ದಸರಾ ಧಮಾಕಾ- ಜಿಎಸ್ಟಿ ಇಳಿಕೆ ಇಂದಿನಿಂದ ಜಾರಿ : 375 ಉತ್ಪನ್ನಗಳು ಅಗ್ಗ

KannadaprabhaNewsNetwork |  
Published : Sep 22, 2025, 01:00 AM ISTUpdated : Sep 22, 2025, 05:00 AM IST
ಜಿಎಸ್ಟಿ | Kannada Prabha

ಸಾರಾಂಶ

ನವರಾತ್ರಿ ಆರಂಭದ ಮೊದಲ ದಿನವೇ ದೇಶದ ಜನತೆಗೆ ಡಬಲ್‌ ಧಮಾಕಾ ಸಿಕ್ಕಿದ್ದು, ಕೇಂದ್ರ ಸರ್ಕಾರದ ಜಿಎಸ್ಟಿ 2.0 ಅಧಿಕೃತವಾಗಿ ಸೋಮವಾರದಿಂದ ಜಾರಿಗೆ ಬಂದಿದೆ. ಪರಿಣಾಮ ಜನ ಸಾಮಾನ್ಯರಿಗೆ 375 ಉತ್ಪನ್ನಗಳು ಮತ್ತಷ್ಟು ಅಗ್ಗಕ್ಕೆ ದೊರೆಯಲಿವೆ.

 ನವದೆಹಲಿ :  ನವರಾತ್ರಿ ಆರಂಭದ ಮೊದಲ ದಿನವೇ ದೇಶದ ಜನತೆಗೆ ಡಬಲ್‌ ಧಮಾಕಾ ಸಿಕ್ಕಿದ್ದು, ಕೇಂದ್ರ ಸರ್ಕಾರದ ಜಿಎಸ್ಟಿ 2.0 ಅಧಿಕೃತವಾಗಿ ಸೋಮವಾರದಿಂದ ಜಾರಿಗೆ ಬಂದಿದೆ. ಪರಿಣಾಮ ಜನ ಸಾಮಾನ್ಯರಿಗೆ 375 ಉತ್ಪನ್ನಗಳು ಮತ್ತಷ್ಟು ಅಗ್ಗಕ್ಕೆ ದೊರೆಯಲಿವೆ.

ಸರ್ಕಾರ ಸೆ.22ರಿಂದ ಜಿಎಸ್ಟಿ ಜಾರಿಗೆ ಬರಲಿದೆ ಎಂದು ಇದೇ ತಿಂಗಳ 3 ರಂದು ಘೋಷಿಸಿತ್ತು. ಇದರ ಅನ್ವಯ ಎರಡು ಸ್ತರದಲ್ಲಿ ಹಿಂದಿದ್ದ ಶೇ.5, ಶೇ.15, ಶೇ.18 ಹಾಗೂ ಶೇ.28ಗಳನ್ನು ಬದಲಿಸಿ ಕೇವಲ ಶೇ. 5 ಹಾಗೂ ಶೇ.18ರ ಸ್ತರಕ್ಕೆ ಇಳಿಸಲಾಗಿದೆ.

ಹೊಸ ನಿಯಮದ ಪ್ರಕಾರ ಶೇ.12ರಷ್ಟು ಜಿಎಸ್ಟಿ ಸ್ಲ್ಯಾಬ್‌ಗೆ ಒಳಪಟ್ಟಿದ್ದ ಶೇ.99 ಸರಕುಗಳು ಸೋಮವಾರದಿಂದ ಶೇ.5ರಷ್ಟಕ್ಕೆ ಇಳಿಯಲಿದೆ. ಇನ್ನು ಶೇ.28ರಷ್ಟು ತೆರಿಗೆಗೆ ಒಳಪಡುತ್ತಿದ್ದ ಉತ್ಪನ್ನಗಳು ಶೇ.18ರ ವ್ಯಾಪ್ತಿಗೆ ಬರಲಿದೆ. ಆದರೆ ಸಿಗರೇಟಿನಂಥ ಅಪಾಯಕಾರಿ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಶೇ.40ಕ್ಕೆ ಹೆಚ್ಚಿಸಲಾಗಿದೆ.

ಜೇಬಿನ ಹೊರೆ ಇಳಿಕೆ 

 ಜಿಎಸ್ಟಿ 2.0 ನಿಂದ ಅಡುಗೆ ಮನೆಯ ಸಾಮಾಗ್ರಿಗಳಿಂದು ಹಿಡಿದು ಎಲೆಕ್ಟ್ರಾನಿಕ್ ಉತ್ಪನ್ನಗಳವರೆಗೆ, ಔಷಧಿಗಳಿಂದ ಹಿಡಿದು ಆಟೋ ಮೊಬೈಲ್‌ ಉಪಕರಣಗಳ ತನಕ 375 ಉತ್ಪನ್ನಗಳ ದರ ತಗ್ಗಲಿದೆ.

ಅದರಲ್ಲಿಯೂ ಅತಿಹೆಚ್ಚು ಬಳಕೆಯಾಗುವ ಪನ್ನೀರ್‌, ತುಪ್ಪ, ಬೆಣ್ಣೆ, ಡ್ರೈಫ್ರೂಟ್ಸ್‌, ಕಾಫಿ, ಐಸ್‌ಕ್ರೀಮ್‌ ಸೇರಿದಂತೆ ಅಡುಗೆ ಮನೆಯ ವಸ್ತುಗಳು, ಟೀವಿ, ಎಸಿ ವಾಷಿಂಗ್‌ ಮಷಿನ್‌ನಂತಹ, ಮೊಬೈಲ್‌ ನಂತಹ ಗೃಹ ಪಯೋಗಿ ಉಪಕರಣಗಳು ಅಗ್ಗವಾಗಲಿದೆ. . ಮಾತ್ರವಲ್ಲದೇ ಕೃಷಿ ಯಂತ್ರೋಪಕರಣಗಳು, ಕಾರು, ದ್ವಿಚಕ್ರ ವಾಹನಗಳ ಬೆಲೆಯೂ ತಗ್ಗಲಿದೆ.ಇವೆಷ್ಟೇ ಅಲ್ಲ ಸೌಂದರ್ಯ ವರ್ದಕ ವಲಯಗಳಾದ ಹೆಲ್ತ್‌ ಕ್ಲಬ್‌, ಸಲೂನ್‌, ಕ್ಚೌರದ ಅಂಗಡಿ , ಫಿಟ್ಮೆಸ್‌ ಸೆಂಟರ್‌, ಯೋಗಗಳ ಜಿಎಸ್ಟಿ ಶೇ.5ರಷ್ಟು ಇಳಿಸಲಾಗಿದೆ. ಇದರ ಜತೆಗೆ ನಿತ್ಯ ಬಳಸುವ ಕೂದಲಿಗೆ ಹಚ್ಚುವ ಎಣ್ಣೆ, ಶಾಂಪೂ, ಸೋಪ್‌, ಬ್ರಶ್‌, ಟೂತ್‌ಪೇಸ್ಟ್‌, ಫೇಸ್‌ಕ್ರೀಮ್‌ಗಳ ಮೇಲಿನ ತೆರಿಗೆ 18 ರಿಂದ 12ಕ್ಕೆ ಇಳಿಕೆಯಾಗಿದೆ. ಮಕ್ಕಳ ಅಗತ್ಯ ವಸ್ತುಗಳು ಕೂಡ ಕೈಗೆಟಕುವ ದರದಲ್ಲಿ ಸಿಗಲಿದೆ. 

ಔಷಧ ವಲಯದಲ್ಲೂ ಬದಲಾವಣೆ:

ಜಿಎಸ್ಟಿ ಸರಳೀಕರಣದಿಂದ ಔಷಧ ವಲಯದಲ್ಲಿ ಭಾರೀ ಬದಲಾವಣೆ ಆಗಲಿದೆ. ಹೆಚ್ಚಿನ ಔಷಧಗಳು, ಗ್ಲುಕೋಮೀಟರ್‌, ಡಯಾಗೋನಿಸ್ಟಿಕ್‌ ಕಿಟ್‌ಗಳಂತಹ ವೈದ್ಯಕೀಯ ಸಾಧನಗಳ ಮೇಲಿನ ಶೇ.5ರಷ್ಟು ಇಳಿಸಿರುವುದರಿಂದ ಬಡ ಮಧ್ಯಮ ವರ್ಗದವರಿಗೆ ಲಾಭವಾಗಲಿದೆ. ಸರ್ಕಾರ ಈಗಾಗಲೇ ಎಲ್ಲಾ ಔಷಧ ಕಂಪನಿಗೆ ಮೂಲ ದರವನ್ನು ಪರಿಷ್ಕರಿಸಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವಂತೆ ಸೂಚಿಸಿದೆ. 33 ಔಷಧಿಗಳಲ್ಲಿ ಕ್ಯಾನ್ಸರ್, ರಕ್ತ ಅಸ್ವಸ್ಥತೆಗಳು, ಅಪರೂಪದ ಆನುವಂಶಿಕ ಕಾಯಿಲೆಗಳು ಮತ್ತು ಇತರ ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ದುಬಾರಿ ಔಷಧಿಗಳು ಸೇರಿವೆ.

ಕಾರು ಖರೀದಿದಾರರಿಗೆ ಬಂಪರ್‌:

ಸರಳೀಕರಣದಿಂದ ಬಹುದೊಡ್ಡ ಪ್ರಯೋಜನ ಪಡೆಯುವವರು ಎಂದರೆ ಆಟೋಮೊಬೈಲ್‌ ಗ್ರಾಹಕರು. ಸಣ್ಣ ಮತ್ತು ದೊಡ್ಡ ಕಾರುಗಳ ಜಿಎಸ್ಟಿಯನ್ನು ಶೇ.28 ರಿಂದ 18ಕ್ಕೆ ಇಳಿಸಲಾಗಿದೆ. ಈಗಾಗಲೇ ಹಲವು ಕಂಪನಿಗಳು ದರ ಇಳಿಕೆಯ ಬಗ್ಗೆ ಘೋಷಿಸಿವೆ.

1200 ಸಿಸಿ ಒಳಗಿನ ಕಾರಿನ ದರ ಶೇ.28 ರಿಂದ ಶೇ.18ಕ್ಕೆ ಇಳಿಯಲಿದೆ, ಜಿಎಸ್ಟಿ ದರ ಕಡಿತ ಮಾಡುವುದರಿಂದ ಈಗಾಗಲೇ ಮಾರುತಿ ಸುಝುಕಿ, ಟಾಟಾ ಮೋಟಾರ್ಸ್‌, ಹುಂಡೈ ಮೋಟಾರ್ಸ್‌, ಮರ್ಸಿಡಿಸ್‌ ಬೆಂಜ್‌, ಬಿಎಂಡಬ್ಲ್ಯೂ ದೈತ್ಯ ಕಂಪನಿಗಳು ಸೋಮವಾರದಿಂದಲೇ ದರ ಇಳಿಸಿವೆ. 

ಮಾರುತಿ ವಾಹನಗಳ ಮೇಲಿನ ದರವನ್ನು 1.29 ಲಕ್ಷ ರು.ತನಕ ಇಳಿಸಿದೆ, ಇನ್ನು ಸಣ್ಣ ಕಾರುಗಳ ಬೆಲೆಯನ್ನು ಶೇ.8.5ರಷ್ಟು ಇಳಿಸಿರುವುದರಿಂದ ಮಧ್ಯಮ ವರ್ಗದರಿಗೆ ಒಳಿತಾಗಲಿದೆ. ಇನ್ನು 1.45 ಲಕ್ಷ ರುನಷ್ಟಿದ್ದ ಟಾಟಾ ಉತ್ಪನ್ನಗಳ ಬೆಲೆಯು 1 75 ಸಾವಿರ ರು.ಗೆ ಇಳಿಯಲಿದೆ. ಮಹೀಂದ್ರಾ ಈಗಾಗಲೇ 1.56 ಲಕ್ಷ ರು. ತನಕ ಬೆಲೆ ಇಳಿಸಿರುವುದಾಗಿ ಘೋಷಿಸಿದೆ. ಕಿಯಾ ಟೊಯೊಟೊ ಕಿರ್ಲೋಸ್ಕರ್‌ ಬೆಲೆಯೂ ಕಡಿಮೆಯಾಗಲಿದೆ. ಇದರ ಜತೆಗೆ ದ್ವಿಚಕ್ರ ವಾಹನಗಳ ಬೆಲೆಯೂ ಇಳಿಯಲಿದ್ದು, ಹೀರೋ , ಹೊಂಡಾ, ಬಜಾಜ್‌ ಟಿವಿಎಸ್‌ ಅಪಾಚೆಯಂತಹ ಕಂಪನಿಗಳು ಈಗಾಗಲೇ 5 ಸಾವಿರದಿಂದ 12 ಸಾವಿರ ತನಕವೂ ದರ ಇಳಿಸಿವೆ. 

ಹೋಟೆಲ್‌ ಕೊಠಡಿಗಳು ಅಗ್ಗ:

ಹೊಸ ಎಸ್ಟಿ ದರದಿಂದ ಸೋಮವಾರದಿಂದ ಹೋಟೆಲ್‌ ಕೊಠಡಿಗಳ ದರವೂ ಅಗ್ಗವಾಗಲಿದೆ. ಹೋಟೆಲ್‌ ಉದ್ಯಮದ ಮೇಲಿನ ಜಿಎಸ್ಟಿಯನ್ನು ಸರ್ಕಾರ ಶೇ. 12 ರಿಂದ 5ಕ್ಕೆ ಇಳಿಸಿದೆ. ಇದರಿಂದ 7,500 ರು. ಅಥವಾ ಅದಕ್ಕಿಂತ ಕಡಿಮೆ ಬಾಡಿಗೆ ಇರುವ ಕೊಠಡಿಗಳು ದರ 525 ರು. ವರೆಗೂ ಕಡಿಮೆ ಆಗಲಿದೆ,. 

85 ಸಾವಿರ ತನಕ ಇಳಿಯಲಿದೆ ಟೀವಿ ದರ: 

ಜಿಎಸ್ಟಿ ಕಡಿತದಿಂದ ಟೀವಿ ಉತ್ಪನ್ನಗಳು ಬೆಲೆಯು ಗಣನೀಯ ಪ್ರಮಾಣದಲ್ಲಿ ಇಳಿಯಲಿದೆ. 32 ಇಂಚಿನ ಟೀವಿ ಮೇಲೆ ತೆರಿಗೆಯನ್ನು ಸೇ.28 ರಿಂದ 18ಕ್ಕೆ ಇಳಿಸಲಾಗಿದೆ. ಅದಕ್ಕಿಂತ ದೊಡ್ಡದಾಗಿದ್ದರೆ ಶೇ.28ರಷ್ಟಾಗಲಿದೆ. ಇದರಿಂದ ಗ್ರಾಹಕರಿಗೆ ಭಾರೀ ಪ್ರಮಾಣದಲ್ಲಿ ಹಣ ಉಳಿತಾಯ ಆಗಲಿದೆ. ಉತ್ಪಾದಕರು ತಮ್ಮ ಉತ್ಪನ್ನಗಳ ಬೆಲೆಯನ್ನು 2,500 ರು. ನಿಂದ 85,0000 ರು. ತನಕ ಇಳಿಸುವುದಾಗಿ ಮುಂದಾಗಿದ್ದಾರೆ. ಸೋನಿ, ಎಲ್‌ಜಿ, ಪ್ಯಾನಸೋನಿಕ್‌ ನಂತಹ ದೈತ್ಯ ಕಂಪನಿಗಳು ಈಗಾಗಲೇ ದರ ಕಡಿತದ ಬಗ್ಗೆ ಘೋಷಿಸಿವೆ.

- ಜಿಎಸ್ಟಿ 2.0 ಜಾರಿಗೆ । 4ರ ಬದಲು ಇನ್ನು 2 ಸ್ತರದ ತೆರಿಗೆ

- 375 ಉತ್ಪನ್ನಗಳು ಅಗ್ಗ । ಜನರ ಜೇಬಿನ ಭಾರ ಇಳಿಕೆ

- ತಗ್ಗಲಿದೆ ನಿತ್ಯಪಯೋಗಿ ವಸ್ತುಗಳು, ಅಗತ್ಯ ಔಷಧಿಗಳ ಬೆಲೆ

- ಕಾರು, ಟೀವಿ ಕೊಂಡುಕೊಳ್ಳುವವರಿಗೆ ಕೇಂದ್ರ ಭರ್ಜರಿ ಗಿಫ್ಟ್‌

- ನವರಾತ್ರಿ ಮೊದಲ ದಿನದಿಂದ ಮೋದಿ ಸರ್ಕಾರ ಬಂಪರ್‌

PREV
Read more Articles on

Recommended Stories

ನಿರ್ಬಂಧ ಬಿಸಿ : ಜೈಷ್‌-ಎ-ಮೊಹಮ್ಮದ್‌ ಹೆಸರು ಬದಲಾವಣೆ!
ಅಮೆರಿಕ 88 ಲಕ್ಷ ರು. ಶುಲ್ಕ : ಹಳೆಯ ಎಚ್‌ 1ಬಿ ವೀಸಾದಾರರು ನಿರಾಳ