ಪ್ರಧಾನ್‌ ಹುದ್ದೆ ಬಿಡದಿದ್ರೆ ಬೆಂಗ್ಳೂರು ಸೇರಿ ದೇಶವ್ಯಾಪಿ ಜಿರಳೆ ಹೋರಾಟ

KannadaprabhaNewsNetwork |  
Published : Jun 11, 2026, 12:30 AM IST
Cockroach

ಸಾರಾಂಶ

ನೀಟ್‌ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಜೂ.13ರೊಳಗೆ ರಾಜೀನಾಮೆ ನೀಡಬೇಕು. ಇಲ್ಲದೇ ಹೋದಲ್ಲಿ ಬೆಂಗಳೂರು ಸೇರಿದಂತೆ ದೇಶವ್ಯಾಪಿ ಹೋರಾಟ ತೀವ್ರಗೊಳಿಸುವುದಾಗಿ ಕಾಕ್ರೋಚ್‌ ಜನತಾ ಪಕ್ಷದ ಸ್ಥಾಪಕ ಅಭಿಜಿತ್‌ ದೀಪ್ಕೆ ಎಚ್ಚರಿಸಿದ್ದಾರೆ.

  ಪುಣೆ: ನೀಟ್‌ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಜೂ.13ರೊಳಗೆ ರಾಜೀನಾಮೆ ನೀಡಬೇಕು. ಇಲ್ಲದೇ ಹೋದಲ್ಲಿ ಬೆಂಗಳೂರು ಸೇರಿದಂತೆ ದೇಶವ್ಯಾಪಿ ಹೋರಾಟ ತೀವ್ರಗೊಳಿಸುವುದಾಗಿ ಕಾಕ್ರೋಚ್‌ ಜನತಾ ಪಕ್ಷದ ಸ್ಥಾಪಕ ಅಭಿಜಿತ್‌ ದೀಪ್ಕೆ ಎಚ್ಚರಿಸಿದ್ದಾರೆ.

ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿ

ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೀಪ್ಕೆ, ‘ದೇಶದ ಯುವಕರು ಇನ್ಮುಂದೆ ಮೌನವಾಗಿರಲು ಸಾಧ್ಯವಿಲ್ಲ. ಅವರು ಹೆದರುವುದಿಲ್ಲ ಮತ್ತು ಹಿಂದೆ ಸರಿಯುವುದಿಲ್ಲ. ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಯಿಂದ ಕೋಟಿಗೂ ಹೆಚ್ಚಿನ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದ್ದಾರೆ. ಇದರ ಹೊಣೆಯನ್ನು ಯಾರೂ ತೆಗೆದುಕೊಳ್ಳಲು ಸಿದ್ಧರಿಲ್ಲ. ಶನಿವಾರದೊಳಗೆ ಸಚಿವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತೇವೆ. ಗುರುವಾರ ಪುಣೆಯಿಂದ ಹೋರಾಟ ಆರಂಭವಾಗುತ್ತದೆ. ನಂತರ ಬೆಂಗಳೂರು, ಲಖನೌ, ಅಮೃತಸರ, ಜೈಪುರಗಳಲ್ಲಿಯೂ ಪ್ರತಿಭಟನೆ ನಡೆಸಲಾಗುವುದು’ ಎಂದಿದ್ದಾರೆ.

ಮುಂದುವರೆದಂತೆ ‘ಗಡುವು ನೀಡಿದ ದಿನದೊಳಗೆ ಪ್ರಧಾನ್‌ ರಾಜೀನಾಮೆ ಕೊಡದಿದ್ರೆ ಜೂ.20ಕ್ಕೆ ದೆಹಲಿಯಲ್ಲಿ ಯುವಕರೆಲ್ಲರೂ ಸೇರಿ ದೊಡ್ಡ ಆಂದೋಲನ ನಡೆಸುತ್ತೇವೆ’ ಎಂದಿದ್ದಾರೆ.

ಸಿಜೆಪಿ ಪಕ್ಷವಾಗಿ ನೋಂದಣಿ ಆದರೂ ಜಿರಳೆ ಚಿಹ್ನೆ ಸಿಗಲ್ಲ

ನವದೆಹಲಿ: ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಕಾಕ್ರೋಚ್‌ ಜನತಾ ಪಕ್ಷವು ಮುಂದೊಂದು ದಿನ ರಾಜಕೀಯ ಪಕ್ಷವಾಗಿ ನೋಂದಾಯಿಸಿಕೊಂಡರೆ, ಅದಕ್ಕೆ ‘ಜಿರಳೆ’ ಚಿಹ್ನೆ ಸಿಗುವುದು ಅನುಮಾನ. ಕಾರಣ ಚುನಾವಣಾ ಆಯೋಗದ ಪಟ್ಟಿಯಲ್ಲಿ ಜಿರಳೆ ಸೇರಿದಂತೆ ಯಾವುದೇ ಜೀವಿಗಳ ಚಿತ್ರ ಇಲ್ಲ. 

1990ರ ದಶಕದಲ್ಲಿ ಹೊಸದಾಗಿ ನೋಂದಾಯಿಸಲ್ಪಟ್ಟ ಹಲವು ರಾಜಕೀಯ ಪಕ್ಷಗಳು ಪ್ರಾಣಿಗಳ ಚಿಹ್ನೆಯನ್ನು ಬಳಸಿಕೊಳ್ಳುತ್ತಿದ್ದವು. ಸಾಲದ್ದಕ್ಕೆ ಚುನಾವಣಾ ರ್‍ಯಾಲಿಗಳ ವೇಳೆ ಜೀವಂತ ಪ್ರಾಣಿಗಳನ್ನೇ ತಂದುಬಿಡುತ್ತಿದ್ದರು. ಆ ಪ್ರಾಣಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿ ಶೋಚನೀಯವಾಗಿದ್ದ ಕಾರಣ, ಅದರ ವಿರುದ್ಧ ಪ್ರಾಣಿಗಳ ಪರ ಹೋರಾಟಗಾರ್ತಿ ಮನೇಕಾ ಗಾಂಧಿ ಸೇರಿದಂತೆ ಅನೇಕ ಹೋರಾಟಗಾರರು ಧ್ವನಿ ಎತ್ತಿದ್ದರು. ಪರಿಣಾಮ ಚುನಾವಣಾ ಆಯೋಗವು ಪ್ರಾಣಿ, ಪಕ್ಷಿಗಳ ಚಿಹ್ನೆ ತೆಗೆದುಹಾಕಿ, ತನ್ನದೇ ಕೆಲ ಆಯ್ಕೆ ನೀಡಿತು. ಇದರಲ್ಲಿ ‘ಜಿರಳೆ’ ಚಿತ್ರ ಇಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಜೆಐಗೆ ಸಿಜೆಪಿ ಥ್ಯಾಂಕ್ಸ್!
ಜಿರಳೆಗೆ ಕೊನೆಗೂ ಪ್ರಧಾನ್‌ ಬಲಿ