ಪಾಪಿಷ್ಟರು ಮಾತ್ರ ಕುಂಭಮೇಳಕ್ಕೆ ಹೋಗ್ತಾರೆ: ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್

KannadaprabhaNewsNetwork |  
Published : Jan 12, 2025, 01:15 AM ISTUpdated : Jan 12, 2025, 04:44 AM IST
ಅಜಾದ್‌ | Kannada Prabha

ಸಾರಾಂಶ

’ಪಾಪ ಮಾಡಿದವರು ಮಾತ್ರ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ನಾನು ಯಾವುದೇ ಪಾಪ ಮಾಡಿಲ್ಲ. ಹೀಗಾಗಿ ಈ ರೀತಿ ಸಾರ್ವಜನಿಕವಾಗಿ ಸ್ನಾನ ಮಾಡುವ ನಾಟಕ ಮಾಡುವುದಿಲ್ಲ’ ಎಂದು ಭೀಮ್‌ ಆರ್ಮಿ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಸಂಸದ ಚಂದ್ರಶೇಖರ ಆಜಾದ್‌ ಹೇಳಿದ್ದಾರೆ.

ಪ್ರಯಾಗ್‌ರಾಜ್: ’ಪಾಪ ಮಾಡಿದವರು ಮಾತ್ರ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ನಾನು ಯಾವುದೇ ಪಾಪ ಮಾಡಿಲ್ಲ. ಹೀಗಾಗಿ ಈ ರೀತಿ ಸಾರ್ವಜನಿಕವಾಗಿ ಸ್ನಾನ ಮಾಡುವ ನಾಟಕ ಮಾಡುವುದಿಲ್ಲ’ ಎಂದು ಭೀಮ್‌ ಆರ್ಮಿ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಸಂಸದ ಚಂದ್ರಶೇಖರ ಆಜಾದ್‌ ಹೇಳಿದ್ದಾರೆ.

ಅವರ ಹೇಳಿಕೆಗೆ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಕಿಡಿಕಾರಿದ್ದು. ‘ಜನರು ತಮ್ಮ ಪಾಪಗಳನ್ನು ಶುದ್ಧೀಕರಿಸಲು ಪ್ರಯತ್ನಿಸುತ್ತಿದ್ದರೆ, ಆ ಪ್ರಯತ್ನವನ್ನು ಯಾರೂ ತಕರಾರು ತೆಗೆಯಬಾರದು. ಮೇಳದಲ್ಲಿ ಪಾಲ್ಗೊಳ್ಳುವವರನ್ನೆಲ್ಲ ಪಾಪಿಗಳು ಎಂದು ಕರೆಯಬಾರದು’ ಎಂದರು.

ಪ್ರಧಾನಿ ಮೋದಿ ಜೀವನ-ಸಾಧನೆ ಕುರಿತು ಸಂಸ್ಕೃತದಲ್ಲಿ ಮಹಾಕಾವ್ಯ

ಬೆಹರಾಂಪುರ್‌: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ, ಸಾಧನೆ ಕುರಿತು ಸಿನಿಮಾ, ಪಠ್ಯ ಆಯ್ತು. ಇದೀಗ ಒಡಿಶಾದ ಗಂಜಾಮ್‌ ಜಿಲ್ಲೆಯ ಸಂಸ್ಕೃತ ವಿದ್ವಾಂಸರೊಬ್ಬರು ಸಂಸ್ಕೃತ ಭಾಷೆಯಲ್ಲಿ ''''''''ಮಹಾಕಾವ್ಯ''''''''ವೊಂದನ್ನೇ ರಚಿಸಿದ್ದಾರೆ.

ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಸೋಮನಾಥ್‌ ದಶ್‌ ಅವರು 700 ಪುಟಗಳ ನರೇಂದ್ರ ಮೋದಿ ಆರೋಹಣಂ ಹೆಸರಿನ ಈ ಮಹಾಕಾವ್ಯ ರಚಿಸಿದ್ದು, ಗುಜರಾತ್‌ನ ವೆರವಲ್‌ನ ಸೋಮ್ನಾಥ್‌ ಸಂಸ್ಕೃತ ವಿವಿ ಇದನ್ನು ಪ್ರಕಟಿಸಿದೆ. ಕಳೆದ ವಾರ ವೆರವಲ್‌ನಲ್ಲಿ ನಡೆದ ಯುವಜನೋತ್ಸವದಲ್ಲಿ ಈ ಕೃತಿ ಲೋಕಾರ್ಪಣೆ ಮಾಡಲಾಯಿತು.

ನಾಲ್ಕು ವರ್ಷಗಳ ಅಧ್ಯಯನದ ಬಳಿಕ ಸಿದ್ಧಗೊಂಡಿರುವ ಈ ಕೃತಿಯು 12 ಅಧ್ಯಾಯ, 1200 ಶ್ಲೋಕಗಳನ್ನು ಒಳಗೊಂಡಿದೆ. ಸಂಸ್ಕೃತ ಜತೆಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲೂ ಶ್ಲೋಕದ ವಿವರಣೆ ಇದೆ. ಈ ಕೃತಿಯಲ್ಲಿ ಮೋದಿ ಅ‍ವರ ಬಾಲ್ಯ, ಗುಜರಾತ್‌ ಮುಖ್ಯಮಂತ್ರಿ, ಪ್ರಧಾನಿಯಾಗಿ ಅವರ ಜೀವನ ಮತ್ತು ಸಾಧನೆಯನ್ನು ಚಿತ್ರಿಸಲಾಗಿದೆ.ಬಡ ಕುಟುಂಬದಲ್ಲಿ ಹುಟ್ಟಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ಮೋದಿ ಅವರು ವಿಶ್ವಾದ್ಯಂತ ಯುವಕರ ಸ್ಪೂರ್ತಿಯಾಗಿದ್ದಾರೆ. ಅವರ ರಾಜಕೀಯ ಜೀವನ ಮತ್ತು ಹೋರಾಟದ ಬದುಕು ಯಾವತ್ತಿಗೂ ಇತಿಹಾಸದಲ್ಲಿ ದಾಖಲಾಗಲಿವೆ. ಈ ಕಾರಣಕ್ಕೆ ನಾನು ಅವರ ಜೀವನ ಮತ್ತು ಸಾಧನೆ ಕುರಿತು ಮಹಾಕಾವ್ಯ ರಚಿಸಲು ಮುಂದಾದೆ ಎಂದು ಪ್ರೊಫೆಸರ್ ತಿಳಿಸಿದ್ದಾರೆ.

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ: ಕಮಲ್‌