ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ

KannadaprabhaNewsNetwork |  
Published : Nov 05, 2025, 03:30 AM ISTUpdated : Nov 05, 2025, 04:48 AM IST
pm modi

ಸಾರಾಂಶ

ಬಿಹಾರದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಐಎಎನ್‌ಎಸ್-ಮ್ಯಾಟ್ರಿಜ್‌ ಚುನಾವಣಾಪೂರ್ವ ಸಮೀಕ್ಷೆ ಪ್ರಕಟವಾಗಿದ್ದು, ಮೂರನೇ 2ರಷ್ಟು ಬಹುಮತದೊಂದಿಗೆ ಎನ್‌ಡಿಎ ಭರ್ಜರಿ ಜಯಗಳಿಸಲಿದೆ ಎಂದು ಭವಿಷ್ಯ ಹೇಳಿದೆ.

 ಪಟನಾ: ಬಿಹಾರದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಐಎಎನ್‌ಎಸ್-ಮ್ಯಾಟ್ರಿಜ್‌ ಚುನಾವಣಾಪೂರ್ವ ಸಮೀಕ್ಷೆ ಪ್ರಕಟವಾಗಿದ್ದು, ಮೂರನೇ 2ರಷ್ಟು ಬಹುಮತದೊಂದಿಗೆ ಎನ್‌ಡಿಎ ಭರ್ಜರಿ ಜಯಗಳಿಸಲಿದೆ ಎಂದು ಭವಿಷ್ಯ ಹೇಳಿದೆ.ಬಿಹಾರದಲ್ಲಿ 243 ಕ್ಷೇತ್ರಗಳಿದ್ದು, ಬಹುಮತಕ್ಕೆ 122 ಸೀಟು ಬೇಕು. ಆದರೆ ಎನ್‌ಡಿಎ 153-164 ಸ್ಥಾನದಲ್ಲಿ ಗೆಲ್ಲಲಿದೆ. ಕಾಂಗ್ರೆಸ್‌-ಆರ್‌ಜೆಡಿ-ಎಡಪಕ್ಷಗಳ ಕೂಟವಾಗಿರುವ ಮಹಾಮೈತ್ರಿಕೂಟ ಕೇವಲ 76-87 ಸ್ಥಾನಗಳಲ್ಲಿ ಜಯಿಸಲಿದೆ ಎಂದು ಸಮೀಕ್ಷೆ ವಿವರಿಸಿದೆ.

ಪಕ್ಷವಾರು ಹೋಲಿಸಿದರೆ, ಬಿಜೆಪಿ 83-87 ಹಾಗೂ ಜೆಡಿಯು 61-65 ಸ್ಥಾನಗಳಲ್ಲಿ ಗೆಲ್ಲಲಿವೆ. ವಿಪಕ್ಷಗಳ ಪೈಕಿ ಆರ್‌ಜೆಡಿ 62-66 ಸ್ಥಾನ ಗೆಲ್ಲಲಿದ್ದರೆ, ಕಾಂಗ್ರೆಸ್ ಕೇವಲ 7-9 ಹಾಗೂ ಇತರರು 6-10 ಸ್ಥಾನ ಗೆದ್ದು ಕಳಪೆ ಫಲಿತಾಂಶ ಪ್ರದರ್ಶಿಸಲಿದ್ದಾರೆ ಎಂದು ಅದು ಹೇಳಿದೆ.

ಹೊಸ ಪಕ್ಷವಾದ ಪ್ರಶಾಂತ್‌ ಕಿಶೋರ್‌ ಅವರ ಜನ್‌ ಸುರಾಜ್‌ ಹಾಗೂ ಕಳೆದ ಬಾರಿ ಕಾಂಗ್ರೆಸ್‌ ಮತ ಕಿತ್ತಿದ್ದ ಎಐಎಂಐಎಂ ಯಾವುದೇ ಪ್ರಭಾವ ಬೀರಲ್ಲ ಎಂದು ಅದು ವಿವರಿಸಿದೆ.

ಮತಗಳಿಕೆಯಲ್ಲಿ ಆರ್‌ಜೆಡಿ ನಂ.1:

ಸ್ಥಾನ ಗಳಿಕೆಯಲ್ಲಿ ಆರ್‌ಜೆಡಿ ಹಿಂದೆ ಬಿದ್ದರೂ ಶೇ.22 ಮತ ಗಳಿಸಿ ಮೊದಲ ಸ್ಥಾನ ಪಡೆಯಲಿದೆ. ಬಿಜೆಪಿ ಶೇ.21, ಜೆಡಿಯು ಶೇ.18 ಮತ ಪಡೆಯಲಿದೆ ಎಂದು ಸಮೀಕ್ಷೆ ನುಡಿದಿದೆ.

ರಾಜ್ಯಾದ್ಯಂತ 73,387 ಮತದಾರರನ್ನು ಅ.10ರಿಂದ ನ.3ರವರೆಗೆ ಸಂದರ್ಶಿಸಿ ಸಮೀಕ್ಷೆ ಸಿದ್ಧಪಡಿಸಲಾಗಿದೆ ಎಂದು ಐಎಎನ್‌ಎಸ್-ಮ್ಯಾಟ್ರಿಜ್‌ ಹೇಳಿವೆ.

ನಿತೀಶ್ ನೆಚ್ಚಿನ ಸಿಎಂ ಅಭ್ಯರ್ಥಿ:

ಪಟನಾ: ಹಾಲಿ ಸಿಎಂ ನಿತೀಶ್‌ ಕುಮಾರ್‌ ಮತ್ತೆ ಮುಖ್ಯಮಂತ್ರಿ ಆಗುತ್ತಾರಾ ಎಂಬ ಸಂದೇಹಗಳ ನಡುವೆಯೇ ಬಿಹಾರದ ಶೇ.46 ಜನರು, ‘ನಿತೀಶ್‌ ನಮ್ಮ ನೆಚ್ಚಿನ ಸಿಎಂ ಅಭ್ಯರ್ಥಿ’ ಎಂದು ಐಎಎನ್‌ಎಸ್‌-ಮ್ಯಾಟ್ರಿಜ್‌ ಸಮೀಕ್ಷೆಯಲ್ಲಿ ಹೇಳಿದ್ದಾರೆ. ಸಿಎಂ ಆಗಬೇಕು ಎಂದು ಅತಿಯಾಗಿ ಶ್ರಮ ಪಡುತ್ತಿರುವ ಆರ್‌ಜೆಡಿ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ ಪರ ಕೇವಲ ಶೇ.15 ಜನರು ಒಲವು ತೋರಿದ್ದಾರೆ.-

ಬಿಹಾರ

ಒಟ್ಟು ಕ್ಷೇತ್ರ 243/ಬಹುಮತ 122

ಎನ್‌ಡಿಎ 153-164

ಗಟಬಂಧನ 76-87

63% ಜನರ ಮೇಲೆ

ಮೋದಿ ಪ್ರಭಾವ!

ಪಟನಾ: ಬಿಹಾರದೆಲ್ಲೆಡೆ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಭಾವಿತರಾಗಿ ಮತ ಹಾಕುತ್ತಿದ್ದೇವೆ ಎಂದವರ ಸಂಖ್ಯೆ ಶೇ.63 ಎಂದು ಐಎಎನ್‌ಎಸ್‌-ಮ್ಯಾಟ್ರಿಜ್‌ ಸಮೀಕ್ಷೆ ಹೇಳಿದೆ.

PREV
Read more Articles on

Recommended Stories

ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ರಹಸ್ಯ ಅಣು ಪರೀಕ್ಷೆ : ಟ್ರಂಪ್‌ ಹೇಳಿಕೆಗೆ ಪಾಕ್‌ ನಕಾರ