ಆಧಾರ ರಹಿತ ಆರೋಪ:ಮೌನ ಮುರಿದ ಚಂಪತ್‌

KannadaprabhaNewsNetwork |  
Published : Jul 08, 2026, 04:00 AM IST
ರಾಮಮಂದಿರ  | Kannada Prabha

ಸಾರಾಂಶ

ಅಯೋಧ್ಯೆ ರಾಮಮಂದಿರ ದೇಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಟ್ರಸ್ಟ್‌ನ ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮೌನ ಮುರಿದಿದ್ದು, ರಾಮ ಭಕ್ತರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ‘ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಲಾಗಿದ್ದು, ತನಿಖೆ ಬಳಿಕ ಎಲ್ಲಾ ಸತ್ಯ ಹೊರ ಬರಲಿದೆ’ ಎಂದಿದ್ದಾರೆ.

- ರಾಮ ಭಕ್ತರಿಗೆ ರಾಯ್ ಬಹಿರಂಗ ಪತ್ರ====

ಲಖನೌ: ಅಯೋಧ್ಯೆ ರಾಮಮಂದಿರ ದೇಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಟ್ರಸ್ಟ್‌ನ ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮೌನ ಮುರಿದಿದ್ದು, ರಾಮ ಭಕ್ತರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ‘ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಲಾಗಿದ್ದು, ತನಿಖೆ ಬಳಿಕ ಎಲ್ಲಾ ಸತ್ಯ ಹೊರ ಬರಲಿದೆ’ ಎಂದಿದ್ದಾರೆ.

ಟ್ರಸ್ಟ್‌ಗೆ ನೀಡಿದ ರಾಜೀನಾಮೆ ಅಂಗೀಕಾರ ಬೆನ್ನಲ್ಲೇ ಅವರು ಈ ಪತ್ರ ಬರೆದಿದ್ದಾರೆ. ‘ದೇಣಿಗೆ ಕಳ್ಳತನ ಪ್ರಕರಣದಲ್ಲಿ ಹಲವು ಊಹಾಪೋಹಾಗಳು ಕೇಳಿ ಬರುತ್ತಿವೆ. ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ. ಅದಕ್ಕಾಗಿ ಮೌನದ ಮೊರೆ ಹೋಗಿದ್ದೇನೆ. ಸೋಮವಾರ ನಡೆದ ಟ್ರಸ್ಟ್‌ ಸಭೆಯಲ್ಲಿ ಎಸ್‌ಐಟಿ ಪ್ರಾಥಮಿಕ ವರದಿ ಸೋರಿಕೆಯಾಗಿದೆ. ವರದಿಯು ರಹಸ್ಯವಾಗಿರಬೇಕಿತ್ತು. ಆದರೆ ಸಭೆಯಲ್ಲಿ ಅದು ಸೋರಿಕೆಯಾಗಿದೆ. ಎಸ್‌ಐಟಿ ಅಂತಿಮ ತನಿಖಾ ವರದಿ ಸಲ್ಲಿಕೆಯಾದ ಬಳಿಕ ಸತ್ಯ ಹೊರ ಬರಲಿದೆ. 45 ವರ್ಷಗಳ ಕಾಲ ಪ್ರಚಾರಕನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಎಲ್ಲೇ ಇದ್ದರೂ ನನ್ನ ಜೀವನ ತೆರೆದ ಪುಸ್ತಕದಂತ ಇರಲಿದೆ’ ಎಂದಿದ್ದಾರೆ.30 ಕೆ.ಜಿ ಚಿನ್ನ, 1,518ಕೇಜಿ ಬೆಳ್ಳಿ ನಮ್ಮ ಬಳಿಸುರಕ್ಷಿತ: ಅಯೋಧ್ಯೆ ಟ್ರಸ್ಟ್‌

ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ಭಕ್ತರು ದಾನದ ರೂಪದಲ್ಲಿ ಚಿನ್ನ ಮತ್ತು ಬೆಳ್ಳಿಯ ಉಡುಗೊರೆ ಬಗ್ಗೆ ಭಕ್ತರಿಂದ ಅನುಮಾನ ವ್ಯಕ್ತವಾದ ಬೆನ್ನಲ್ಲೇ ‘ಭಕ್ತರಿಂದ ಮಂದಿರಕ್ಕೆ ಬಂದ 30 ಕೆ.ಜಿ, ಚಿನ್ನ ಹಾಗೂ 1518 ಕೆ.ಜಿ. ಬೆಳ್ಳಿ ರಾಮ ಜನ್ಮಭೂಮಿ ಟ್ರಸ್ಟ್‌ ಬಳಿಯೇ ಸುರಕ್ಷಿತವಾಗಿವೆ’ ಎಂದು ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್‌ ದೇವ್‌ ಗಿರಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ಎಲ್ಲಾ 2926 ವಸ್ತುಗಳು ಸುರಕ್ಷಿತವಾಗಿವೆ, ಅವುಗಳ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಪ್ರತಿಯೊಂದರಲ್ಲಿಯೂ ದೇಣಿಗೆ ಸ್ವೀಕರಿಸಿದವರ ಹೆಸರು, ದಿನಾಂಕದ ವಿವರಗಳಿವೆ’ ಎಂದಿದೆ. ಸ್ವರ್ಣಲೇಪಿತ ರಾಮಚರಿತಮಾನಸ ಕಾಣೆಯಾಗಿದೆ ಎಂದು ಭಕ್ತರೊಬ್ಬರು ಆರೋಪಿಸಿದ ಹಿನ್ನೆಲೆ ಸೋಮವಾರವಷ್ಟೇ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌, ಆ ಸ್ವರ್ಣಲೇಪಿತ ಪುಸ್ತಕ ಸೇರಿ ದಾನವಾಗಿ ಬಂದ ಚಿನ್ನ-ಬೆಳ್ಳಿಯ ಆಭರಣಗಳನ್ನು ಹಾಗೂ ಅವುಗಳ ದಾಖಲೆ ಪುಸ್ತಕವನ್ನು ಪ್ರದರ್ಶಿಸಿತ್ತು.ದೇಣಿಗೆ ಬಳಿಕ ರಾಮಮಂದಿರ

ಉತ್ಸವಕ್ಕೆ ಖರ್ಚಾದ ₹124

ಕೋಟಿ ಬಗ್ಗೆ ಎಸ್‌ಐಟಿ ನಿಗಾ

ಅಯೋಧ್ಯೆ: ಇಷ್ಟು ದಿನ ಇಲ್ಲಿನ ರಾಮಮಂದಿರದ ಹುಂಡಿಯಿಂದ ಕಳುವಾಗಿದ್ದ ಕಾಣಿಕೆಯ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡವು ಇದೀಗ, ಕಳೆದೆರಡು ವರ್ಷಗಳಲ್ಲಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮಗಳಿಗಾಗಿ ಖರ್ಚು ಮಾಡಲಾದ 124 ಕೋಟಿ ರು.ನ ಜಾಡುಹಿಡಿದು ಹೊರಟಿದೆ.2024ರ ಜನವರಿಯಲ್ಲಾದ ಪ್ರಾಣಪ್ರತಿಷ್ಠೆ (113 ಕೋಟಿ ರು.), ಮೊದಲ ಪ್ರತಿಷ್ಠಾ ದ್ವಾದಶಿ (83 ಲಕ್ಷ ರು.), ಮಹಾಕುಂಭ (43 ಲಕ್ಷ ರು.), ಧ್ವಜಾರೋಹಣ (10.12 ಕೋಟಿ ರು.) ಸಮಾರಂಭಗಳಿಗಾದ ವೆಚ್ಚಗಳು ಟ್ರಸ್ಟ್‌ನ ನಿಯಮಾನುಸಾರ ಆಗಿದೆಯೇ ಎಂಬುದನ್ನು ಪತ್ತೆ ಮಾಡಲು ಲೆಕ್ಕಪರಿಶೋಧನಾ ವರದಿಗಳು, ಪಾವತಿ ವೋಚರ್‌, ಬಿಲ್‌ನಂತಹ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕ್ರಿಯೆ ಮುಂದುವರಿದಿದ್ದು, ಈವರೆಗೆ ಯಾವುದೇ ಅವ್ಯವಹಾರ ಪತ್ತೆಯಾಗಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶಾದ್ಯಂತ ಮುಂಗಾರು ಚುರುಕು, ಭಾರೀ ಮಳೆ
ತೆಲಂಗಾಣ ಡಿಎಸ್ಪಿ ಬಳಿ 4 ಕೆಜಿ ಚಿನ್ನ,20 ಕೆಜಿ ಬೆಳ್ಳಿ, ₹300 ಕೋಟಿ ಆಸ್ತಿ!