ಟೀಕೆ, ನಿಂದನೆ, ಅಪಹಾಸ್ಯ ಎದುರಿಸಿ ಗೆದ್ದೆ: ವಿಜಯ್‌

KannadaprabhaNewsNetwork |  
Published : May 06, 2026, 01:15 AM IST
ವಿಜಯ್ | Kannada Prabha

ಸಾರಾಂಶ

ಆರಂಭದಿಂದಲೂ ಅಪಹಾಸ್ಯ ಮತ್ತು ಟೀಕೆಗಳನ್ನು ಎದುರಿಸುತ್ತಿದ್ದರೂ, ಟಿವಿಕೆ ಪಕ್ಷವು ಜನರನ್ನು ಮಾತ್ರ ಅವಲಂಬಿಸಿ ಸ್ಥಿರವಾಗಿ ಉಳಿಯಿತು ಎಂದು ಟಿವಿಕೆ ನಾಯಕ ಹಾಗೂ ನಟ ವಿಜಯ್‌ ಹೇಳಿದ್ದಾರೆ. ಈ ಮೂಲಕ ಚುನಾವಣೆ ಗೆದ್ದ ಬಳಿಕ ಜನತೆಗೆ ಮೊದಲ ಬಾರಿ ಧನ್ಯವಾದ ಸಲ್ಲಿಸಿದ್ದಾರೆ.

- ಗೆದ್ದ ಬಳಿಕ ಟಿವಿಕೆ ನಾಯಕ ಮೊದಲ ನುಡಿ । ಅಭಿನಂದಿಸಿದ ಮೋದಿಗೂ ಕೃತಜ್ಞತೆಚೆನ್ನೈ: ಆರಂಭದಿಂದಲೂ ಅಪಹಾಸ್ಯ ಮತ್ತು ಟೀಕೆಗಳನ್ನು ಎದುರಿಸುತ್ತಿದ್ದರೂ, ಟಿವಿಕೆ ಪಕ್ಷವು ಜನರನ್ನು ಮಾತ್ರ ಅವಲಂಬಿಸಿ ಸ್ಥಿರವಾಗಿ ಉಳಿಯಿತು ಎಂದು ಟಿವಿಕೆ ನಾಯಕ ಹಾಗೂ ನಟ ವಿಜಯ್‌ ಹೇಳಿದ್ದಾರೆ. ಈ ಮೂಲಕ ಚುನಾವಣೆ ಗೆದ್ದ ಬಳಿಕ ಜನತೆಗೆ ಮೊದಲ ಬಾರಿ ಧನ್ಯವಾದ ಸಲ್ಲಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ‘ಟೀಕೆ, ಅವಮಾನ ಮತ್ತು ನಿಂದೆಗಳ ಹೊರತಾಗಿಯೂ, ತಮಿಳುನಾಡಿನ ಜನರು ಅಚಲವಾದ ಪ್ರೀತಿಯಿಂದ ಪಕ್ಷದ ಪರವಾಗಿ ನಿಂತರು. ಈ ಜನಾದೇಶವು ಮತದಾರರ ಆಳವಾದ ಭಾವನಾತ್ಮಕ ವಿಶ್ವಾಸವನ್ನು ತೋರಿಸಿದೆ. ರಾಜ್ಯ ರಾಜಕೀಯ ಸಂಸ್ಕೃತಿಯ ಮೇಲೆ ದೀರ್ಘಕಾಲ ಪ್ರಭಾವ ಬೀರಿರುವ ಹಣದ ಶಕ್ತಿಯನ್ನು ಜನ ತಿರಸ್ಕರಿಸುವುದನ್ನು ಇದು ಸೂಚಿಸುತ್ತದೆ’ ಎಂದಿದ್ದಾರೆ.

ಅಭಿನಂದಿಸಿದ ಮೋದಿಗೆ ಧನ್ಯವಾದ:

ವಿಜಯ್ ನೇತೃತ್ವದ ಟಿವಿ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದನೆ ಸಲ್ಲಿಸಿದ್ದಾರೆ. ಇದಕ್ಕೆ ವಿಜಯ್ ಕೂಡ ಧನ್ಯವಾದ ಸಮರ್ಪಿಸಿದ್ದಾರೆ.

==

* ಪ. ಬಂಗಾಳ ಗೆಲುವಿಗಾಗಿ ಮೋದಿಗೆ ಟ್ರಂಪ್‌ ಅಭಿನಂದನೆ

ವಾಷಿಂಗ್ಟನ್‌: ‘ಪ.ಬಂಗಾಳ ಸೇರಿ 3 ಕಡೆ ಬಿಜೆಪಿ ವಿಧಾನಸಭೆ ಚುನಾವಣೆ ಗೆದ್ದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಮತ್ತು ನಿರ್ಣಾಯಕ ಚುನಾವಣಾ ಗೆಲುವಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿನಂದನೆ ಸಲ್ಲಿಸಿದ್ದಾರೆ’ ಎಂದು ಶ್ವೇತಭವನದ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.‘ಕಳೆದ ತಿಂಗಳು ಅವರ ದೂರವಾಣಿ ಕರೆಯಲ್ಲಿ, ಅಧ್ಯಕ್ಷ ಟ್ರಂಪ್ ಪ್ರಧಾನಿ ಮೋದಿಯವರಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು ಮತ್ತು ಅವರನ್ನು ನಾಯಕರನ್ನಾಗಿ ಪಡೆದಿರುವುದು ಭಾರತ ಎಷ್ಟು ಅದೃಷ್ಟ ಮಾಡಿದೆ ಎಂದಿದ್ದರು. ಇದೀಗ ಐತಿಹಾಸಿಕ ಮತ್ತು ನಿರ್ಣಾಯಕ ಚುನಾವಣಾ ಗೆಲುವಿಗಾಗಿ ರಾಷ್ಟ್ರಪತಿಗಳು ಪ್ರಧಾನಿ ಮೋದಿಯವರನ್ನು ಅಭಿನಂದಿಸಿದ್ದಾರೆ’ ಎಂದು ಶ್ವೇತಭವನದ ವಕ್ತಾರ ಕುಶ್ ದೇಸಾಯಿ ಪಿಟಿಐಗೆ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತಮಿಳ್ನಾಡಿಗೆ ವಿಜಯ್ ಹೊಸ ‘ಜನ’ನಾಯಕ
ಅಸ್ಸಾಂನಲ್ಲಿ ಕಮಲದ ಹ್ಯಾಟ್ರಿಕ್‌ ಕಮಾಲ್‌ - ಶತಕ ಸಮೀಪಿಸಿದ ಬಿಜೆಪಿ ಮೈತ್ರಿಕೂಟದಿಂದ ದಾಖಲೆ