ಅಚ್ಚರಿಯ ವಿದ್ಯಮಾನದಲ್ಲಿ ಬಿಜೆಪಿ ಮಾಜಿ ನಾಯಕ ಅಣ್ಣಾಮಲೈ ಜಿರಳೆ ಪಕ್ಷದ ಹೋರಾಟ ಬೆಂಬಲ ಸೂಚಿಸಿದ್ದಾರೆ. ‘ಸಿಜೆಪಿಯವರ ನಡವಳಿಕೆಗಳು ಮತ್ತು ಪ್ರತಿಭಟನಾ ವಿಧಾನಗಳ ಬಗ್ಗೆ ನಾನು ಒಪ್ಪದಿರಬಹುದು.

ಕೊಯಮತ್ತೂರು: ಅಚ್ಚರಿಯ ವಿದ್ಯಮಾನದಲ್ಲಿ ಬಿಜೆಪಿ ಮಾಜಿ ನಾಯಕ ಅಣ್ಣಾಮಲೈ ಜಿರಳೆ ಪಕ್ಷದ ಹೋರಾಟ ಬೆಂಬಲ ಸೂಚಿಸಿದ್ದಾರೆ. ‘ಸಿಜೆಪಿಯವರ ನಡವಳಿಕೆಗಳು ಮತ್ತು ಪ್ರತಿಭಟನಾ ವಿಧಾನಗಳ ಬಗ್ಗೆ ನಾನು ಒಪ್ಪದಿರಬಹುದು. ಆದರೆ ಅವರು ಎತ್ತಲು ಬಯಸುವ ಪ್ರಶ್ನೆಗಳ ವಿಚಾರದಲ್ಲಿ ನಾನು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ’ ಎಂದಿದ್ದಾರೆ.

ಎತ್ತುತ್ತಿರುವ ಪ್ರಶ್ನೆಗಳು ನ್ಯಾಯಸಮ್ಮತ

ಮಂಗಳವಾರ ಟ್ವೀಟ್‌ ಮಾಡಿರುವ ಅವರು, ಸಿಜೆಪಿಯ ಎಲ್ಲಾ ಕ್ರಮಗಳನ್ನು ನಾನು ಒಪ್ಪದಿದ್ದರೂ ಅವರು ಎತ್ತುತ್ತಿರುವ ಪ್ರಶ್ನೆಗಳು ನ್ಯಾಯಸಮ್ಮತ. ಪ್ರತಿಭಟನಾಕಾರರನ್ನು ಬಂಧಿಸುವುದು ನಿಜವಾದ ಅಪಚಾರ, ಪ್ರಶ್ನೆಗಳನ್ನು ಎತ್ತುವುದು ಸಂಘಟನೆಯ ಪ್ರಜಾಪ್ರಭುತ್ವ ಹಕ್ಕು’ ಎಂದು ಬಣ್ಣಿಸಿದ್ದಾರೆ.

ಜೈಲಿನಲ್ಲಿಡುವುದರಿಂದ ಮೂಲ ಸಮಸ್ಯೆಗಳು ಬಗೆಹರಿಯುವುದಿಲ್ಲ

‘ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವುದರಿಂದ ಅವರ ನಾಯಕರು ಇನ್ನಷ್ಟು ಬಲಶಾಲಿಯಾಗುತ್ತಾರೆ ಅಷ್ಟೇ. ಪೊಲೀಸರ ಇಂತಹ ಕಠಿಣ ಕ್ರಮಗಳು ರಾಜಕೀಯವಾಗಿ ಪ್ರತಿಕೂಲ ಪರಿಣಾಮ ಬೀರಬಹುದು. ಟೀಕಾಕಾರರನ್ನು ಜೈಲಿನಲ್ಲಿಡುವುದರಿಂದ ಮೂಲ ಸಮಸ್ಯೆಗಳು ಬಗೆಹರಿಯುವುದಿಲ್ಲ, ಬದಲಾಗಿ ಅವರ ನಾಯಕರ ವರ್ಚಸ್ಸು ಹೆಚ್ಚಾಗುತ್ತದೆ. ಪೊಲೀಸರು ಬಂಧಿಸುವ ಬದಲು ಸಾರ್ವಜನಿಕರು ಎತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸುವತ್ತ ಅಧಿಕಾರಿಗಳು ಗಮನಹರಿಸಬೇಕು’ ಎಂದಿದ್ದಾರೆ.