ಬದರೀನಾಥ ಹುಂಡಿ ಕನ್ನ ತನಿಖೆಗೆ ನಾಲ್ವರ ಸಮಿತಿ

Published : Jul 06, 2026, 07:19 AM IST
char dham yatra 2026 badrinath temple opening date registration history timings travel guide uttarakhand

ಸಾರಾಂಶ

ಉತ್ತರಾಖಂಡದ ಬದರೀನಾಥ ದೇವಸ್ಥಾನದ ದೇಣಿಗೆಯನ್ನೂ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಅದರ ತನಿಖೆಗೆಂದು ದೇಗುಲದ ಆಡಳಿತ ಮಂಡಳಿಯಾದ ಬಿಕೆಟಿಸಿ 4 ಸದಸ್ಯರ ಸಮಿತಿಯೊಂದನ್ನು ರಚಿಸಿದೆ.

ಡೆಹ್ರಾಡೂನ್‌: ಅಯೋಧ್ಯೆ ರಾಮಮಂದಿರದ ರೀತಿಯೇ ಉತ್ತರಾಖಂಡದ ಬದರೀನಾಥ ದೇವಸ್ಥಾನದ ದೇಣಿಗೆಯನ್ನೂ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಅದರ ತನಿಖೆಗೆಂದು ದೇಗುಲದ ಆಡಳಿತ ಮಂಡಳಿಯಾದ ಬಿಕೆಟಿಸಿ 4 ಸದಸ್ಯರ ಸಮಿತಿಯೊಂದನ್ನು ರಚಿಸಿದೆ.

ನಿಷ್ಪಕ್ಷ ತನಿಖೆಗಾಗಿ ಬಿಕೆಟಿಸಿಯ ಅಧ್ಯಕ್ಷರಾದ ಹೇಮಂತ್‌ ದ್ವಿವೇದಿ ಸಮಿತಿ

ನಿಷ್ಪಕ್ಷ ತನಿಖೆಗಾಗಿ ಬಿಕೆಟಿಸಿಯ ಅಧ್ಯಕ್ಷರಾದ ಹೇಮಂತ್‌ ದ್ವಿವೇದಿ ಅವರು ಸಮಿತಿಯನ್ನು ರಚಿಸಿದ್ದು, ಲಭ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿ 7 ದಿನಗಳೊಳಗಾಗಿ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಸಮಿತಿಯು ಸಿಸಿಟೀವಿ ದೃಶ್ಯಾವಳಿಗಳು, ಸಂಬಂಧಪಟ್ಟವರ ಹೇಳಿಕೆ ಸೇರಿದಂತೆ ಇತರೆ ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಸಲಿದೆ.

ಎನ್‌ಜಿಒ ಒಂದರ ಆಪಾದನೆ

ತಮ್ಮ ಆಪ್ತ ಕಾರ್ಯದರ್ಶಿ ದೇಗುಲದ ದೇಣಿಗೆಯನ್ನು ಕದ್ದಿದ್ದಾರೆ ಎಂಬ ಎನ್‌ಜಿಒ ಒಂದರ ಆಪಾದನೆಯನ್ನು ತಳ್ಳಿಹಾಕಿದ್ದ ದ್ವಿವೇದಿ, ಕೃತ್ಯ ನಿಜವಾಗಿಯೂ ನಡೆದಿದೆಯೇ ಎಂಬುದನ್ನು ಪತ್ತೆ ಮಾಡಿ, ತಪ್ಪಿತಸ್ಥರ ವಿರಿದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

2ಕ್ಕಿಂತ ಹೆಚ್ಚು ಮದುವೆ ಆದ್ರೆ ಬಂಗಾಳದಲ್ಲಿ ಸೌಲಭ್ಯ ಕಟ್!
ಅಯೋಧ್ಯೆ ಆಯ್ತು ಈಗ ಬದರೀ ದೇಗುಲದಲ್ಲೂ ದೇಣಿಗೆ ಅಕ್ರಮ?