ಕೂಡಂಕುಳಂ ಅಣುಸ್ಥಾವರ ದತ್ತಾಂಶ ಸೋರಿಕೆ : ನೀಲನಕ್ಷೆ ಲೀಕ್‌

KannadaprabhaNewsNetwork |  
Published : Jul 16, 2026, 03:30 AM IST
Nuclear

ಸಾರಾಂಶ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕೂಡಂಕುಳಂನಲ್ಲಿರುವ ದೇಶದ ಅತಿದೊಡ್ಡ ಪರಮಾಣು ಸ್ಥಾವರದ ದತ್ತಾಂಶಗಳು ಹ್ಯಾಕ್‌ ಆಗಿದ್ದು, ಅದರ ನೀಲನಕ್ಷೆ ಸೇರಿದಂತೆ ಮಹತ್ವದ ದತ್ತಾಂಶಗಳು ಸೋರಿಕೆಯಾಗಿವೆ.

ಚೆನ್ನೈ: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕೂಡಂಕುಳಂನಲ್ಲಿರುವ ದೇಶದ ಅತಿದೊಡ್ಡ ಪರಮಾಣು ಸ್ಥಾವರದ ದತ್ತಾಂಶಗಳು ಹ್ಯಾಕ್‌ ಆಗಿದ್ದು, ಅದರ ನೀಲನಕ್ಷೆ ಸೇರಿದಂತೆ ಮಹತ್ವದ ದತ್ತಾಂಶಗಳು ಸೋರಿಕೆಯಾಗಿವೆ. ಇದು, ಪರಮಾಣು ಶಕ್ತಿ ವೃದ್ಧಿಯ ಕನಸಿನೊಂದಿಗೆ ಕೆಲಸ ಮಾಡುತ್ತಿರುವ ಭಾರತದ ಪಾಲಿಗೆ ಗಂಭೀರ ಸಮಸ್ಯೆಯಾಗಿದೆ. ಭಾರತದ ಸೈಬರ್ ಭದ್ರತಾ ಸಂಸ್ಥೆ, ಸಿಇಆರ್‌ಟಿ-ಇನ್‌ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.

ಆ ಅಣುಸ್ಥಾವರದ ಗುತ್ತಿಗೆದಾರರಲ್ಲಿ ಒಂದಾದ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್‌ ಹೊಂದಿರುವ ಮಾಹಿತಿಗಳು ಸೋರಿಕೆ ಆಗಿವೆ, ಈ ಮಾಹಿತಿಯನ್ನು ಹ್ಯಾಕರ್‌ಗಳ ತಂಡವಾದ ರ್‍ಯಾನ್‌ಸಂವೇರ್‌ ಗ್ರೂಪ್‌, ಡಾರ್ಕ್‌ ವೆಬ್‌ನಲ್ಲಿ ಹಂಚಿಕೊಂಡಿದೆ. ಕೆಲ ದತ್ತಾಂಶ ಸೋರಿಕೆಯಾಗಿರುವುದನ್ನು ರಿಲಯನ್ಸ್‌ ಕೂಡ ಒಪ್ಪಿಕೊಂಡಿದ್ದು, ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಿರುವುದಾಗಿ ತಿಳಿಸಿದೆ. ಆದರೆ ಯಾವೆಲ್ಲಾ ಗೌಪ್ಯ ಮಾಹಿತಿಗಳು ಬಹಿರಂಗವಾಗಿವೆ ಎಂಬುದನ್ನು ತಿಳಿಸಿಲ್ಲ.  

ಇವು ಸೋರಿಕೆ?:

ವರದಿಗಳ ಪ್ರಕಾರ, ಅಣುಸ್ಥಾವರದ 3 ಮತ್ತು 4ನೇ ಯೂನಿಟ್‌ನ ನಿರ್ಮಾಣ ಹಾಗೂ ವಿನ್ಯಾಸದ ಗುತ್ತಿಗೆ ಒಪ್ಪಂದವನ್ನು ರಿಲಯನ್ಸ್‌ 2018ರಲ್ಲಿ ಮಾಡಿಕೊಂಡಿದೆ. ಇದು 2027ರ ವೇಳೆಗೆ ಕಾರ್ಯಾರಂಭ ಮಾಡಬೇಕಿತ್ತು. ಇಲ್ಲಿ 2 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗಬೇಕಿದೆ. ಇದೀಗ ಈ ಯೋಜನೆಗೆ ಸಂಬಂಧಿಸಿದ ಒಟ್ಟು 8.58 ಲಕ್ಷ ಕಡತಗಳು ಸೋರಿಕೆಯಾಗಿದ್ದು, ಇವುಗಳಲ್ಲಿ 19 ಸಾವಿರ ಫೈಲ್‌ಗಳು ಅತಿ ಸೂಕ್ಷ್ಮ ಎನ್ನಲಾಗಿದೆ.

ಇದರಲ್ಲಿ, ರಷ್ಯಾದಿಂದ ಆಮದಾಗಿರುವ ಅಣು ರೆಯಾಕ್ಟರ್‌ನ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಗಳಿಲ್ಲ. ಬದಲಿಗೆ, ವೆಂಟಿಲೇಷನ್‌ ಹಾಗೂ ಕೂಲಿಂಗ್‌ ವ್ಯವಸ್ಥೆಗಳ ನೀಲನಕ್ಷೆ, ಮಾರಾಟಗಾರರ ಪ್ರಸ್ತಾವನೆ, ಅನುಮೋದಿತ ಪೂರೈಕೆದಾರರ ಪಟ್ಟಿ ಮತ್ತು ಜಂಟಿ ಪರಿಶೀಲನೆಗೆ ಸಂಬಂಧಿಸಿದ ಮಾಹಿತಿಗಳನ್ನು ಕದಿಯಲಾಗಿದೆ ಎಂದು ಮೂಲಗಳು ಹೇಳಿವೆ. 

ಅಪಾಯವೇನು?:

ಡೇಟಾ ಸೋರಿಕೆಯಿಂದ ಅತಿಸೂಕ್ಷ್ಮ ಮಾಹಿತಿಗಳು ಬಹಿರಂಗವಾಗುವ ಕಾರಣ ಇದು ಪರಮಾಣು ಸ್ಥಾವರಗಳ ಭದ್ರತೆಗೆ ಅಪಾಯ ಒಡ್ಡುತ್ತದೆ.

ಈ ಹಿಂದೆ ನೈಕಿ ಮತ್ತು ಟಾಟಾ ಗ್ರೂಪ್‌ನ ಕಾರ್ಪೊರೆಟ್‌ ಮಾಹಿತಿಯನ್ನು ಇದೇ ರೀತಿ ಕದ್ದು, ಭಾರೀ ಮೊತ್ತಕ್ಕೆ ಬೇಡಿಕೆ ಇಡಲಾಗಿತ್ತು. ಒಂದೊಮ್ಮೆ ಕಂಪನಿಗಳು ಹಣ ಕೊಡಲು ನಿರಾಕರಿಸಿದರೆ ಅದನ್ನು ಹ್ಯಾಕರ್‌ಗಳು ಅವರ ವೆಬ್‌ಸೈಟ್‌ಗಳಲ್ಲಿ ಬಹಿರಂಗಪಡಿಸುತ್ತಾರೆ. ಅದು ಪ್ರತಿಸ್ಪರ್ಧಿಗಳ ಕೈಸೇರಿದರೆ ಕಂಪನಿ ಮುಳುಗುವ ಅಪಾಯವಿರುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

9,911 ಹೊಸ ಎಂಬಿಬಿಎಸ್‌ ಸೀಟು ಘೋಷಣೆ
ವಾಂಗ್ಚುಕ್‌ಗೆ 2 ದಿನದಲ್ಲಿ ಸಾವಿನ ಅಪಾಯ : ಹೈಕೋರ್ಟ್‌ಗೆ ಅರ್ಜಿ