್ತನದ ಸನ್ನಿವೇಶಕ್ಕೂ ವಿಸ್ತರಿಸಲಾಗಿದೆ.

 ನವದೆಹಲಿ: 18ನೇ ಲೋಕಸಭೆ ಅಧಿವೇಶನ ಸೇರಿದ ಮೊದಲ ದಿನವೇ 50 ವರ್ಷಗಳಿಂದ ಚಾಲ್ತಿಯಲ್ಲಿದ್ದ ಕಾನೂನೊಂದಕ್ಕೆ ತಿದ್ದುಪಡಿ ತಂದಿದ್ದು, ಕೇಂದ್ರ ಸರ್ಕಾರಿ ಮಹಿಳಾ ನೌಕರರಿಗೆ ನೀಡಲಾಗುತ್ತಿದ್ದ 180 ದಿನಗಳ ಹೆರಿಗೆ ರಜೆಯನ್ನು, ಬಾಡಿಗೆ ತಾಯ್ತನದ ಸನ್ನಿವೇಶಕ್ಕೂ ವಿಸ್ತರಿಸಲಾಗಿದೆ.

ಹಾಗಾಗಿ ಇನ್ನು ಮುಂದೆ ಬಾಡಿಗೆ ತಾಯಂದಿರು ಹಾಗೂ ಹೆತ್ತ ತಾಯಿಯರಿಗೆ ಎರಡಕ್ಕಿಂತ ಕಡಿಮೆ ಜೀವಂತ ಮಕ್ಕಳಿದ್ದಲ್ಲಿ 180 ದಿನಗಳ ಹೆರಿಗೆ ರಜೆಯನ್ನು ಪಡೆಯಬಹುದಾಗಿದೆ. ಜೊತೆಗೆ ಪುರುಷರಿಗೂ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಾಗ 15 ದಿನಗಳ ಪಿತೃತ್ವ ರಜೆಯನ್ನು ಪಡೆಯಬಹುದು ಎಂದು ತಿದ್ದುಪಡಿ ತರಲಾಗಿದೆ. ಆದರೆ ಪುರುಷರು ಈ ಸೌಲಭ್ಯವನ್ನು ಮಗು ಜನನದ ಬಳಿಕ 6 ತಿಂಗಳೊಳಗೆ ಪಡೆಯಬಹುದಾಗಿದೆ.

PREV

Recommended Stories

30 ಲೀ. ಎದೆಹಾಲು ದಾನಮಾಡಿ ಬ್ಯಾಡ್ಮಿಂಟನ್ತಾರೆ ಜ್ವಾಲಾ ಸಾರ್ಥಕತೆ
ವಿಶ್ವದ ಅತಿ ದೊಡ್ಡ ಡ್ಯಾಂ ಕಟ್ಟುವ ಚೀನಾಕ್ಕೆ ಭಾರತ ಸಡ್ಡು