ಪಿಟಿಐ ಲಖನೌ
ಪ್ರಾಥಮಿಕ ತನಿಖಾ ವರದಿ ಸಿದ್ಧಪಡಿಸಿರುವ ಎಸ್‌ಐಟಿ, ‘ಪ್ರತ್ಯಕ್ಷದರ್ಶಿಗಳು ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಕಾಲ್ತುಳಿತಕ್ಕೆ ಕಾರ್ಯಕ್ರಮದ ಆಯೋಜಕರೇ ಪ್ರಾಥಮಿಕ ಹೊಣೆಗಾರರು. ಅಲ್ಲದೆ, ಈ ಸ್ಥಳಕ್ಕೆ ಅನುಮತಿ ನೀಡುವ ಮುನ್ನ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳ ಪರಿಶೀಲನೆಯನ್ನೂ ಮಾಡಿಲ್ಲ’ ಎಂದಿದೆ. ಆದರೆ ಇದೇ ವೇಳೆ, ‘ಯಾವುದೇ ದೊಡ್ಡ ಪಿತೂರಿಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಸಂಪೂರ್ಣ ತನಿಖೆಯ ಅಗತ್ಯ ಇದೆ’ ಎಂದು ಒತ್ತಿ ಹೇಳಿದೆ.ಇತ್ತೀಚೆಗೆ ಭೋಲೆ ಬಾಬಾನ ವಕೀಲರು ಮಾತನಾಡಿ, ‘ಕೆಲವು ಅಪರಿಚಿತ ವ್ಯಕ್ತಿಗಳು " ಸಿಂಪಡಿಸಿದ ಕೆಲವು ‘ವಿಷಕಾರಿ ವಸ್ತು’ಗಳು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪಿತೂರಿಯ ಶಂಕೆಯನ್ನು ಎಸ್ಐಟಿ ವ್ಯಕ್ತಪಡಿಸಿರುವುದು ಇಲ್ಲಿ ಗಮನಾರ್ಹ.ಅಮಾನತು:
ಹತ್ರಾಸ್ ಕಾಲ್ತುಳಿತದ ಎಸ್‌ಐಟಿ ವರದಿಯ ಆಧಾರದ ಮೇಲೆ ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸ್ಥಳೀಯ ಉಪವಿಭಾಗ ಅಧಿಕಾರಿ, ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇತರ ನಾಲ್ವರನ್ನು ಅಮಾನತುಗೊಳಿಸಿದೆ.