2024-25ನೇ ಸಾಲಿನ ಏಪ್ರಿಲ್‌ನಿಂದ ಜೂನ್‌ವರೆಗಿನ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.7ಕ್ಕೆ ಕುಸಿತ : 15 ತಿಂಗಳ ಕನಿಷ್ಠ

KannadaprabhaNewsNetwork |  
Published : Aug 31, 2024, 01:33 AM ISTUpdated : Aug 31, 2024, 10:50 AM IST
ಜಿಡಿಪಿ | Kannada Prabha

ಸಾರಾಂಶ

2024-25ನೇ ಸಾಲಿನ ಏಪ್ರಿಲ್‌ನಿಂದ ಜೂನ್‌ವರೆಗಿನ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.7ಕ್ಕೆ ಕುಸಿತ ಕಂಡಿದ್ದು, ಇದು 15 ತಿಂಗಳ ಕನಿಷ್ಠವಾಗಿದೆ. ಕೃಷಿ ಕ್ಷೇತ್ರದಲ್ಲಿನ ಕುಸಿತವು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ, ಚೀನಾಕ್ಕಿಂತ ಭಾರತದ ಜಿಡಿಪಿ ಇನ್ನೂ ಹೆಚ್ಚಾಗಿದೆ.

ನವದೆಹಲಿ: 2024-25ನೇ ಸಾಲಿನ ಏಪ್ರಿಲ್‌ನಿಂದ ಜೂನ್‌ವರೆಗಿನ ಜಿಡಿಪಿ ಬೆಳವಣಿಗೆ ದರ ಶೇ.6.7ಕ್ಕೆ ಕುಸಿತ ಕಂಡಿದೆ. ಇದು 15 ತಿಂಗಳ ಕನಿಷ್ಠವಾಗಿದೆ. ಆದರೆ ಚೀನಾ ಈ ಅವಧಿಯಲ್ಲಿ ಶೇ.4.7ರಷ್ಟು ಪ್ರಗತಿ ಕಂಡಿದ್ದು, ಭಾರತದ ಜಿಡಿಪಿ ಅದಕ್ಕಿಂತ ಹೆಚ್ಚಿದೆ.

2023-24 ಏಪ್ರಿಲ್‌-ಜೂನ್‌ ಅವಧಿಯಲ್ಲಿ ಶೇ.8.2ರ ಜಿಡಿಪಿ ದರ ದಾಖಲಾಗಿತ್ತು. ಅದಕ್ಕಿಂತ ಹಿಂದೆ ಎಂದರೆ 2023ರ ಜನವರಿ-ಮಾರ್ಚ್‌ ಅವಧಿಯಲ್ಲಿ ಶೇ.6.2ರಷ್ಟು ಜಿಡಿಪಿ ಇತ್ತು. ಇದಾದ ನಂತರದ ಕನಿಷ್ಠ ದರ ಈಗಿನ ಶೇ.6.7 ಆಗಿದೆ.ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆಯು ಶೇ.3.7ರಿಂದ ಶೇ.2ಕ್ಕೆ ಕುಸಿತ ಕಂಡಿದೆ. ಇದು ಜಿಡಿಪಿ ಇಳಿಕೆಗೆ ಮುಖ್ಯ ಕಾರಣ. ಆದರೆ ಉತ್ಪಾದನಾ ವಲಯವು ಶೇ.7ರಲ್ಲಿ ಪ್ರಗತಿ ಸಾಧಿಸಿದೆ.

ಭಾರತೀಯ ಪುರುಷರಲ್ಲಿ ಏನೋ ದೋಷವಿದೆ: ತರೂರ್‌

ತಿರುವನಂತಪುರ: ಮಲಯಾಳಂ ಚಿತ್ರೋದ್ಯಮದ ಲೈಂಗಿಕ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಕಾಂಗ್ರೆಸ್‌ ಸಂಸದ ಶಶಿ ತರೂರ್ ಅವರು ‘ಭಾರತೀಯ ಸಮಾಜದಲ್ಲಿನ ಒಟ್ಟಾರೆ ಮನೋಭಾವ ವನ್ನು ಬದಲಿಸಬೇಕು’ ಎಂದು ಕರೆ ನೀಡಿದ್ದಾರೆ ಹಾಗೂ ‘ಭಾರತೀಯ ಪುರುಷರಲ್ಲಿ ಏನೋ ದೋಷವಿದೆ’ ಎಂದು ಟೀಕಿಸಿದ್ದಾರೆ.ಶುಕ್ರವಾರ ಎನ್‌ಡಿಟೀವಿ ಜತೆ ಮಾತನಾಡಿದ ಅವರು, ‘ಈಗ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕು. ಪರಿಹರಿಸಲು ಸಾಧ್ಯವಾಗದಿದ್ದರೆ ಭಾರತೀಯ ಪುರುಷರಲ್ಲಿ ಏನೋ ದೋಷವಿದೆ ಎಂದರ್ಥ. ಲಿಂಗ ಸಮಾನತೆಯ ನಿಜವಾದ ಯುದ್ಧವು ಭಾರತೀಯ ಸಮಾಜದ ಅಧಃಪತನವನ್ನು ಸರಿಪಡಿಸುವಲ್ಲಿ ಅಡಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ