ಗಾಲಿ ಕುರ್ಚಿ ಸಿಗದೆ ವೃದ್ಧ ಸಾವು: ಏರ್‌ ಇಂಡಿಯಾಗೆ ₹30 ಲಕ್ಷ ದಂಡ

KannadaprabhaNewsNetwork |  
Published : Mar 01, 2024, 02:24 AM IST
ವಿಮಾನ | Kannada Prabha

ಸಾರಾಂಶ

ಗಾಲಿ ಕುರ್ಚಿ ಸಿಗದೆ ಮುಂಬೈ ವಿಮಾನ ನಿಲ್ದಾಣದಲ್ಲಿ ವೃದ್ಧ ಸಾವನ್ನಪ್ಪಿದ ಕಾರಣ ಏರ್‌ ಇಂಡಿಯಾ ಸಂಸ್ಥೆಗೆ ಡಿಜಿಸಿಎ 30 ಲಕ್ಷ ರು. ದಂಡ ವಿಧಿಸಿದೆ.

ನವದೆಹಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ ವ್ಹೀಲ್‌ಚೇರ್‌ ಸೌಲಭ್ಯ ನೀಡದ ಕಾರಣ ವೃದ್ಧನೊಬ್ಬ ನಡೆದು ಬರುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ಸಂಸ್ಥೆಗೆ ನಾಗರಿಕ ವಿಮಾನಯಾನ ನಿಯಂತ್ರಣಾ ಪ್ರಾಧಿಕಾರ (ಡಿಜಿಸಿಎ) 30 ಲಕ್ಷ ರು. ದಂಡ ವಿಧಿಸಿದೆ. ಫೆ.12ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ ಇಂಡಿಯಾ ಸಂಸ್ಥೆಯು ಸಮರ್ಪಕ ಸ್ಪಷ್ಟೀಕರಣ ನೀಡದ ಕಾರಣ ದಂಡ ವಿಧಿಸಲಾಗಿದ್ದು, ಇನ್ನು ಮುಂದೆ ಎಲ್ಲ ಸಂಸ್ಥೆಗಳಿಗೂ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಹೀಲ್‌ಚೇರ್‌ಗಳನ್ನು ಲಭ್ಯವಿರುವಂತೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗಲ್ವಾನ್‌ ಸಂಘರ್ಷದ ಸೇನಾ ಪುಸ್ತಕದಿಂದ‘ರಾಜಕೀಯ ಕದನ’!
ಬಂಗಾಳದಲ್ಲಿ ಬಾಬ್ರಿ ಶೈಲಿ ಮಸೀದಿ ನಿರ್‍ಮಾಣ ಶುರು