ಕೇರಳದಲ್ಲಿ 18 ವರ್ಷದ ದಲಿತ ಅಥ್ಲೀಟ್‌ ಮೇಲೆ ಕೋಚ್‌ ಸೇರಿ 64 ಮಂದಿಯಿಂದ ಅತ್ಯಾಚಾರ

KannadaprabhaNewsNetwork |  
Published : Jan 12, 2025, 01:15 AM ISTUpdated : Jan 12, 2025, 04:43 AM IST
ಕೇರಳ | Kannada Prabha

ಸಾರಾಂಶ

  ಕೇರಳದಲ್ಲಿ 18 ವರ್ಷದ ದಲಿತ ಅಥ್ಲೀಟ್‌ ಮೇಲೆ ಆಕೆಯ ಕೋಚ್‌ಗಳು, ಸಹ ಆಟಗಾರರು ಸೇರಿದಂತೆ 64 ಪುರುಷರು 5 ವರ್ಷಗಳಿಂದ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಪಟ್ಟಣಂತಿಟ್ಟ: ಕೇರಳದಲ್ಲಿ 18 ವರ್ಷದ ದಲಿತ ಅಥ್ಲೀಟ್‌ ಮೇಲೆ ಆಕೆಯ ಕೋಚ್‌ಗಳು, ಸಹ ಆಟಗಾರರು ಸೇರಿದಂತೆ 64 ಪುರುಷರು 5 ವರ್ಷಗಳಿಂದ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಇದೀಗ ದೂರು ನೀಡಿದ್ದು, ಇದರನ್ವಯ ಪೊಲೀಸರು ಆರೋಪಿಗಳ ವಿರುದ್ಧ 4 ಎಫ್‌ಐಆರ್‌ ದಾಖಲಿಸಿ 15 ಮಂದಿಯನ್ನು ಬಂಧಿಸಿದ್ದಾರೆ.

‘8ನೇ ತರಗತಿಯಲ್ಲಿದ್ದಾಗ ಅಂದರೆ 13 ವರ್ಷದವಳಿದ್ದಾಗ ಕಿರುಕುಳ ಆರಂಭವಾಯಿತು. ಪಕ್ಕದ ಮನೆಯ ವ್ಯಕ್ತಿಯೊಬ್ಬ ನನಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕವಾಗಿ ಬಳಸಿಕೊಂಡ. ನಂತರ ಕೆಲವರು ನನ್ನ ಬಡತನ ದುರ್ಬಳಕೆ ಮಾಡಿಕೊಂಡು ಶೋಷಣೆ ಮಾಡಿದರು. ನಾನು ಅಥ್ಲೀಟ್‌ ಆಗಿದ್ದ ಕಾರಣ ಕೋಚ್‌ಗಳು, ಆಟಗಾರರೂ ರೇಪ್‌ ಮಾಡಿದರು. ಈ ವೇಳೆ ನನ್ನ ಅಶ್ಲೀಲ ವಿಡಿಯೋ ಶೂಟ್‌ ಮಾಡಿಕೊಂಡು ಅವರು ಇತರ ಪರಿಚಯಸ್ಥರ ಜತೆ ಹಂಚಿಕೊಂಡರು ಹಾಗೂ ಬ್ಲಾಕ್‌ ಮೇಲ್‌ ಆರಂಭಿಸಿದರು. ಆಗ ಇತರರು ಕೂಡ ವಿಡಿಯೋ ತೋರಿಸಿ ಶೋಷಣೆ ನಡೆಸಿದರು’ ಎಂದು ಆಕೆ ಹೇಳಿಕೊಂಡಿದ್ದಾಳೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:

ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲುಸಿ) ಸದಸ್ಯರು ವಾಡಿಕೆಯಂತೆ ಫೀಲ್ಡ್‌ ವಿಸಿಟ್‌ ಮಾಡುವಾಗ ಯುವತಿಯ ಮನೆಗೂ ಹೋಗಿದ್ದು, ಆಗ ಯುವತಿ ಕರಾಳ ಕೃತ್ಯದ ಬಾಯಿ ಬಿಟ್ಟಿದ್ದಾಳೆ. ಬಳಿಕ ಈ ಸಮಿತಿ ದೂರು ನೀಡಿದ್ದು, ಅತ್ಯಾಚಾರ ಪ್ರಕರಣ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ. ಯುವತಿಯು ಅತ್ಯಾಚಾರಿಗಳ ಜತೆ ಮಾತನಾಡಲು ತಂದೆಯ ಫೋನ್‌ ಬಳಸಿದ್ದು, ಅದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪ್ರಕರಣದ ಕುರಿತು ತನಿಖೆ ನಡೆಸಲು ಪತ್ತಣಂತಿಟ್ಟ ಎಸ್ಪಿ ವಿಶೇಷ ತಂಡ ರಚಿಸಿದ್ದಾರೆ. 15 ಜನರನ್ನು ಬಂಧಿಸಿ ಉಳಿದವರಿಗೆ ಬಲೆ ಬೀಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ