ಫಾಸ್ಟ್ಯಾಗ್ ಕೆವೈಸಿ ಅಪ್ಡೇಟ್‌ 1 ತಿಂಗಳು ವಿಸ್ತರಣೆ

KannadaprabhaNewsNetwork | Updated : Feb 01 2024, 08:06 AM IST

ಸಾರಾಂಶ

ಫಾಸ್ಟ್ಯಾಗ್‌ ಕೆವೈಸಿ ಅಪ್ಡೇಟ್‌ ಮಾಡಲು ಫೆ.29ರವರೆಗೆ ಅಪ್‌ಡೇಟ್‌ಗೆ ಅವಕಾಶ ಕಲ್ಪಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಯಾಗ್‌ಗೆ ಕೆವೈಸಿ ಅಪ್ಡೇಟ್‌ ಮಾಡಲು ನೀಡಲಾಗಿದ್ದ ಗಡುವನ್ನು ಒಂದು ತಿಂಗಳು ವಿಸ್ತರಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಇದರಿಂದಾಗಿ ಜ.31ರ ಬದಲು ಫೆ.29 ಅಪ್‌ಡೇಟ್‌ಗೆ ಕೊನೆಯ ದಿನವಾಗಲಿದೆ.‘ಇದುವರೆಗೆ 1.27 ಅಕ್ರಮ ಫಾಸ್ಟ್ಯಾಗ್‌ಗಳ ಪೈಕಿ ಕೇವಲ 7 ಲಕ್ಷ ಫಾಸ್ಟ್ಯಾಗ್‌ಗಳನ್ನು ಮಾತ್ರ ಇ-ಕೆವೈಸಿ ಮಾಡಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್‌ಗೆ ಕೆವೈಸಿ ಅಪ್ಡೇಟ್‌ ಮಾಡಲು ನೀಡಲಾಗಿದ್ದ ಗಡುವನ್ನು ಜ.31ರಿಂದ ಮತ್ತೊಂದು ತಿಂಗಳು ವಿಸ್ತರಣೆ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಜನರು ಹೆದ್ದಾರಿ ಟೋಲ್‌ಗಳಲ್ಲಿ, ತಮ್ಮ ಬ್ಯಾಂಕ್‌ಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಫಾಸ್ಟ್ಯಾಗ್ ವೆಬ್‌ಸೈಟ್‌ನಲ್ಲಿ ಇ-ಕೆವೈಸಿ ಅಪ್‌ಡೇಟ್ ಮಾಡಬಹುದಾಗಿದೆ.

ಒಂದು ವಾಹನ ಒಂದು ಫಾಸ್ಟ್ಯಾಗ್‌ ಪರಿಕಲ್ಪನೆಯಲ್ಲಿ ಫಾಸ್ಟ್ಯಾಗ್‌ಗಳಿಗೆ ಕೆವೈಸಿ (ಗ್ರಾಹಕರ ಮಾಹಿತಿ ತಿಳಿಯುವಿಕೆ) ಅಪ್ಡೇಟ್‌ ಮಾಡಲು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. 

ಇದರಿಂದ ಒಂದೇ ಫಾಸ್ಟ್ಯಾಗ್‌ನಿಂದ ಹಲವು ವಾಹನಗಳಲ್ಲಿ ಬಳಕೆ ಮಾಡುವ ಪ್ರಕ್ರಿಯೆ ತಪ್ಪಿಸಬಹುದಾಗಿದೆ.

Share this article