ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಭಾಗವತ್‌ಗೆ ಆಪ್‌ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 5 ಪ್ರಶ್ನೆ

Published : Sep 26, 2024, 05:34 AM IST
Arvind Kejriwal income

ಸಾರಾಂಶ

ಆಪ್‌ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್‌ ಅವರಿಗೆ ಪತ್ರ ಬರೆದಿದ್ದಾರೆ ಹಾಗೂ 5 ಪ್ರಶ್ನೆ ಕೇಳಿದ್ದಾರೆ.

ನವದೆಹಲಿ: ಆಪ್‌ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್‌ ಅವರಿಗೆ ಪತ್ರ ಬರೆದಿದ್ದಾರೆ ಹಾಗೂ 5 ಪ್ರಶ್ನೆ ಕೇಳಿದ್ದಾರೆ.

ಪಕ್ಷಗಳನ್ನು ಒಡೆಯಲು, ವಿಪಕ್ಷ ಸರ್ಕಾರ ಉರುಳಿಸಲು ಮತ್ತು ‘ಭ್ರಷ್ಟರನ್ನು’ ತನ್ನ ಮಡಿಲಿಗೆ ಸೇರಿಸಿಕೊಳ್ಳಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುವ ಬಿಜೆಪಿ ರಾಜಕೀಯವನ್ನು ನೀವು ಒಪ್ಪುವಿರಾ? ಬಿಜೆಪಿಯಲ್ಲಿನ 75ಕ್ಕೆ ನಿವೃತ್ತಿ ಎಂಬ ನಿಯಮವೂ ಮೋದಿಗೆ ಅನ್ವಯಿಸುತ್ತದೆಯೇ? ರಾಜಕಾರಣಿಗಳನ್ನು ‘ಭ್ರಷ್ಟರು’ ಎಂದು ಕರೆದು ನಂತರ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಬಿಜೆಪಿಯ ರಾಜಕೀಯವನ್ನು ನೀವು ಒಪ್ಪುತ್ತೀರಾ? ಬಿಜೆಪಿಗೆ ಇನ್ನು ಆರೆಸ್ಸೆಸ್‌ನ ಅಗತ್ಯ ಇಲ್ಲ ಎಂಬ ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ ಹೇಳಿಕೆಗೆ ನಿಮ್ಮ ಒಪ್ಪಿಗೆ ಇದೆಯೇ? ಎಂದು ಕೇಳಿದ್ದಾರೆ.

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌