ನೌಕಾಪಡೆಗೆ ಇಂದಿನಿಂದ ಬೆಂಗ್ಳೂರಿನ ಕೃಷ್ಣ ಸಾರಥ್ಯ

Published : May 31, 2026, 08:51 AM IST
Kannadiga Vice Admiral Krishna Swaminathan Appointed Indian Navy Chief

ಸಾರಾಂಶ

ಅಡ್ಮಿರಲ್‌ ದಿನೇಶ್‌ ಕುಮಾರ್‌ ತ್ರಿಪಾಠಿ ಅಧಿಕಾರಾವಧಿ ಮುಗಿದ ಹಿನ್ನೆಲೆ ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ಬೆಂಗಳೂರಿನ ಬಸವನಗುಡಿಯ ಎನ್‌ಆರ್ ಕಾಲೋನಿಯಲ್ಲಿ ಬೆಳೆದ ವೈಸ್‌ ಅಡ್ಮಿ ರಲ್‌ ಕೃಷ್ಣ ಸ್ವಾಮಿನಾಥನ್‌ ಭಾನುವಾರ ಅಧಿಕಾರ ಸ್ವೀಕರಿಸಲಿದ್ದಾರೆ.

 ನವದೆಹಲಿ: ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ಬೆಂಗಳೂರಿನ ಬಸವನಗುಡಿಯ ಎನ್‌ಆರ್ ಕಾಲೋನಿಯಲ್ಲಿ ಬೆಳೆದ ವೈಸ್‌ ಅಡ್ಮಿ ರಲ್‌ ಕೃಷ್ಣ ಸ್ವಾಮಿನಾಥನ್‌ ಭಾನುವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಅಡ್ಮಿರಲ್‌ ದಿನೇಶ್‌ ಕುಮಾರ್‌ ತ್ರಿಪಾಠಿ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ, ಸ್ವಾಮಿನಾಥನ್‌ ಹೊಸ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. 2028ರ ಡಿ.31ರವರೆಗೆ ಅವರ ಅವಧಿ ಇರಲಿದೆ.

ಕರ್ನಾಟಕದಲ್ಲೇ ಶಿಕ್ಷಣ:

ಬಸವನಗುಡಿಯ ಎನ್‌ಆರ್ ಕಾಲೋನಿಯಲ್ಲಿ ಬೆಳೆದ ಸ್ವಾಮಿನಾಥನ್‌, ಬಿಷಪ್ ಕಾಟನ್ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ವಿಜಯಪುರದ ಸೈನಿಕ ಶಾಲೆಯಲ್ಲಿ ಸೇನಾ ಶಿಕ್ಷಣ ಪೂರೈಸಿದರು. ಮೊದಲ ಪ್ರಯತ್ನದಲ್ಲೇ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆ ಪಾಸ್ ಮಾಡಿ, 1987ರಲ್ಲಿ 19ನೇ ವಯಸ್ಸಿನಲ್ಲೇ ಭಾರತೀಯ ನೌಕಾಪಡೆಗೆ ನೇಮಕಗೊಂಡರು. 

ಸದ್ಯ ಪಶ್ಚಿಮ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫಿಸರ್ ಕಮಾಂಡಿಂಗ್-ಇನ್-ಚೀಫ್

ಸದ್ಯ ಪಶ್ಚಿಮ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫಿಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು, ಐಎನ್‌ಎಸ್ ವಿಕ್ರಮಾದಿತ್ಯದ ಕಮಾಂಡರ್ ಆಗಿ, ನೌಕಾಪಡೆಯ ಉಪಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದೀದಿ ಸೋದರಳಿಯಗೆ ಬೀದಿಯಲ್ಲೇ ಏಟು!
ಸಿಯುಇಟಿ ವೇಳೆ ಭಾರಿ ತಾಂತ್ರಿಕ ಸಮಸ್ಯೆ - ಎನ್‌ಟಿಎ ಪರೀಕ್ಷೆಯಲ್ಲಿ ಮತ್ತೆ ಅವ್ಯವಸ್ಥೆ