ಸ್ಮಿತ್‌ ಮಚ್ಛರ್‌ ಅವರ ಮೇಲೆ ಕಾಕ್‌ಪಿಟ್‌ನಲ್ಲಿದ್ದ ಕೈಕೊಡಲಿ ಬಳಸಿ ದಾಳಿ

KannadaprabhaNewsNetwork |  
Published : Oct 02, 2026, 02:00 AM IST
Plane

ಸಾರಾಂಶ

ಸ್ಮಿತ್‌ ಮಚ್ಛರ್‌ ಅವರ ಮೇಲೆ ಹಲ್ಲೆ ನಡೆಸಲು ಒಮಾನಿ ಪೈಲಟ್‌ ಹೊರಗಿನಿಂದ ಯಾವುದೇ ಚಾಕು ಅಥವಾ ಆಯುಧವನ್ನು ತಂದಿರಲಿಲ್ಲ. ಬದಲಾಗಿ ವಿಮಾನದ ಕಾಕ್‌‌ಪಿಟ್‌ನಲ್ಲೇ ತುರ್ತು ಸಂದರ್ಭಗಳಿಗಾಗಿ ಇರಿಸಲಾಗುವ ಕೈಕೊಡಲಿ ಬಳಸಿ ಈ ದಾಳಿ ನಡೆಸಿದ್ದ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಟೆಲ್‌ ಅವೀವ್‌: ಸ್ಮಿತ್‌ ಮಚ್ಛರ್‌ ಅವರ ಮೇಲೆ ಹಲ್ಲೆ ನಡೆಸಲು ಒಮಾನಿ ಪೈಲಟ್‌ ಹೊರಗಿನಿಂದ ಯಾವುದೇ ಚಾಕು ಅಥವಾ ಆಯುಧವನ್ನು ತಂದಿರಲಿಲ್ಲ. ಬದಲಾಗಿ ವಿಮಾನದ ಕಾಕ್‌‌ಪಿಟ್‌ನಲ್ಲೇ ತುರ್ತು ಸಂದರ್ಭಗಳಿಗಾಗಿ ಇರಿಸಲಾಗುವ ಕೈಕೊಡಲಿ ಬಳಸಿ ಈ ದಾಳಿ ನಡೆಸಿದ್ದ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಕಾಕ್‌ಪಿಟ್ ಒಳಗೆ ಇಂತಹದೊಂದು ಕೈ ಕೊಡಲಿಯನ್ನುಇಡುವುದು ಕಡ್ಡಾಯ

ಅಂತಾರಾಷ್ಟ್ರೀಯ ವಿಮಾನಯಾನ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ವಾಣಿಜ್ಯ ವಿಮಾನದಲ್ಲೂ ಕಾಕ್‌ಪಿಟ್ ಒಳಗೆ ಇಂತಹದೊಂದು ಕೈ ಕೊಡಲಿಯನ್ನುಇಡುವುದು ಕಡ್ಡಾಯವಾಗಿದೆ.

ತಯಾರಾಗುವಾಗಲೇ ಈ ಆಯುಧವನ್ನು ಅಲ್ಲಿ ಅಳವಡಿಸಲಾಗಿರುತ್ತದೆ

ವಿಮಾನ ತಯಾರಾಗುವಾಗಲೇ ಈ ಆಯುಧವನ್ನು ಅಲ್ಲಿ ಅಳವಡಿಸಲಾಗಿರುತ್ತದೆ. ಅಪಘಾತ, ಬೆಂಕಿ ಅನಾಹುತದಂತಹ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಕಾಕ್‌ಪಿಟ್‌ನ ಬಾಗಿಲು ಅಥವಾ ಕಿಟಕಿಗಳನ್ನು ಮುರಿದು ಹೊರಬರಲು ಇದನ್ನು ಬಳಸಲಾಗುತ್ತದೆ.ಹಿಂದೆ ಈ ಕೊಡಲಿಯನ್ನು ವಿಮಾನದ ಮುಖ್ಯ ಕ್ಯಾಬಿನ್‌ನಲ್ಲಿ (ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ) ಇಡಲಾಗುತ್ತಿತ್ತು. ಆದರೆ, 25 ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕರ ದಾಳಿಯ ನಂತರ, ಸುರಕ್ಷತಾ ದೃಷ್ಟಿಯಿಂದ ಇವುಗಳನ್ನು ಕ್ಯಾಬಿನ್‌ನಿಂದ ತೆಗೆದು ಕಾಕ್‌ಪಿಟ್‌ಗೆ ಸ್ಥಳಾಂತರಿಸಲಾಯಿತು. ಪೈಲಟ್‌ಗಳಿಗೆ ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣ ಕೈಗೆ ಸಿಗುವಂತೆ ಇದನ್ನು ಕಾಕ್‌ಪಿಟ್‌ನಲ್ಲಿ ಕಾಯ್ದಿರಿಸಲಾಗಿರುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಸ್ಲಾಮಿಕ್‌ ಧಾರ್ಮಿಕ ತೀವ್ರವಾದಿ ಆಗಿದ್ದ ಒಮಾನಿ ಪೈಲಟ್‌
ದಾಳಿಕೋರ ಪೈಲಟ್‌ಗೆ ಉಗ್ರಬೋಧನೆ ಆಗಿತ್ತು: ನೆತನ್ಯಾಹು