ಭಾರತ್ ಜೋಡೋ ಯಾತ್ರೆಗೆ 670 ರು. ನೀಡಿದರೆ ಸಿಗುತ್ತೆ ರಾಹುಲ್‌ ಟೀಶರ್ಟ್‌

KannadaprabhaNewsNetwork |  
Published : Jan 28, 2024, 01:19 AM ISTUpdated : Jan 28, 2024, 06:58 AM IST
ಶರ್ಟ್‌ | Kannada Prabha

ಸಾರಾಂಶ

ರಾಹುಲ್‌ ಗಾಂಧಿ ಅವರ ಭಾರತ್‌ ಜೊಡೊ ನ್ಯಾಯ ಯಾತ್ರೆಗೆ 670 ರು. ದೇಣಿಗೆ ನೀಡಿದರೆ ರಾಹುಲ್‌ ಗಾಂಧಿ ಸಹಿ ಇರುವ ಟೀ ಶರ್ಟ್‌ ಪಡೆಯಬಹುದು ಎಂದು ತಿಳಿಸಿದೆ.

ನವದೆಹಲಿ: ಲೋಕಸಭೆ ಚುನಾವಣೆ ಕಾರಣ ನಡೆದಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್‌ ಜೋಡೋ ನ್ಯಾಯ ಯಾತ್ರೆಗೆ ಕಾಂಗ್ರೆಸ್ ದೇಣಿಗೆ ಬಯಸಿದೆ.

6,700 ಕಿಮೀ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಪ್ರತಿ ಕಿ.ಮೀ.ಗೆ 10 ಪೈಸೆಯಂತೆ ದೇಣಿಗೆ ನೀಡಿದರೆ 670 ರು. ಆಗುತ್ತದೆ, ಈ ರೀತಿ 670 ರು. 

ದೇಣಿಗೆ ನೀಡಿದರೆ ರಾಹುಲ್‌ ಗಾಂಧಿಯವರ ಸಹಿ ಇರುವ ಟಿ-ಶರ್ಟ್‌ ಅನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಕಾಂಗ್ರೆಸ್‌ ಶನಿವಾರ ಘೋಷಿಸಿದೆ. 

ಇನ್ನು ₹67 ದೇಣಿಗೆ ನೀಡುವವರು ರಾಹುಲ್‌ ಸಹಿ ಇರುವ ಪತ್ರವನ್ನು ಪಡೆಯಲಿದ್ದಾರೆ.

ಇದು ಘೋಷಣೆಯಾದ ಎರಡು ಗಂಟೆಗಳಲ್ಲಿ 2 ಕೋಟಿ ರು. ದೇಣಿಗೆ ಸಿಕ್ಕಿದೆ, ಕ್ರೌಡ್‌ಫಂಡಿಂಗ್ ಅಭಿಯಾನದಿಂದ ಇಲ್ಲಿಯವರೆಗೆ ₹ 20 ಕೋಟಿ ಗಳಿಸಿದೆ ಎಂದು ಪಕ್ಷ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೊಜ್ತಬಾ ಪತ್ತೆಗಾಗಿ ಅಮೆರಿಕ,ಇಸ್ರೇಲ್‌ ಗುಪ್ತಚರ ಹುಡುಕಾಟ
ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌!