ನೆಹರು, ಇಂದಿರಾ, ಸೋನಿಯಾರಿಂದ್ಲೇ ಮತಚೋರಿ : ಶಾ

KannadaprabhaNewsNetwork |  
Published : Dec 11, 2025, 01:00 AM IST
Amit Shah

ಸಾರಾಂಶ

ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ, ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರು, ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ 3 ಪ್ರಕರಣಗಳನ್ನು ಮುಂದಿಟ್ಟು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ತಿರುಗೇಟು ನೀಡಿದ್ದಾರೆ.

  ನವದೆಹಲಿ :  ಲೋಕಸಭೆ ಅಧಿವೇಶನದಲ್ಲೂ ಮತಚೋರಿ ಕುರಿತು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ, ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರು, ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ 3 ಪ್ರಕರಣಗಳನ್ನು ಮುಂದಿಟ್ಟು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ತಿರುಗೇಟು ನೀಡಿದ್ದಾರೆ.

ಮತಚೋರಿ ಆರೋಪ ಮಾಡಿದ್ದ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು

ಮತಪಟ್ಟಿ ಪರಿಷ್ಕರಣೆ ಕುರಿತು ಮಂಗಳವಾರದಿಂದ ಆರಂಭವಾಗಿದ್ದ ಚರ್ಚೆಯ ಭಾಗವಾಗಿ ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಶಾ, ಮತಚೋರಿ ಆರೋಪ ಮಾಡಿದ್ದ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡುವ ಯತ್ನ ಮಾಡಿದರು.

ಕಾಂಗ್ರೆಸ್‌ ನಾಯಕರಿಂದ ಮತಚೋರಿ ನಡೆದ 3 ಘಟನೆಗಳನ್ನು ಉಲ್ಲೇಖಿಸುತ್ತೇನೆ

‘ಕಾಂಗ್ರೆಸ್‌ ನಾಯಕರಿಂದ ಮತಚೋರಿ ನಡೆದ 3 ಘಟನೆಗಳನ್ನು ಉಲ್ಲೇಖಿಸುತ್ತೇನೆ. ಸ್ವಾತಂತ್ರ್ಯಾನಂತರ ಸರ್ದಾರ್‌ ವಲ್ಲಭಭಾಯಿ ಪಟೇಲರು ಪ್ರಧಾನಿಯಾಗಬೇಕೆಂದು 28 ಮಂದಿ ಮತ ಚಲಾಯಿಸಿದರೆ, ನೆಹರು ಅವರಿಗೆ ಕೇವಲ ಇಬ್ಬರು ಮತ ಹಾಕಿದರು. ಆದರೂ ಕೊನೆಗೆ ನೆಹರೂ ಅವರೇ ಪ್ರಧಾನಿಯಾದರು. ಇದು ಮೊದಲ ಮತಚೋರಿ. 1975ರಲ್ಲಿ ಇಂದಿರಾ ಗಾಂಧಿಯವರು ರಾಯ್‌ಬರೇಲಿಯಲ್ಲಿ ಗೆಲುವು ಸಾಧಿಸಿದ್ದನ್ನು ಅಲಹಾಬಾದ್‌ ಹೈಕೋರ್ಟ್‌ ಅಮಾನ್ಯಗೊಳಿಸಿತು. ಆದರೆ ಇಂದಿರಾ, ಪ್ರಧಾನಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಂತೆ ಸಂಸತ್ತಲ್ಲಿ ಮಸೂದೆ ಮಂಡಿಸಿದರು. ಇದು 2ನೇ ಮತಚೋರಿ. ಭಾರತದ ಪೌರತ್ವ ಪಡೆವ ಮೊದಲೇ ಸೋನಿಯಾ ಗಾಂಧಿ ಇಲ್ಲಿ ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಇದು 3ನೇ ಮತಚೋರಿ’ ಎಂದು ಅಮಿತ್‌ ಶಾ ಚಾಟಿ ಬೀಸಿದರು.ಜೊತೆಗೆ, ‘ನೆಹರು, ಇಂದಿರಾ, ಲಾಲಬಹದ್ದೂರ್‌ ಶಾಸ್ತ್ರಿ, ರಾಜೀವ್‌ ಗಾಂಧಿ, ಪಿ.ವಿ. ನರಸಿಂಹ ರಾವ್‌, ಅಟಲ್‌ ಬಿಹಾರಿ ವಾಜಪೇಯಿ ಮತ್ತು ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲೂ ಮತಪಟ್ಟಿ ಪರಿಷ್ಕರಣೆ ನಡೆದಿದೆ. ಅದನ್ನು ಯಾವುದೇ ಪಕ್ಷ ವಿರೋಧಿಸಿರಲಿಲ್ಲ. ಏಕೆಂದರೆ ಇದು ಚುನಾವಣೆಗಳನ್ನು ಸ್ವಚ್ಛವಾಗಿಡುವ ಮತ್ತು ಪ್ರಜಾಪ್ರಭುತ್ವವನ್ನು ಆರೋಗ್ಯಕರವಾಗಿಡುವ ಪ್ರಕ್ರಿಯೆ’ ಎಂದು ಕಾಂಗ್ರೆಸ್‌ ವಿರುದ್ಧ ಚಾಟಿ ಬೀಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಿಷ್ಣು ಆಚಾರಿ ಸೇರಿ ಹಲವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ