ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷದ ಅವಧಿಯಲ್ಲಿ ತೆರಿಗೆ ಸಂಗ್ರಹ ಶೇ.182 ಏರಿಕೆ

KannadaprabhaNewsNetwork |  
Published : Oct 18, 2024, 12:01 AM ISTUpdated : Oct 18, 2024, 07:04 AM IST
ತೆರಿಗೆ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 10 ವರ್ಷದ ಅಧಿಕಾರವಧಿಯಲ್ಲಿ ದೇಶದಲ್ಲಿ ನೇರ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ದಾಖಲೆಯ ಶೇ.182ರಷ್ಟು ಏರಿಕೆ ದಾಖಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 10 ವರ್ಷದ ಅಧಿಕಾರವಧಿಯಲ್ಲಿ ದೇಶದಲ್ಲಿ ನೇರ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ದಾಖಲೆಯ ಶೇ.182ರಷ್ಟು ಏರಿಕೆ ದಾಖಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ಮೋದಿ ಅಧಿಕಾರಕ್ಕೆ ಬಂದ ವರ್ಷವಾದ 2014-15ರಲ್ಲಿ 4.29 ಲಕ್ಷ ಕೋಟಿ ರು. ಕಾರ್ಪೊರೆಟ್ ತೆರಿಗೆ ಮತ್ತು 2.66 ಲಕ್ಷ ಕೋಟಿ ರು. ವೈಯಕ್ತಿಕ ತೆರಿಗೆ ಸೇರಿ ಒಟ್ಟು 6.96 ಲಕ್ಷ ಕೋಟಿ ರು. ನೇರ ತೆರಿಗೆ ಸಂಗ್ರಹವಾಗಿತ್ತು. ಇದೀಗ ಮೋದಿ ಅವರ ಅಧಿಕಾರದ 10ನೇ ವರ್ಷದವಾದ 2023-24ರಲ್ಲಿ ನೇರ ತೆರಿಗೆ ಸಂಗ್ರಹ 9.11 ಲಕ್ಷ ಕೋಟಿ ರು. ತಲುಪಿದೆ. ಅಂದರೆ ನೇರ ತೆರಿಗೆ ಸಂಗ್ರಹದಲ್ಲಿ ಶೇ.182ರಷ್ಟು ಏರಿಕೆಯಾಗಿದೆ ಎಂದು ತೆರಿಗೆ ಇಲಾಖೆ ಹೇಳಿದೆ.

ಇನ್ನು 2014-15ರಲ್ಲಿ 4.04 ಕೋಟಿಯಿದ್ದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಸಂಖ್ಯೆ 2023-24ರಲ್ಲಿ 8.61 ಕೋಟಿಯಾಗಿದೆ. ನೇರ ತೆರಿಗೆ-ಜಿಡಿಪಿ ಅನುಪಾತ ಶೇ.5.55 ರಿಂದ ಶೇ.6.64ಕ್ಕೆ ಏರಿದೆ. ಕಳೆದ 10 ವರ್ಷದಲ್ಲಿ ತೆರಿಗೆದಾರರ ಸಂಖ್ಯೆಯೂ 5.70 ಕೋಟಿಯಿಂದ 10.41ಕ್ಕೆ ತಲುಪಿದೆ ಎಂದು ಇಲಾಖೆ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಟ್ರಂಪ್‌ ಪುತ್ರಿಯ ಹತ್ಯೆಗೂ ಸಂಚು ರೂಪಿಸಿದ್ದ ಉಗ್ರ
ಕೇಂದ್ರ ಸಚಿವಾಲಯಪೈಕಿ ಸಚಿವ ಜೋಶಿ ಇಲಾಖೆ ನಂಬರ್‌ 1!