- ಸಂಕಟ ಬಂದಾಗ ಚಾಲೀಸಾ ಪಠಿಸುವೆ, ದಾಳಿ ವೇಳೆಯೂ ಹಾಗೆಯೇ ಮಾಡಿದೆ । ದೇವರೇ ನನ್ನ ರಕ್ಷಿಸಿದ- ಜೀವ ಹೋಗುವಂತಿದ್ದರೂ 180 ಪ್ರಯಾಣಿಕರ ಪ್ರಾಣ ರಕ್ಷಿಸಲು ಪುಟಿದೆದ್ದು ಬಾಗಿಲು ತೆರೆದೆ: ಕ್ಯಾಪ್ಟನ್ ಸ್ಮಿತ್‌ಟಾಪ್- ರೋಚಕ- ಫ್ಲೈದುಬೈ ವಿಮಾನದ ಸಾಹಸಿ ಪೈಲಟ್ ಜತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾಲ್ ಸಂಭಾಷಣೆ
ಮೇಲೆ ಕುಸಿದುಬಿದ್ದೆ
ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ನಾನು ಕಾಕ್‌ಪಿಟ್‌ನ ನೆಲದ ಮೇಲೆ ಕುಸಿದುಬಿದ್ದೆ. ನನ್ನಲ್ಲಿ ಉಳಿದಿದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತನಾದೆ. ನನ್ನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದೆ. ಆದರೆ ಬೇರೆಯವರು ಪ್ರಾಣ ಕಳೆದುಕೊಳ್ಳಲು ಅವಕಾಶ ನೀಡಬಾರದು ಎಂದು ಅದೇ ಸಮಯದಲ್ಲಿ ನಿರ್ಧರಿಸಿದ್ದೆ.- ಕ್ಯಾಪ್ಟನ್ ಸ್ಮಿತ್ ಮಚ್ಛರ್, ಫ್ಲೈದುಬೈ ವಿಮಾನದ ಪೈಲಟ್‌ಭಾರತೀಯರು ಜೀವ
ಭಾರತೀಯರು ಜೀವ ತೆಗೆಯುವವರಲ್ಲ, ಬದಲಾಗಿ ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡಲು ಸಿದ್ಧರಿರುವವರು ಎಂದು ಘಟನೆಯ ಬಳಿಕ ಇಡೀ ದೇಶ ಹೆಮ್ಮೆಯಿಂದ ಹೇಳುತ್ತಿದೆ. ನೀವು (ಕ್ಯಾಪ್ಟನ್ ಸ್ಮಿತ್) 140 ಕೋಟಿ ಭಾರತೀಯರ ಗೌರವವನ್ನು ಹೆಚ್ಚಿಸಿದ್ದೀರಿ. ನೀವು ನಮ್ಮ ಹೆಮ್ಮೆ.
ಫ್ಲೈದುಬೈ ವಿಮಾನ ಅಪಹರಣವನ್ನು ತಪ್ಪಿಸಿ, ಸ್ವತಃ ದಾಳಿಗೆ ತುತ್ತಾದರೂ ನೂರಾರು ಜನರ ಪ್ರಾಣರಕ್ಷಣೆ ಮಾಡಿದ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಜತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೋ ಕಾಲ್ ಮೂಲಕ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ, ಸ್ಮಿತ್ ತಮ್ಮ ಹೋರಾಟದ ಅನುಭವವನ್ನು ಹಂಚಿಕೊಂಡಿದ್ದು, ‘ಆಂಜನೇಯನ ಸ್ತುತಿಯಾದ ‘ಹನುಮಾನ್ ಚಾಲೀಸಾ’ ಮಂತ್ರವನ್ನು ಪಠಿಸುತ್ತ ಧೈರ್ಯ ತಂದುಕೊಂಡು ಎಲ್ಲರನ್ನೂ ರಕ್ಷಿಸಿದೆ’ ಎಂಬ ಕುತೂಹಲಕರ ವಿಚಾರ ಬಿಚ್ಚಿಟ್ಟಿದ್ದಾರೆ. ಅವರ ಪರಾಕ್ರಮಕ್ಕೆ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ:
ಇತರರ ಪ್ರಾಣ ಉಳಿಸಲು ನಿರ್ಧಾರ:
‘ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ನಾನು ಕಾಕ್‌ಪಿಟ್‌ನ ನೆಲದ ಮೇಲೆ ಕುಸಿದುಬಿದ್ದೆ. ನನ್ನಲ್ಲಿ ಉಳಿದಿದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತನಾದೆ. ನನ್ನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದೆ. ಆದರೆ ಬೇರೆಯವರು ಪ್ರಾಣ ಕಳೆದುಕೊಳ್ಳಲು ಅವಕಾಶ ನೀಡಬಾರದು ಎಂದು ಅದೇ ಸಮಯದಲ್ಲಿ ನಿರ್ಧರಿಸಿದ್ದೆ. ಅದು ಅತ್ಯಂತ ನಿರ್ಣಾಯಕ ಕ್ಷಣವಾಗಿತ್ತು. ವಿಮಾನವು ಕೆಳಗೆ ಬೀಳುತ್ತಿದೆ ಎಂದು ಆ ಕ್ಷಣದಲ್ಲಿ ನನಗೆ ಅರಿವಾಯಿತು. ನನಗೆ ಅನೇಕ ಗಾಯಗಳಾಗಿದ್ದವು. ನಾನು ಒಂದು ಕಡೆ ಹೊಡೆತಗಳನ್ನು ತಿನ್ನುತ್ತಿದ್ದೆ. ಆದರೂ ವಿಮಾನದ ನೆಲದ ಮೇಲೆ ಮಲಗಿದ್ದ ಕಾರಣ ಬಾಗಿಲು ಹತ್ತಿರವೇ ಇದೆ ಎಂದು ಗೊತ್ತಾಯಿತು. ಹೊಡೆತ ತಿನ್ನುತ್ತಿದ್ದರೂ ಕಾಕ್‌ಪಿಟ್‌ನ ಬಾಗಿಲನ್ನು ತೆರೆಯಲು ಪ್ರಯತ್ನಿಸಿ ಯಶ ಕಂಡೆ. ಕಾಕ್‌ಪಿಟ್ ಬಾಗಿಲು ತೆರೆದ ನಂತರ, ಉಳಿದವರೆಲ್ಲರೂ ಒಳಗೆ ಬಂದರು ಮತ್ತು ಎಲ್ಲರೂ ಸಮಾನವಾಗಿ ಪ್ರಮುಖ ಪಾತ್ರ ವಹಿಸಿದರು’ ಎಂದು ವಿವರಿಸಿದರು.
ಮೋದಿ ಶ್ಲಾಘನೆ:
ಈ ವೇಳೆ ಸ್ಮಿತ್‌ರ ಪರಾಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೋದಿ, ‘ಈ ಘಟನೆಯ ನಂತರ, ಭಾರತೀಯರು ಜೀವ ತೆಗೆಯುವವರಲ್ಲ, ಬದಲಾಗಿ ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡಲು ಸಿದ್ಧರಿರುವವರು ಎಂದು ಇಡೀ ದೇಶ ಹೆಮ್ಮೆಯಿಂದ ಹೇಳುತ್ತಿದೆ. ಆ ಸಮಯದಲ್ಲಿ, ನೀವು ತುಂಬಾ ಗಾಯಗೊಂಡಿದ್ದಿರಿ ಮತ್ತು ಸಾವು ಬದುಕಿನ ಹೋರಾಟದಲ್ಲಿದ್ದಿರಿ. ಆದರೆ ನೀವು ನಿಮ್ಮ ಸ್ವಂತ ಸುರಕ್ಷತೆಯನ್ನು ನಿರ್ಲಕ್ಷಿಸಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದಿರಿ. ನೀವು 140 ಕೋಟಿ ಭಾರತೀಯರ ಗೌರವವನ್ನು ಹೆಚ್ಚಿಸಿದ್ದೀರಿ. ನೀವು ನಮ್ಮ ಹೆಮ್ಮೆ’ ಎಂದು ಕೊಂಡಾಡಿದರು.ದೇಶಾದ್ಯಂತ ಪ್ರಾರ್ಥನೆ:
‘ನೀವು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ದೇಶಾದ್ಯಂತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ. ಅನೇಕ ಭಾರತೀಯರು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುತ್ತಿದ್ದಾರೆ. ನೀವು ಧೈರ್ಯಶಾಲಿ ವ್ಯಕ್ತಿ. ಭಾರತವು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿದೆ’ ಎಂದು ಮೋದಿ ತಿಳಿಸಿದರು.