ಎಲ್ಲಾ ವೇಳೆಯೂ ಜೆಮಿನಿ ವಿಶ್ವಾಸಾರ್ಹವಲ್ಲ: ಮೋದಿ ಫ್ಯಾಸಿಸ್ಟ್‌ ಕುರಿತು ಗೂಗಲ್‌ ಆಕ್ಷೇಪ

KannadaprabhaNewsNetwork | Updated : Feb 25 2024, 09:00 AM IST

ಸಾರಾಂಶ

ಎಲ್ಲ ವೇಳೆಯೂ ಜೆಮಿನಿ ಕೊಡುವ ಪ್ರತಿಕ್ರಿಯೆಗಳು ವಿಶ್ವಾಸಾರ್ಹವಲ್ಲ ಎಂದು ಗೂಗಲ್‌ ಆಕ್ಷೇಪ ವ್ಯಕ್ತಪಡಿಸಿದೆ. ಇತ್ತೀಚೆಗೆ ಜೆಮಿನಿಯು ಮೋದಿಯನ್ನು ಫ್ಯಾಸಿಸ್ಟ್‌ ಎಂಬುದಾಗಿ ಬಿಂಬಿಸಿದೆ ಎಂಬುದಾಗಿ ಸುದ್ದಿಯಾಗಿತ್ತು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಫ್ಯಾಸಿಸ್ಟ್’ ಎನ್ನುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದ ಗೂಗಲ್‌ ಕಂಪನಿಯ ಕೃತಕ ಬುದ್ಧಿಮತ್ತೆ ಟೂಲ್‌ ‘ಜೆಮಿನಿ’ ಎಲ್ಲಾ ಸಮಯದಲ್ಲೂ ವಿಶ್ವಾಸಾರ್ಹವಲ್ಲ ಎಂದ ಕಂಪನಿ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗೂಗಲ್‌ ವಕ್ತಾರರು ‘ಜೆಮಿನಿಯನ್ನು ಸೃಜನಶೀಲತೆ ಮತ್ತು ಉತ್ಪಾದಕತೆಯ ಸಾಧನವಾಗಿ ನಿರ್ಮಿಸಲಾಗಿದೆ ಮತ್ತು ಯಾವಾಗಲೂ ಅದು ವಿಶ್ವಾಸಾರ್ಹವಲ್ಲದಿರಬಹುದು.

ವಿಶೇಷವಾಗಿ ಪ್ರಸ್ತುತ ಘಟನೆಗಳು, ರಾಜಕೀಯ ವಿಷಯಗಳು ಅಥವಾ ವಿಕಸನಗೊಳ್ಳುತ್ತಿರುವ ಸುದ್ದಿಗಳ ಕುರಿತು ಕೆಲವು ವಿಷಯಗಳಲ್ಲಿ ಹೀಗೆ ಆಗಬಹುದು.

ನಿರಂತರವಾಗಿ ಜೆಮಿನಿಯನ್ನು ಸುಧಾರಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಫ್ಯಾಸಿಸ್ಟ್‌ ಹೌದೆ’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ‘ಕೆಲವು ತಜ್ಞರ ಪ್ರಕಾರ ಹೌದು’ ಎಂದು ಜೆಮಿನಿ ಉತ್ತರಿಸಿತ್ತು. ಇದು ಭಾರೀ ಟೀಕೆಗೆ ಗುರಿಯಾಗಿತ್ತು.

Share this article