- ಮಂದಿರ ನಿರ್ವಹಣೆಯಲ್ಲಿ ಲೋಪ ನಿಜ
- ಬಂಧಿತರೆಲ್ಲ ಎಸ್‌ಬಿಐ ನೇಮಿಸಿದ ಸಿಬ್ಬಂದಿ
ಪಿಟಿಐ ಪುಣೆ‘ಅಯೋಧ್ಯೆಯ ರಾಮ ಮಂದಿರದ ಆಡಳಿತ ನಿರ್ವಹಣೆಯಲ್ಲಿ ಲೋಪಗಳಾಗಿದ್ದು ನಿಜ. ಆದರೆ ಈ ವಿವಾದದಿಂದಾಗಿ ನಾನು ರಾಜೀನಾಮೆ ನೀಡುವುದಿಲ್ಲ. ವೈಯಕ್ತಿಕವಾಗಿ ನಾನು ತಪ್ಪಿತಸ್ಥನಲ್ಲ’ ಎಂದು ರಾಮ ಮಂದಿರದ ಖಜಾಂಚಿ ಗೋವಿಂದ ದೇವಗಿರಿ ಮಹಾರಾಜ ಅವರು ಹೇಳಿದ್ದಾರೆ.ಗೋವಿಂದ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ವದಂತಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ಈ ವರದಿಗಳು ದುರುದ್ದೇಶಪೂರಿತ. ನಾನು ಎಂದಿಗೂ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಲ್ಲ. ಸಮಯ ಬಂದಾಗ ಹೋರಾಡುತ್ತೇನೆ. ಓಡಿ ಹೋಗುವುದಿಲ್ಲ. ತಪ್ಪುಗಳು ಎಂದಿಗೂ ಪುನಾರವರ್ತನೆಯಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ಹೇಳಿದರು.ಇದೇ ವೇಳೆ, ‘ಹುಂಡಿ ಅಕ್ರಮಕ್ಕೆ ಬಂಧಿತರಾದವರು ಎಸ್‌ಬಿಐನಿಂದ ನೇಮಕವಾಗಿರುವ ಸಿಬ್ಬಂದಿ. ಅವರನ್ನು ಬ್ಯಾಂಕ್ ನೇಮಿಸಿಕೊಂಡಿದೆ. ಟ್ರಸ್ಟ್ ಅಲ್ಲ. ಶಿಫಾರಸುಗಳ ಮೇರೆಗೆ ಕೆಲವು ನೇಮಕಾತಿಗಳನ್ನು ಮಾಡಿದ್ದರೂ ಸಹ, ಅವರ ಅರ್ಹತೆಗಳನ್ನು ಪರಿಶೀಲಿಸುವುದು ಎಸ್‌ಬಿಐ ಜವಾಬ್ದಾರಿ. ಈ ವಿಷಯದಲ್ಲಿ ಎಸ್‌ಬಿಐ ಜಾಗೃತ ಆಗಿರಬೇಕು’ ಎಂದರು.