ಡಿಜಿಟಲ್‌ ಅರೆಸ್ಟ್‌ : ವಿಜಯಪುರದ ವ್ಯಕ್ತಿ ಧೈರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

KannadaprabhaNewsNetwork |  
Published : Oct 28, 2024, 12:56 AM ISTUpdated : Oct 28, 2024, 04:34 AM IST
Narendra Modi

ಸಾರಾಂಶ

ವಂಚಕರು ಮಾಡುವ ಡಿಜಿಟಲ್‌ ಅರೆಸ್ಟ್‌ನಿಂದ ಪಾರಾಗುವುದು ಹೇಗೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿವರಿಸುವಾಗ ಕರ್ನಾಟಕದ ಸಂತೋಷ ಪಾಟೀಲ್‌ ಎಂಬುವರ ವಿಡಿಯೋ ಸಂಭಾಷಣೆಯನ್ನು ಉದಾಹರಿಸಿದ್ದಾರೆ.

ಹೈದರಾಬಾದ್: ವಂಚಕರು ಮಾಡುವ ಡಿಜಿಟಲ್‌ ಅರೆಸ್ಟ್‌ನಿಂದ ಪಾರಾಗುವುದು ಹೇಗೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿವರಿಸುವಾಗ ಕರ್ನಾಟಕದ ಸಂತೋಷ ಪಾಟೀಲ್‌ ಎಂಬುವರ ವಿಡಿಯೋ ಸಂಭಾಷಣೆಯನ್ನು ಉದಾಹರಿಸಿದ್ದಾರೆ.

 ಈ ವಿಡಿಯೋ ಸಂಭಾಷಣೆಯನ್ನು ಟ್ವೀಟ್‌ ಮಾಡಿದ್ದು ಕನ್ನಡಿಗ ಐಪಿಎಸ್‌ ಅಧಿಕಾರಿ, ತೆಲಂಗಾಣದ ಟಿಜಿಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಸಿ. ಸಜ್ಜನರ್ ಎಂಬುದು ವಿಶೇಷ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಜ್ಜನರ್, ‘ಸೆ.19 ರಂದು ಕರ್ನಾಟಕದ ವಿಜಯಪುರದ ಸಂತೋಷ ಪಾಟೀಲ್ ಎಂಬ ವ್ಯಕ್ತಿ ನಕಲಿ ಪೊಲೀಸರೊಂದಿಗೆ ನನ್ನ ಎಕ್ಸ್ ಖಾತೆಯಲ್ಲಿ ನಡೆಸಿದ ಸಂಭಾಷಣೆಯನ್ನು ಮೊದಲು ಪೋಸ್ಟ್ ಮಾಡಿದ್ದೆ.

 ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಭಾಗವಾಗಿ ಮಾಡಿದ ಆ ಟ್ವೀಟ್ ಮಾಡಿದ್ದೆ. ಅದನ್ನು ಗುರುತಿಸಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಂತೋಷ್ ಪಾಟೀಲ್ ಅವರ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ’ ಎಂದಿದ್ದಾರೆ..

‘ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆಗಳ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಈ ವಿಷಯವನ್ನು ಬೆಳಕಿಗೆ ತಂದಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು’ ಎಂದೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ಖರ್ಗೆ ಹೆಗಲಿಗೆ ನಿರ್ಧಾರ ಯಾರು ಆಗ್ತಾರೆ ಕೇರಳಂ ಸಿಎಂ?
ಪಶ್ಚಿಮ ಬಂಗಾಳ ವಿಧಾನಸಭೆ ವಿರ್ಸಜನೆ ಗೌರ್‍ನರ್‌ ಗೇಟ್‌ ಪಾಸ್‌ : ದೀದಿ ಈಗ ಬೀದಿಗೆ!