ಅಗ್ನಿವೀರ ವಿರುದ್ಧ ಕಾಂಗ್ರೆಸ್‌ ಜೈ ಜವಾನ್‌ ಆಂದೋಲನ

KannadaprabhaNewsNetwork |  
Published : Feb 01, 2024, 02:03 AM ISTUpdated : Feb 01, 2024, 11:20 AM IST
ಭಾರತೀಯ ಸೇನೆ | Kannada Prabha

ಸಾರಾಂಶ

ಅಗ್ನಿವೀರ ನೇಮಕಾತಿಗೆ ಚಾಲನೆ ನೀಡಿದ ನಂತರ ಸೇನೆಗೆ ಕಾಯಂ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದ್ದ 1.5 ಲಕ್ಷ ಮಂದಿಗೆ ನೇಮಕಾತಿ ಪತ್ರ ನೀಡದ ವಿರುದ್ಧ ರಾಹುಲ್‌ ಗಾಂಧಿ ಆಂದೋಲನ ಆರಂಭಿಸಿದ್ದಾರೆ.

ನವದೆಹಲಿ: ಸೇನೆಗೆ 4 ವರ್ಷ ಮಟ್ಟಿಗೆ ಅರೆಕಾಲಿಕ ಸೇವೆ ಸಲ್ಲಿಸಲು ಸೈನಿಕರ ನೇಮಿಸಿಕೊಳ್ಳುವ ‘ಅಗ್ನಿವೀರ’ ಯೋಜನೆ ವಿರುದ್ಧ ಕಾಂಗ್ರೆಸ್‌ ಪಕ್ಷ ಬುಧವಾರದಿಂದ ಆಂದೋಲನ ಆರಂಭಿಸಿದೆ.

ಭಾರತ್‌ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಿಹಾರದಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ.

2019-22ರ ಅವಧಿಯಲ್ಲಿ 1.5 ಲಕ್ಷ ಯುವಕರು ಸೇನೆಯ ಕಾಯಂ ಹುದ್ದೆಗೆ ಆಯ್ಕೆಯಾಗಿದ್ದರು.

ಆದರೆ 2022ರಲ್ಲಿ ಅಗ್ನಿವೀರ ಯೋಜನೆ ಆರಂಭಿಸಿದ ನಂತರ ಇವರಿಗೆ ನೇಮಕ ಪತ್ರವನ್ನೇ ನೀಡಲಿಲ್ಲ ಎಂದು ರಾಹುಲ್‌ ಕಿಡಿಕಾರಿದ್ದಾರೆ.

PREV

Recommended Stories

ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ರಾಹುಲ್‌ ಆರೋಪ ನಿರಾಧಾರ : ಚುನಾವಣಾ ಆಯೋಗ ಸ್ಪಷ್ಟನೆ