ವಿಶ್ವಸುಂದರಿ ಸ್ಪರ್ಧೆ: ಫೈನಲ್‌ಗೆ ಭಾರತದ ಸುಂದರಿ

KannadaprabhaNewsNetwork |  
Published : May 22, 2025, 12:51 AM ISTUpdated : May 23, 2025, 05:51 AM IST
ನಂದಿನಿ  | Kannada Prabha

ಸಾರಾಂಶ

ವಿಶ್ವಸುಂದರಿ ಸ್ಪರ್ಧೆ ಅಂತಿಮ ಘಟ್ಟ ತಲುಪಿದ್ದು, 24 ಸುಂದರಿಯರು ಪ್ರತಿಭಾ ಪ್ರದರ್ಶನದ ಫೈನಲ್‌ಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಭಾರತದ ಸುಂದರಿ ನಂದಿನಿ ಗುಪ್ತಾ ಕೂಡ ಇದ್ದಾರೆ.

ಹೈದರಾಬಾದ್‌: ವಿಶ್ವಸುಂದರಿ ಸ್ಪರ್ಧೆ ಅಂತಿಮ ಘಟ್ಟ ತಲುಪಿದ್ದು, 24 ಸುಂದರಿಯರು ಪ್ರತಿಭಾ ಪ್ರದರ್ಶನದ ಫೈನಲ್‌ಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಭಾರತದ ಸುಂದರಿ ನಂದಿನಿ ಗುಪ್ತಾ ಕೂಡ ಇದ್ದಾರೆ. ಅಂತಿಮ ಸುತ್ತಿನ ಸ್ಪರ್ಧೆ ಮೇ 23ರಿಂದ ಆರಂಭವಾಗಲಿದೆ. ಮೇ 31ರಂದು ಅಂತಿಮ ದಿನವಾಗಿದ್ದು, ಅಂದು ವಿಶ್ವಸುಂದರಿಯ ಘೋಷಣೆ ನಡೆಯಲಿದೆ. ಅಮೆರಿಕ, ಫಿಲಿಪ್ಪೀನ್ಸ್‌, ನೈಜೀರಿಯಾ, ಜಮೈಕಾ, ಟ್ರಿನಿಡಾಡ್-ಟೊಬೆಗೋ, ಕೀನ್ಯಾ, ಕ್ಯಾಮರೂನ್‌ ಸುಂದರಿಯರೂ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಯೋಗ ದಿನದಲ್ಲಿ ದಾಖಲೆಯ 5 ಲಕ್ಷ ಮಂದಿ ಭಾಗಿ ಗುರಿ

- ಜೂ.21ರಂದು ವಿಶಾಖಪಟ್ಟಣದಲ್ಲಿ ಯೋಗ ದಿನ- ಪ್ರಧಾನಿ ಮೋದಿ ಯೋಗ ಕಾರ್ಯಕ್ರಮದಲ್ಲಿ ಭಾಗಿ

 ಅಮರಾವತಿ : ವಿಶಾಖಪಟ್ಟಣದಲ್ಲಿ ಜೂ.21ರಂದು ಆಯೋಜಿಸುವ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪ್ರತ್ಯಕ್ಷವಾಗಿ 5 ಲಕ್ಷ ಮಂದಿ ಭಾಗಿಯಾಗುವಂತೆ ಮಾಡಿ ದಾಖಲೆ ಸೃಷ್ಟಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಬುಧವಾರ ಹೇಳಿದ್ದಾರೆ.ಇಲ್ಲಿಯ ಉಂಡವಳ್ಳಿಯ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಯೋಗ ದಿನದಲ್ಲಿ ಪರೋಕ್ಷವಾಗಿ ರಾಜ್ಯಾದ್ಯಂತ ಸುಮಾರು 2 ಕೋಟಿ ಮಂದಿ ಸಕ್ರಿಯರಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸಲಿರುವ ಈ ಯೋಗ ದಿನ ಮೂಲಕ ದಕ್ಷಿಣ ರಾಜ್ಯವು ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಕ್ಕೆ ನಾಂದಿಯಾಗಲಿದೆ ಎಂದರು.

ಯೋಗ ಭಾರತವು ವಿಶ್ವಕ್ಕೆ ನೀಡಿದ ಒಂದು ಕೊಡುಗೆ. ಯೋಗ ನಮ್ಮ ದೀರ್ಘಕಾಲಿಕ ಪರಂಪರೆಯಾಗಿದೆ. ಆದರೆ ವಿಶ್ವಾದ್ಯಂತ ಯೋಗವನ್ನು ಗುರುತಿಸುವಂತೆ ಮಾಡಿದವರು ಪ್ರಧಾನಿ ನರೇಂದ್ರ ಮೋದಿ ಎಂದು ನಾಯ್ಡು ಹೇಳಿದರು.ಬಳಿಕ ನಾಯ್ಡು ಅವರು ಯೋಗ ದಿನದ ನೋಂದಣಿಗಾಗಿ ಆ್ಯಪ್‌ವೊಂದನ್ನು ಬಿಡುಗಡೆ ಮಾಡಿದರು.

ವೈಜಾಗ್‌ ಉಕ್ಕು ಕಾರ್ಖಾನೆ ನೌಕರರ ಪರ ಶರ್ಮಿಳಾ ಉಪವಾಸ

ವಿಶಾಖಪಟ್ಟಣ: ಇಲ್ಲಿನ ಉಕ್ಕು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 2000 ಗುತ್ತಿಗೆ ನೌಕರರನ್ನು ಮಂಡಳಿಯು ಕೆಲಸದಿಂದ ತೆಗೆದುಹಾಕಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ನೌಕರರ ಪರವಾಗಿ ಆಂಧ್ರ ಕಾಂಗ್ರೆಸ್‌ ಅಧ್ಯಕ್ಷೆ ವೈ.ಎಸ್‌. ಶರ್ಮಿಳಾ ಧನಿ ಎತ್ತಿದ್ದಾರೆ. ಅವರೊಂದಿಗೆ ತಾವೂ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.ಈ ವೇಳೆ ಕಾರ್ಖಾನೆಯು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿರುವ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಅವರೆಲ್ಲರಿಗೂ ಕೂಡಲೇ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು. ಇವರೊಂದಿಗೆ ಪಕ್ಷದ ಹಲವು ನಾಯಕರು ಸಹ ಉಪವಾಸದಲ್ಲಿ ಪಾಲ್ಗೊಂಡಿದ್ದರು.

ಅಮೆರಿಕ ರಕ್ಷಣೆಗೆ ಟ್ರಂಪ್‌ ‘ಗೋಲ್ಡನ್‌ ಡೋಂ’ ಘೋಷಣೆ

ವಾಷಿಂಗ್ಟನ್‌: ವಿಶ್ವದ ಅನೇಕ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿರುವ ಅಥವಾ ಸಂಘರ್ಷ ಶುರುವಾಗಿರುವ ಹೊತ್ತಿನಲ್ಲಿ, ನೆಲ, ಸಮುದ್ರ ಮತ್ತು ಬಾಹ್ಯಾಕಾಶದಲ್ಲೂ ಕ್ಷಿಪಣಿಗಳಿಂದ ರಕ್ಷಣೆ ಒದಗಿಸುವ ‘ಗೋಲ್ಡನ್‌ ಡೋಂ’ ತಯಾರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.ಈಗಾಗಲೇ ಇಸ್ರೇಲ್‌ ಬಳಿ ಇರನ್‌ ಡೋಂ ಮತ್ತು ಭಾರತದ ಬಳಿ ಥಾಡ್‌ ವ್ಯವಸ್ಥೆ ಇದೆ. ಇದೂ ಅದೇ ರೀತಿಯದ್ದು.

ಮುಂದಿನ ಪೀಳಿಗೆಯ ಬ್ಯಾಲಸ್ಟಿಕ್‌, ಕ್ರೂಸ್‌, ಶಬ್ದಕ್ಕಿಂತ ಹಲವು ಪಟ್ಟು ವೇಗವಾಗಿ ಚಲಿಸುವ ಹೈಪರ್‌ಸಾನಿಕ್‌ ಕ್ಷಿಪಣಿ, ಡ್ರೋನ್‌ಗಳನ್ನು ಪತ್ತೆಹಚ್ಚಿ, ಹಿಂಬಾಲಿಸಿ ಪ್ರತಿಬಂಧಿಸುವ ಮೂಲಕ ಅಮೆರಿಕವನ್ನು ರಕ್ಷಿಸುವ ಸಲುವಾಗಿ 14.97 ಲಕ್ಷ ಕೋಟಿ ರು. ವೆಚ್ಚದಲ್ಲಿ ಗೋಲ್ಡನ್‌ ಡೋಂ ನಿರ್ಮಿಸುವ ಬಗ್ಗೆ ಟ್ರಂಪ್‌ ಘೋಷಿಸಿದ್ದಾರೆ. ಇದನ್ನು ಭೂಮಿ, ಸಮುದ್ರ ಮತ್ತು ಬಾಹ್ಯಾಕಾಶದಲ್ಲಿ ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ. ಅಮೆರಿಕದ ಪ್ರಮುಖ ಬಾಹ್ಯಾಕಾಶ ಮತ್ತು ರಕ್ಷಣಾ ಸಂಸ್ಥೆ ಲಾಕ್ಹೀಡ್ ಮಾರ್ಟಿನ್ ಇದನ್ನು ನಿರ್ಮಿಸಲಿದೆ.

ತಿರುಮಲ: ಭದ್ರತೆಗೆ ಡ್ರೋನ್‌ ನಿಗ್ರಹ ತಂತ್ರಜ್ಞಾನ ಬಳಕೆ

ತಿರುಪತಿ: ಇಲ್ಲಿನ ಜಗತ್ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಭದ್ರತಾ ದೃಷ್ಟಿಯಿಂದ ಡ್ರೋನ್‌ ವಿರೋಧಿ ತಂತ್ರಜ್ಞಾನ ಬಳಸಲು ದೇವಸ್ಥಾನದ ಆಡಳಿತ ನಿರ್ವಹಿಸುವ ಟಿಟಿಡಿ ಮಂಡಳಿ ನಿರ್ಧರಿಸಿದೆ.ಈಗಾಗಲೇ ತಿರುಪತಿ ಬೆಟ್ಟದ ಬಳಿ ಡ್ರೋನ್‌ ಹಾರಾಟವನ್ನು ನಿರ್ಬಂಧಿಸಲಾಗಿದೆಯಾದರೂ, ಈ ಪ್ರದೇಶದಲ್ಲಿ ಹಲವು ಬಾರಿ ಡ್ರೋನ್‌ ಹಾರಾಟ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಮಂಡಳಿ ಅಧ್ಯಕ್ಷ ಬಿ.ಆರ್‌. ನಾಯ್ಡು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಬೆಟ್ಟದ ಮೇಲೆ ವೈಮಾನಿಕ ಚಟುವಟಿಕೆಗಳು ಅಲ್ಲಿನ ಪವಿತ್ರ ವಾತಾವರಣಕ್ಕೆ ಧಕ್ಕೆ ತರುತ್ತದೆ ಎಂದಿರುವ ಟಿಟಿಡಿ, ಆಗಮ ಶಾಸ್ತ್ರದ ತತ್ವಗಳು, ದೇವಾಲಯದ ಪಾವಿತ್ರ್ಯ, ಸುರಕ್ಷತೆ ಮತ್ತು ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಆ ಪ್ರದೇಶವನ್ನು ಹಾರಾಟ ಮುಕ್ತ ವಲಯವನ್ನಾಗಿ ಘೋಷಿಸುವಂತೆ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಕ್ಕೂ ಒತ್ತಾಯಿಸಿತ್ತು.

ತಿರುಪತಿ: ಇಲ್ಲಿನ ಜಗತ್ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಭದ್ರತಾ ದೃಷ್ಟಿಯಿಂದ ಡ್ರೋನ್‌ ವಿರೋಧಿ ತಂತ್ರಜ್ಞಾನ ಬಳಸಲು ದೇವಸ್ಥಾನದ ಆಡಳಿತ ನಿರ್ವಹಿಸುವ ಟಿಟಿಡಿ ಮಂಡಳಿ ನಿರ್ಧರಿಸಿದೆ.ಈಗಾಗಲೇ ತಿರುಪತಿ ಬೆಟ್ಟದ ಬಳಿ ಡ್ರೋನ್‌ ಹಾರಾಟವನ್ನು ನಿರ್ಬಂಧಿಸಲಾಗಿದೆಯಾದರೂ, ಈ ಪ್ರದೇಶದಲ್ಲಿ ಹಲವು ಬಾರಿ ಡ್ರೋನ್‌ ಹಾರಾಟ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಮಂಡಳಿ ಅಧ್ಯಕ್ಷ ಬಿ.ಆರ್‌. ನಾಯ್ಡು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಬೆಟ್ಟದ ಮೇಲೆ ವೈಮಾನಿಕ ಚಟುವಟಿಕೆಗಳು ಅಲ್ಲಿನ ಪವಿತ್ರ ವಾತಾವರಣಕ್ಕೆ ಧಕ್ಕೆ ತರುತ್ತದೆ ಎಂದಿರುವ ಟಿಟಿಡಿ, ಆಗಮ ಶಾಸ್ತ್ರದ ತತ್ವಗಳು, ದೇವಾಲಯದ ಪಾವಿತ್ರ್ಯ, ಸುರಕ್ಷತೆ ಮತ್ತು ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಆ ಪ್ರದೇಶವನ್ನು ಹಾರಾಟ ಮುಕ್ತ ವಲಯವನ್ನಾಗಿ ಘೋಷಿಸುವಂತೆ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಕ್ಕೂ ಒತ್ತಾಯಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ