ಅಮೆರಿಕದಲ್ಲಿ 30 ದಿನಕ್ಕಿಂತ ಹೆಚ್ಚು ವಾಸಿಸುವ ವಿದೇಶಿ ಪ್ರಜೆ ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯ

KannadaprabhaNewsNetwork |  
Published : Apr 14, 2025, 01:25 AM ISTUpdated : Apr 14, 2025, 04:44 AM IST
Donald Trump

ಸಾರಾಂಶ

ವಿದೇಶಿಗರ ಪಾಲಿಗೆ ಅಮೆರಿಕ ವಾಸ ಉಸಿರುಗಟ್ಟಿಸುವಂತಹ ಬೆಳವಣಿಗೆಗಳು ಆಗುತ್ತಿವೆ. ಇದೀಗ ಅಮೆರಿಕದಲ್ಲಿ 30 ದಿನಕ್ಕಿಂತ ಹೆಚ್ಚು ವಾಸಿಸುವವ ವಿದೇಶಿ ಪ್ರಜೆಗಳು ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ತಪ್ಪಿದಲ್ಲಿ ದಂಡ, ಸೆರೆವಾಸದಂತಹ ಶಿಕ್ಷೆಯಾಗುವ ಸಂಭವವಿದೆ.

 ವಾಷಿಂಗ್ಟನ್‌: ವಿದೇಶಿಗರ ಪಾಲಿಗೆ ಅಮೆರಿಕ ವಾಸ ಉಸಿರುಗಟ್ಟಿಸುವಂತಹ ಬೆಳವಣಿಗೆಗಳು ಆಗುತ್ತಿವೆ. ಇದೀಗ ಅಮೆರಿಕದಲ್ಲಿ 30 ದಿನಕ್ಕಿಂತ ಹೆಚ್ಚು ವಾಸಿಸುವವ ವಿದೇಶಿ ಪ್ರಜೆಗಳು ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ತಪ್ಪಿದಲ್ಲಿ ದಂಡ, ಸೆರೆವಾಸದಂತಹ ಶಿಕ್ಷೆಯಾಗುವ ಸಂಭವವಿದೆ.

ಈ ಬಗ್ಗೆ ‘ಅಕ್ರಮ ಏಲಿಯನ್‌ಗಳಿಗೆ ಸಂದೇಶ’ ಎಂಬ ತಲೆಬರಹದೊಂದಿಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅಮೆರಿಕದ ಆಂತರಿಕ ಭದ್ರತಾ ವಿಭಾಗ, ‘30 ದಿನಗಳಿಗಿಂತ ಹೆಚ್ಚು ಕಾಲ ಅಮೆರಿಕದಲ್ಲಿ ವಾಸಿಸುತ್ತಿರುವವರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ತಪ್ಪಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುವುದು ಮತ್ತು ಶಿಕ್ಷಿಸಲಾಗುವುದು. ಈ ಬಗ್ಗೆ ಸ್ಪಷ್ಟ ಸಂದೇಶ ನೀಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ವಿಭಾಗದ ಕಾರ್ಯದರ್ಶಿ ಕ್ರಿಸ್ಟಿ ನೋಮ್‌ ಅವರು, ದೇಶ ತೊರೆದು ಸ್ವಯಂ ಗಡೀಪಾರಾಗಿ ಎಂದಿದ್ದಾರೆ’ ಎಂದು ಪೋಸ್ಟ್‌ ಮಾಡಿದೆ. 

ಅಂತೆಯೇ, ‘ಸ್ವಯಂ ಗಡೀಪಾರಾದವರು ಮುಂದೆ ಮತ್ತೆ ಸಕ್ರಮವಾಗಿ ಅಮೆರಿಕಕ್ಕೆ ವಲಸೆ ಬರಬಹುದು. ದೇಶ ಬಿಡಲು ಹಣವಿಲ್ಲದಿದ್ದರೆ ಸಬ್ಸಿಡಿಯನ್ನೂ ನೀಡಲಾಗುವುದು’ ಎನ್ನಲಾಗಿದೆ. ಈ ನಿಯಮದಿಂದ ಎಚ್‌-1ಬಿ ಅಥವಾ ವಿದ್ಯಾರ್ಥಿ ವೀಸಾ ಹೊಂದಿರುವವರಿಗೆ ನೇರವಾಗಿ ತೊಂದರೆಯಾಗದು. ಆದರೆ, ಎಚ್‌-1ಬಿ ವೀಸಾ ಹೊಂದಿರುವವರು ಕೆಲಸ ಕಳೆದುಕೊಂಡಮೇಲೂ, ನಿಗದಿತ ಅವಧಿಯ ಬಳಿಕ ದೇಶ ತೊರೆಯದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಸೆಮಿಕಂಡಕ್ಟರ್‌, ಎಲೆಕ್ಟ್ರಾನಿಕ್ಸ್‌ ಮೇಲೆ ಮತ್ತೆ ಟ್ರಂಪ್‌ ತೆರಿಗೆ?

ವಾಷಿಂಗ್ಟನ್‌: ತನ್ನೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ದೇಶಗಳನ್ನು ತೆರಿಗೆಯ ಸೂತ್ರದಿಂದ ಕುಣಿಸುವುದನ್ನು ಅಮೆರಿಕ ಮುಂದುವರೆಸಿದೆ. ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್‌ ಸಾಧನಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವುದಾಗಿ ಶನಿವಾರ ಘೋಷಿಸಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಅವುಗಳ ಮೇಲೆ ಮತ್ತೆ ತೆರಿಗೆ ಹೇರುವ ಸೂಚನೆ ನೀಡಿದ್ದಾರೆ 

ಈ ಬಗ್ಗೆ ಮಾತನಾಡಿರುವ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ, ‘ಮುಂದಿನ ದಿನಗಳಲ್ಲಿ ವಲಯಾಧರಿತ ಸುಂಕ ವಿಧಿಸಲಾಗುವುದು. ಆಗ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಸೆಮಿಕಂಡಕ್ಟರ್‌ ವಿಭಾಗದಡಿ ಪರಿಗಣಿಸಿ, ವಿಶೇಷ ತೆರಿಗೆ ವಿಧಿಸಲಾಗುವುದು’ ಎಂದರು.ಅತ್ತ ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್‌, ‘ಸೆಮಿಕಂಡಕ್ಟರ್‌ ಮೇಲೆ ವಿಧಿಸಲಾಗುವ ತೆರಿಗೆಯ ಬಗ್ಗೆ ಸೋಮವಾರ ಘೋಷಿಸಲಾಗುವುದು’ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೈಸೂರು ಸ್ಯಾಂಡಲ್ ಸೋಪು ಉತ್ಪನ್ನ : ದಾಖಲೆ ಬರೆದ ಕೆಎಸ್‌ಡಿಎಲ್‌
ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌