ಆರಾ (ಬಿಹಾರ): ‘ಕಾಂಗ್ರೆಸ್ ಪಕ್ಷವು ಪಾಕಿಸ್ತಾನದ ಪರ ನಿಲುವನ್ನು ಹೊಂದಿದೆ’ ಎಂದು ಪರೋಕ್ಷವಾಗಿ ತಿವಿದಿರುವ ಪ್ರಧಾನಿ ನರೇಂದ್ರ ಮೋದಿ, ‘ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ಆಪರೇಷನ್ ಸಿಂದೂರದ ಮೂಲಕ ಭಾರತ ದಾಳಿ ನಡೆಸಿದಾಗ, ಪಾಕಿಸ್ತಾನ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ನಿದ್ದೆ ಕೂಡ ಹಾಳಾಗಿತ್ತು. ಇಬ್ಬರೂ ಇಂದಿಗೂ ಚೇತರಿಸಿಕೊಂಡಿಲ್ಲ’ ಎಂದು ಚಾಟಿ ಬೀಸಿದ್ದಾರೆ.
ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಇಂದು ಭಾರತವು ಭಯೋತ್ಪಾದಕರನ್ನು ಅವರದೇ ಆದ ಅಡಗುತಾಣಗಳಲ್ಲಿ ಬೇಟೆಯಾಡುತ್ತಿದೆ. ಇತ್ತೀಚೆಗೆ ನಾವು ಆಪರೇಷನ್ ಸಿಂದೂರ ನಡೆಸಿದ್ದೇವೆ. ನಾವು ನಮ್ಮ ಭರವಸೆಯನ್ನು ಈಡೇರಿಸಿದ್ದು, ಅದನ್ನು ನಿಮ್ಮ ಮುಂದೆ ಸಾಬೀತುಪಡಿಸಿದ್ದೇವೆ. ಹೀಗಿದ್ದಾಗ ಪ್ರತಿಯೊಬ್ಬ ಭಾರತೀಯನು ನಮ್ಮ ವೀರ ಸೈನಿಕರ ಬಗ್ಗೆ ಹೆಮ್ಮೆ ಪಡಬೇಕಲ್ಲವೇ? ಆದರೆ ಸೈನ್ಯದ ಯಶಸ್ಸಿನ ಹೊರತಾಗಿಯೂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಅದರ ಬಗ್ಗೆ ಅತೃಪ್ತ ಆಗಿದ್ದಂತೆ ತೋರುತ್ತಿತ್ತು.
ಪಾಕಿಸ್ತಾನದಲ್ಲಿ ಸ್ಫೋಟಗಳು ಸಂಭವಿಸಿದಾಗ, ಕಾಂಗ್ರೆಸ್‌ನ ‘ರಾಜಕುಟುಂಬ’ ನಿದ್ರೆ ಕಳೆದುಕೊಂಡಿತು. ಇಲ್ಲಿಯವರೆಗೆ, ಪಾಕಿಸ್ತಾನ ಮತ್ತು ಕಾಂಗ್ರೆಸ್‌ನ ನಾಯಕರು ಆಪರೇಷನ್ ಸಿಂದೂರದಿಂದ ಚೇತರಿಸಿಕೊಂಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.
ಸೇನೆಯಲ್ಲಿ ಬಿಹಾರ ಮೂಲದ ಯೋಧರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಆಪರೇಷನ್ ಸಿಂದೂರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಆರ್ರಾ: ‘ಕಾಂಗ್ರೆಸ್‌ನವರಿಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಕಂಡರೆ ಆಗಲ್ಲ. ಆದರೆ ಲಾಲು ಪಕ್ಷವು ಕಾಂಗ್ರೆಸ್ ನಾಯಕರ ಹಣೆಗೆ ಬಂದೂಕಿಟ್ಟು ಸಿಎಂ ಅಭ್ಯರ್ಥಿ ಪಟ್ಟ ಪಡೆದುಕೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ‘ಆರ್‌ಜೆಡಿಗೆ ಸಿಎಂ ಸ್ಥಾನವನ್ನು ಬಿಟ್ಟುಕೊಡುವುದು ಕಾಂಗ್ರೆಸ್‌ಗೆ ಎಂದಿಗೂ ಇಷ್ಟವಿರಲಿಲ್ಲ’ ಎಂದಿದ್ದಾರೆ.--
ಆರ್‌ಜೆಡಿ ಗೆದ್ದರೆಕಿಡ್ನಾಪ್, ಕೊಲೆ,ಸುಲಿಗೆಗೆ ಖಾತೆ: ಶಾಮುಜಫ್ಫರ್‌ಪುರ: ‘ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಮಗ ತೇಜಸ್ವಿ ಮುಖ್ಯಮಂತ್ರಿಯಾದರೆ ರಾಜ್ಯದ ಸಚಿವ ಸಂಪುಟದಲ್ಲಿ ಕೊಲೆ, ಅಪಹರಣ, ಸುಲಿಗೆ ಎನ್ನುವ ಹೊಸ 3 ಖಾತೆಗಳು ಸೇರ್ಪಡೆಯಾಗಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಎನ್‌ಡಿಎಗೆ ಮತ ನೀಡಿದರೆ ಜಂಗಲ್ ರಾಜ್ಯದಿಂದ ಮುಕ್ತಿ ಸಿಗಲಿದೆ ಎಂದಿದ್ದಾರೆ.
ಪಟನಾ: ಬಿಹಾರದಲ್ಲಿ ಅಧಿಕಾರದ ಚುಕ್ಕಾಣಿ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಗರಿಗೆದರಿರುವ ನಡುವೆಯೇ ಇಂಡಿಯಾ ಕೂಟದ ಸಿಎಂ ಅಭ್ಯರ್ಥಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು, ‘ನ.14ರಂದು ನಾವೇ ಗೆಲ್ಲುತ್ತೇವೆ. 18 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ’ ಎಂದು ಘೋಷಿಸಿದ್ದಾರೆ.