ತೈಲ ಅಭಾವದ ಆತಂಕದ ನಡುವೆಯೇ ಯುಎಇನ ಫುಜೈರಾಹ್‌ ಬಂದರಿನಿಂದ 80800 ಟನ್‌ ಕಚ್ಚಾತೈಲ ಭರ್ತಿ ಮಾಡಿಕೊಂಡ ಭಾರತದ ಹಡಗೊಂದು ಭಾನುವಾರ ತವರಿನತ್ತ ಪ್ರಯಾಣ ಬೆಳೆಸಿದೆ. ಭಾರತೀಯ ಧ್ವಜ ಹೊಂದಿದ್ದ ಜಗ್‌ ಲಾಡ್ಕಿ ಕಚ್ಚಾ ಟ್ಯಾಂಕರ್‌ ತೈಲವನ್ನು ತುಂಬಿಸಿಕೊಂಡು ಸುರಕ್ಷಿತವಾಗಿ ಭಾರತದತ್ತ ಪ್ರಯಾಣ ಬೆಳೆಸಿದೆ

ನವದೆಹಲಿ: ತೈಲ ಅಭಾವದ ಆತಂಕದ ನಡುವೆಯೇ ಯುಎಇನ ಫುಜೈರಾಹ್‌ ಬಂದರಿನಿಂದ 80800 ಟನ್‌ ಕಚ್ಚಾತೈಲ ಭರ್ತಿ ಮಾಡಿಕೊಂಡ ಭಾರತದ ಹಡಗೊಂದು ಭಾನುವಾರ ತವರಿನತ್ತ ಪ್ರಯಾಣ ಬೆಳೆಸಿದೆ.

ಭಾರತೀಯ ಧ್ವಜ ಹೊಂದಿದ್ದ ಜಗ್‌ ಲಾಡ್ಕಿ

ಭಾರತೀಯ ಧ್ವಜ ಹೊಂದಿದ್ದ ಜಗ್‌ ಲಾಡ್ಕಿ ಕಚ್ಚಾ ಟ್ಯಾಂಕರ್‌ ತೈಲವನ್ನು ತುಂಬಿಸಿಕೊಂಡು ಸುರಕ್ಷಿತವಾಗಿ ಭಾರತದತ್ತ ಪ್ರಯಾಣ ಬೆಳೆಸಿದೆ. ಈ ಹಡಗು ಬಂದರಿನಲ್ಲಿ ಕಚ್ಚಾ ತೈಲವನ್ನು ಲೋಡ್‌ ಮಾಡುತ್ತಿದ್ದಾಗಲೇ ತೈಲ ಟರ್ಮಿನಲ್‌ ಮೇಲೆ ಇರಾನ್‌ ದಾಳಿ ನಡೆಸಿತ್ತು. ಆದರೂ ಸುರಕ್ಷಿತವಾಗಿ 80,800 ಟನ್‌ ಮರ್ಬನ್‌ ಕಚ್ಚಾ ತೈಲ ತುಂಬಿಸಿಕೊಂಡು ಭಾರತದತ್ತ ಪ್ರಯಾಣ ಬೆಳೆಸಿದೆ. ಈ ವೇಳೆ ಹಡಗಿನಲ್ಲಿದ್ದ ನಾವಿಕರು ಕೂಡ ಸುರಕ್ಷಿತವಾಗಿದ್ದಾರೆ.

ಅಪಾಯವಿಲ್ಲದೆ ಹೊರಬಂದ ಭಾರತದ 4ನೇ ಹಡಗು

ಇದು ಯುದ್ಧ ಪೀಡಿತ ರಾಷ್ಟ್ರದಿಂದ ಯಾವುದೇ ಅಪಾಯವಿಲ್ಲದೆ ಹೊರಬಂದ ಭಾರತದ 4ನೇ ಹಡಗು. ಶನಿವಾರವಷ್ಟೇ ಭಾರತದ ಶಿವಾಲಿಕ್‌ ಮತ್ತು ನಂದಾದೇವಿ ಹಡಗುಗಳು ಸುಮಾರು 92,712 ಟನ್‌ ಎಲ್‌ಪಿಜಿ ಹೊತ್ತು ಹಾರ್ಮೋಜ್‌ ಜಲಸಂಧಿ ದಾಟಿದ್ದವು. ಅದಕ್ಕೂ ಮುನ್ನ ಶುಕ್ರವಾರ ಜಗ್‌ ಪ್ರಕಾಶ್‌ ನೌಕೆ ಭಾರತಕ್ಕೆ ಪ್ರಯಾಣ ಬೆಳೆಸಿತ್ತು.