ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭರ್ಜರಿ ಕಾರ್ಯಾಚರಣೆ ಮುಂದುವರೆಸಿರುವ ಭಾರತೀಯ ಸೇನಾ ಪಡೆಗಳು ಶುಕ್ರವಾರ ಪುಲ್ವಾಮದಲ್ಲಿ ಅಡಗಿ ಕುಳಿತಿದ್ದ ಮೂವರು ಜೈಷ್ ಎ ಮೊಹಮ್ಮದ್ ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭರ್ಜರಿ ಕಾರ್ಯಾಚರಣೆ ಮುಂದುವರೆಸಿರುವ ಭಾರತೀಯ ಸೇನಾ ಪಡೆಗಳು ಶುಕ್ರವಾರ ಪುಲ್ವಾಮದಲ್ಲಿ ಅಡಗಿ ಕುಳಿತಿದ್ದ ಮೂವರು ಜೈಷ್ ಎ ಮೊಹಮ್ಮದ್ ಉಗ್ರರನ್ನು ಹೊಡೆದುರುಳಿಸಿದ್ದಾರೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಅವಂತಿಪೋರಾದ ನಾಡರ್ ಟ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದ್ದವು. ಡ್ರೋನ್‌ಗಳ ಮೂಲಕ ಉಗ್ರರ ಚಲನವಲದ ಮೇಲೆ ಕಣ್ಗಾವಲು ಇಡಲಾಗಿತ್ತು. ಈ ಸಂದರ್ಭದಲ್ಲಿ ಉಗ್ರರು ಅಡಗಿದ್ದ ಪ್ರದೇಶದ ಸುತ್ತ ಭದ್ರತಾ ಸಿಬ್ಬಂದಿ ಸುತ್ತುವರೆದು, ಶರಣಾಗುವಂತೆ ಉಗ್ರರಿಗೆ ಸೂಚಿಸಲಾಗಿತ್ತು. ಆದರೆ ಆದರೆ ಉಗ್ರರು ಶರಣಾಗಲು ಒಪ್ಪದೇ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಗಂಟೆಗಳ ಕಾಲ ಎರಡೂ ಕಡೆ ಪರಸ್ಪರ ಗುಂಡಿನ ಚಕಮಕಿ ನಡೆದು, ಮೂವರು ಉಗ್ರರು ಹತರಾಗಿದ್ದಾರೆ.ಹತ್ಯೆಯಾದ ಭಯೋತ್ಪಾದಕರನ್ನು ಜೈಶ್ ಸಂಘಟನೆಗೆ ಸೇರಿದ ಆಸಿಫ್ ಅಹ್ಮದ್ ಶೇಖ್, ಅಮೀರ್ ನಾಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಉಗ್ರರ ಬಳಿ ಇದ್ದ ಎಕೆ ರೈಫಲ್‌ಗಳು, ಮ್ಯಾಗಝೀನ್‌ಗಳು, ಗ್ರೆನೇಡ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಾಯಿ ಶರಣಾಗಲೂ ಗೋಗರೆದರೂ ಕೇಳದ ಮಗ
ಪುಲ್ವಾಮದಲ್ಲಿ ಭದ್ರತಾ ಪಡೆ ಉಗ್ರರನ್ನು ಎನ್‌ಕೌಂಟರ್ ಮಾಡುವುದಕ್ಕೂ ಮುನ್ನ ಭಯೋತ್ಪಾದಕ ಅಮೀರ್ ನಾಜೀರ್ ವಾನಿ ತಾನು ಅಡಗಿ ಕುಳಿತಿದ್ದ ಜಾಗದಿಂದ ತನ್ನ ತಾಯಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಈ ವೇಳೆ ತಾಯಿ ಅಮೀರ್‌ಗೆ ಶರಣಾಗುವಂತೆ ಗೋಗರೆದಿದ್ದಾರೆ. ಆದರೆ ಇದಕ್ಕೆ ಕ್ಯಾರೆ ಎನ್ನದ ನಾಜೀರ್ ಭಾರರತದ ಸೇನೆ ಪಡೆ ನನ್ನ ಎದುರಿಗೆ ಬಂದರೆ ಬಂದೂಕಿನ ಮೂಲಕ ನೋಡಿಕೊಳ್ಳುತ್ತೇನೆ ಎಂದು ದರ್ಪ ತೋರಿಸಿದ್ದ. ಕೊನೆಗೆ ಭಾರತೀಯ ಸೇನಾ ಗುಂಡಿಗೆ ಬಲಿಯಾಗಿದ್ದಾನೆ.