ಚಂಡೀಗಢ: ತನ್ನ ಇಬ್ಬರು ಮಹಿಳಾ ಭಕ್ತರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ, ಡೇರಾ ಸಚ್ಚಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್‌ರಹೀಂ ಸಿಂಗ್‌ಗೆ ಸ್ಥಳೀಯ ನ್ಯಾಯಾಲಯ 30 ದಿನಗಳ ಪರೋಲ್ ನೀಡಿದೆ. ಇದು 2017ರಲ್ಲಿ ಗುರ್ಮೀತ್‌ಗೆ ಜೈಲು ಪಾಲಾದ ಬಳಿಕ 9 ವರ್ಷಗಳಲ್ಲಿ ಪಡೆಯುತ್ತಿರುವ 16ನೇ ಪರೋಲ್ ಆಗಿದೆ. ಪದೇ ಪದೇ ಪರೋಲ್‌ಗೆ ಸಾಕಷ್ಟು ಟೀಕೆಯ ಹೊರತಾಗಿಯೂ ಕೋರ್ಟ್‌ಗಳು ಗುರ್ಮೀತ್‌ಗೆ ಪರೋಲ್ ನೀಡುವುದನ್ನು ನಿಲ್ಲಿಸಿಲ್ಲ. ಈತನಿಗೆ ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ಇತರೆ ರಾಜ್ಯಗಳಲ್ಲಿ ಭಾರೀ ಪ್ರಮಾಣದ ಭಕ್ತರಿದ್ದಾರೆ.