ಪಾಕ್‌ನಲ್ಲಿ ಮತ್ತೆ ಧುರಂಧರ್ ಆಟ : ಹಿಜ್ಬುಲ್‌ನ ಸಜ್ಜದ್ ಬಲಿ

KannadaprabhaNewsNetwork |  
Published : May 02, 2026, 01:45 AM IST
Sajjad

ಸಾರಾಂಶ

ಭಾರತಕ್ಕೆ ಬೇಕಿರುವ ಉಗ್ರರು ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪುವ ಪ್ರಕರಣ ಮುಂದುವರೆದಿದ್ದು, ಇದೀಗ ಹಿಜ್ಬುಲ್‌ ಕಮಾಂಡರ್ ಸಜ್ಜದ್‌ ಅಹಮದ್‌ ತನ್ನ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

 ಇಸ್ಲಾಮಾಬಾದ್‌: ಭಾರತಕ್ಕೆ ಬೇಕಿರುವ ಉಗ್ರರು ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪುವ ಪ್ರಕರಣ ಮುಂದುವರೆದಿದ್ದು, ಇದೀಗ ಹಿಜ್ಬುಲ್‌ ಕಮಾಂಡರ್ ಸಜ್ಜದ್‌ ಅಹಮದ್‌ ತನ್ನ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಜಮ್ಮು ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ನಿವಾಸಿಯಾಗಿದ್ದ ಸಜ್ಜದ್‌

ಜಮ್ಮು ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ನಿವಾಸಿಯಾಗಿದ್ದ ಸಜ್ಜದ್‌ 1990ರಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ತರಬೇತಿಗೆಂದು ತೆರಳಿದ್ದ. ಬಳಿಕ ಅಲ್ಲೇ ನೆಲೆಸಿ ಅಲ್ಲಿಂದಲೇ ಕಾಶ್ಮೀರದಲ್ಲಿ ಹಲವು ಉಗ್ರ ದಾಳಿಗೆ ಕಾರಣನಾಗಿದ್ದ ಜೊತೆಗೆ ಉಗ್ರ ಚಟುವಟಿಕೆಗಳಿಗೆ ನೆರವಾಗುತ್ತಿದ್ದ.

2 ವಾರದ ಅವಧಿಯಲ್ಲಿ ಪಾಕ್‌ನಲ್ಲಿ ಧುರಂಧರ್‌ ದಾಳಿಗೆ ತುತ್ತಾದ ಉಗ್ರರ ಸಂಖ್ಯೆ 4ಕ್ಕೆ

ಇದೀಗ ಆತನ ಸಾವಿನೊಂದಿಗೆ ಕಳೆದ 2 ವಾರದ ಅವಧಿಯಲ್ಲಿ ಪಾಕ್‌ನಲ್ಲಿ ಧುರಂಧರ್‌ ದಾಳಿಗೆ ತುತ್ತಾದ ಉಗ್ರರ ಸಂಖ್ಯೆ 4ಕ್ಕೆ ಏರಿದೆ. ಗುರುವಾರ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ

ಕಮಾಂಡರ್‌ ಮೌಲಾನಾ ಸಲ್ಮಾನ್‌ ಅಜರ್‌ ನಿಗೂಢ ಅಪಘಾತದಲ್ಲಿ ಸಾವನ್ನಪ್ಪಿ, ಅದಕ್ಕೂ 3 ದಿನಗಳ ಹಿಂದೆ ಗುಂಡಿನ ದಾಳಿಯಲ್ಲಿ ಲಷ್ಕರ್‌ನ ಶೇಖ್‌ ಯೂಸುಫ್‌ ಆಫ್ರಿದಿ ಸಾವನ್ನಪ್ಪಿದ್ದ, ಹಿಂದಿನ ವಾರ ನಡೆದ ದಾಳಿಯಲ್ಲಿ ಲಷ್ಕರ್‌ ಸಹ ಸಂಸ್ಥಾಪಕ ಅಮೀರ್‌ ಹಮ್ಜಾನ ಮೇಲೆ ಗುಂಡಿನ ದಾಳಿ ನಡೆದಿತ್ತಾದರೂ ಆದ ಬದುಕುಳಿದಿದ್ದ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪ್ರೀತಿಗೆ ಅಡ್ಡಿ: ಟ್ರೆಕ್‌ಗೆ ಹೋದಾಗ 400 ಅಡಿ ಕಂದಕಕ್ಕೆ ತಳ್ಳಿ ಭಾವಿ ಪತಿ ಕೊಲೆ
ಸಿಂದೂರದಲ್ಲಿ ಪಾಕ್‌ ಬಳಸಿದ್ದಚೀನಾ ನಿರ್ಮಿತ ಜೆ-10 ಜೆಟ್‌ಗೆಖರೀದಿಗೆ ಬಾಂಗ್ಲಾ ನಿರ್ಧಾರ