ಭಾರತೀಯ ಮೆನನ್‌ ಬಾಹ್ಯಾಕಾಶಕ್ಕೆ

KannadaprabhaNewsNetwork |  
Published : Jul 15, 2026, 01:45 AM IST
ಅನಿಲ್‌ | Kannada Prabha

ಸಾರಾಂಶ

ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್‌ಕೋಸ್‌ಮೋಸ್‌ನ ಯೋಜನೆಯೊಂದರ ಭಾಗವಾಗಿ ಭಾರತೀಯ ಮೂಲಕ ನಾಸಾ ಗಗನಯಾನಿ ಅನಿಲ್‌ ಮೆನನ್‌ (49) ಅವರು ಮಂಗಳವಾರ ಸಂಜೆ ಬಾಹ್ಯಾಕಾಶಕ್ಕೆ ನೆಗೆದಿದ್ದಾರೆ. ಇದು ಅಂತರಿಕ್ಷಕ್ಕೆ ಅವರು ಕೈಗೊಂಡಿರುವ ಮೊದಲ ಯಾತ್ರೆಯಾಗಿದೆ.

ರಷ್ಯಾ ನೌಕೇಲಿ ಮೊದಲ ಬಾರಿ ಅಂತರಿಕ್ಷಕ್ಕೆ

8 ತಿಂಗಳ ಐಎಸ್‌ಎಸ್‌ ಮಿಷನ್‌ಗಾಗಿ ಪಯಣ

ವೈದ್ಯ, ಕರ್ನಲ್‌ ಆಗಿದ್ದ ಇವರೀಗ ಗಗನಯಾನಿ

ಮಾಸ್ಕೋ: ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್‌ಕೋಸ್‌ಮೋಸ್‌ನ ಯೋಜನೆಯೊಂದರ ಭಾಗವಾಗಿ ಭಾರತೀಯ ಮೂಲಕ ನಾಸಾ ಗಗನಯಾನಿ ಅನಿಲ್‌ ಮೆನನ್‌ (49) ಅವರು ಮಂಗಳವಾರ ಸಂಜೆ ಬಾಹ್ಯಾಕಾಶಕ್ಕೆ ನೆಗೆದಿದ್ದಾರೆ. ಇದು ಅಂತರಿಕ್ಷಕ್ಕೆ ಅವರು ಕೈಗೊಂಡಿರುವ ಮೊದಲ ಯಾತ್ರೆಯಾಗಿದೆ.

ಕಝಾಕಿಸ್ತಾನದ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಸೋಯುಜ್ ಎಂಎಸ್‌-29 ಬಾಹ್ಯಾಕಾಶ ನೌಕೆ ಉಡಾವಣೆಯಾಗಿದ್ದು, ಇದರಲ್ಲಿ ಮೆನನ್ ಸಂಗಡ ಇನ್ನಿಬ್ಬರು ರಷ್ಯನ್ನರಿದ್ದರು. ಈ ನೌಕೆಯು 3 ತಾಸುಗಳ ಬಳಿಕ, ಕಕ್ಷೆಯಲ್ಲಿರುವ ಪ್ರಯೋಗಾಲಯದೊಂದಿಗೆ ಡಾಕ್‌ (ಕೂಡಿಕೊಳ್ಳುವುದು) ಆಗಲಿದ್ದು, ಮುಂದಿನ 8 ತಿಂಗಳುಗಳ ಕಾಲ ಮೂವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಇರಲಿದ್ದಾರೆ. ಈ ವೇಳೆ ಸೆಮಿಕಂಡಕ್ಟರ್ ಉತ್ಪಾದನೆ, ಬಾಹ್ಯಾಕಾಶ ವೈದ್ಯಕೀಯ, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ರಕ್ತ ಪರಿಚಲನೆ ಮತ್ತು ಬಯೋಪ್ರಿಂಟಿಂಗ್ ತಂತ್ರಜ್ಞಾನ ಸೇರಿದಂತೆ ಹಲವು ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ. ಭಾರತ ಮತ್ತು ಉಕ್ರೇನ್‌ನವರಾದ ದಂಪತಿಯ ಪುತ್ರನಾಗಿರುವ ಅನಿಲ್‌ ಅವರು ಕೇರಳ ಮೂಲದವರು. ವೈದ್ಯರಾಗಿದ್ದ ಇವರು ಅಮೆರಿಕದ ಬಾಹ್ಯಾಕಾಶ ಪಡೆಯಲ್ಲಿ ಕರ್ನಲ್‌ ಕೂಡ ಆಗಿದ್ದರು. ಅಫ್ಘಾನಿಸ್ತಾನದಲ್ಲಿನ ಅಮೆರಿಕದ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎಐ ಚಾಟ್‌ಬಾಟ್‌ ಬಳಸಿ ಉಗ್ರರಿಂದ ಬಾಂಬ್‌ ತಯಾರಿಕೆ!
ಬೆಂಗ್ಳೂರು ಸ್ಟಾರ್ಟಪ್‌ನಿಂದ ಮ್ಯಾಗ್ನೆಟ್‌ ಇಲ್ಲದ ಇವಿ ಮೋಟರ್‌ ಉತ್ಪಾದನೆ