ಪತನದ ಬಳಿಕ ಸಮೀಪದಲ್ಲೇ ಇದ್ದ ಹಾಸ್ಟೆಲ್‌ಗೆ ನುಗ್ಗಿದ ವಿಮಾನ
ಮೆಸ್‌ನಲ್ಲಿ ಊಟ ಮಾಡುವಾಗಲೇ ಸಂಭವಿಸಿದ ಭೀಕರ ದುರಂತ
ಕಟ್ಟಡದ ಮೇಲೆ ವಿಮಾನ ಪತನಗೊಂಡಿದ್ದು ಇದೇ ಮೊದಲುಕಟ್ಟಡದೊಳಗೆ ನುಗ್ಗಿದ ಗಿಯರ್ ಬಾಕ್ಸ್ । ತೀವ್ರತೆಗೆ ಕಟ್ಟಡ ಛಿದ್ರ
ಅಹಮದಾಬಾದ್: ಗುರುವಾರ ಇಲ್ಲಿ ಅಪಘಾತಕ್ಕೆ ತುತ್ತಾದ ಏರಿಂಡಿಯಾ ವಿಮಾನ ಸೀದಾ ಅಪ್ಪಳಿಸಿದ್ದು ಏರ್‌ಪೋರ್ಟ್‌ನಿಂದ ಕೇವಲ 5 ಕಿ.ಮೀ ಮೇಘನಿ ನಗರದ ಬಿ.ಜೆ. ಮೆಡಿಕಲ್ ಕಾಲೇಜಿನ ವಸತಿ ಸಮುಚ್ಛಯದ ಮೇಲೆ. ಭಾರತದಲ್ಲಿ ಹಲವು ವಿಮಾನ ದುರಂತ ಸಂಭವಿಸಿದೆಯಾದರೂ, ವಿಮಾನವೊಂದು ಕಟ್ಟಡದ ಮೇಲೆ ಅಪ್ಪಳಿಸಿದ್ದು ಇದೇ ಮೊದಲು.ವಿಮಾನ ಪತನಗೊಂಡ ಬಳಿಕ ತನ್ನ ಹಾದಿಯಲ್ಲಿ ಸಿಕ್ಕ ಹಾಸ್ಟೆಲ್ ಮೇಲೆ ಭೀಕರವಾಗಿ ಅಪ್ಪಳಿಸಿದೆ. ಈ ತೀವ್ರತೆಗೆ ವಿಮಾನ ಲ್ಯಾಡಿಂಗ್ ಗಿಯರ್ ಕಟ್ಟಡವನ್ನು ಸೀಳಿಗೊಂಡು ಒಳನುಗ್ಗಿದೆ. ವಿಮಾನ ಅಪ್ಪಳಿಸಿದ ತೀವ್ರತೆ ಮತ್ತು ಪತನಗೊಂಡ ಬಳಿಕ ಎದ್ದ ಬೆಂಕಿಯ ಕೆನ್ನಾಲಿಗೆಗೆ ಹಲವು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ. ಜೊತೆಗೆ ಕಟ್ಟಡ ಛಿದ್ರ ಛಿದ್ರಗೊಂಡಿದ್ದು, ನೋಡುಗರ ಬೆಚ್ಚಿ ಬೀಳಿಸುವಂತಿದೆ.
ಗುರುವಾರ ವಿಮಾನ 1.39ಕ್ಕೆ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಈ ವೇಳೆ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಒಂದಷ್ಟು ಜನ ಹಾಸ್ಟೆಲ್‌ನಲ್ಲಿ ಇದ್ದರೆ, ಇನ್ನು ಕೆಲವರು ಮೆಸ್‌ನಲ್ಲಿ ಊಟಕ್ಕೆ ಬಂದಿದ್ದರು. ವಿಮಾನ ಅಪ್ಪಳಿಸಿದ ತೀವ್ರತೆಗೆ ತಾವಿದ್ದ ಸ್ಥಳದಲ್ಲೇ ಹಲವು ವೈದ್ಯಕೀಯ ಸಾವನ್ನಪ್ಪಿದ್ದರೆ, ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಮಾನ ಪತನಗೊಂಡ ವೇಳೆ ಹಲವು ಮೆಸ್‌ನಲ್ಲಿ ಊಟ ಮಾಡುತ್ತಿದ್ದರು. ಆದರೆ ಭಾರೀ ಸದ್ದು ಕೇಳುತ್ತಲೇ ಕೆಲವರು ಅಲ್ಲಿಂದ ಎದ್ದು ಓಡಿ ಹೋಗಿದ್ದರೆ, ಇನ್ನು ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ ಕಾರಣ, ಮೆಸ್ ಟೇಬಲ್‌ಗಳಲ್ಲಿ ಮೇಲಿನ ಊಟದ ತಟ್ಟೆಯಲ್ಲಿ ಊಟ ಹಾಗೆಯೇ ಉಳಿದುಕೊಂಡಿದ್ದು ಘಟನೆಯ ಭೀಕರತೆ ಸಾಕ್ಷಿಯಾಗಿತ್ತು.
ಕಾರು, ದ್ವಿಚಕ್ರ ವಾಹನಗಳು ಭಸ್ಮ: